ಸೈನ್ ಅಪ್ ಮಾಡಿಕೊಳ್ಳಲು ಇರುವ ಹಂತಗಳು ಯಾವುವು?

Uber ನೊಂದಿಗೆ ಚಾಲನೆ ಮಾಡಲು ಸೈನ್ ಅಪ್ ಮಾಡುವುದು ಸುಲಭ. ನಿಮ್ಮ ಬಗ್ಗೆ ಮತ್ತು ನೀವು Uber ಪ್ಲಾಟ್‌ಫಾರ್ಮ್‌ನಲ್ಲಿ ಚಲಾಯಿಸಲು ಬಯಸುವ ವಾಹನದ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ನೀವು ಪ್ರಾರಂಭಿಸುತ್ತೀರಿ. ಸೈನ್ ಅಪ್ ಮಾಡಲು ಉತ್ತಮ ಮಾರ್ಗವೆಂದರೆ ಡ್ರೈವರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದಾಗಿದೆ. ನೀವು drivers.uber.com ನಲ್ಲಿ ಸಹ ಸೈನ್ ಅಪ್ ಮಾಡಬಹುದು.

ನಾವು ಪರಿಶೀಲಿಸಬೇಕಾಗಿದೆ:

  • ನಿಮ್ಮ ಚಾಲಕನ ಪರವಾನಗಿ ಸಂಖ್ಯೆ
  • ನಿಮ್ಮ ವಾಹನ ನೋಂದಣಿ
  • ನಿಮ್ಮ ನಗರದಲ್ಲಿ ಚಾಲಕರ ತಪಾಸಣೆ‌ಗಾಗಿ ಹೆಚ್ಚುವರಿ ಮಾಹಿತಿಗಳು ಮತ್ತು ದಾಖಲೆಗಳು

ನಿಮ್ಮ ಅಗತ್ಯ ದಾಖಲೆಗಳನ್ನು ನಾವು ಅನುಮೋದಿಸಿದ ನಂತರ, ನೀವು ಆ್ಯಪ್‌ಗೆ ಸಂಪೂರ್ಣ ಪ್ರವೇಶಾವಕಾವನ್ನು ಪಡೆಯುತ್ತೀರಿ ಮತ್ತು ಸವಾರಿ ವಿನಂತಿಗಳನ್ನು ಸ್ವೀಕರಿಸಲು ಆನ್‌ಲೈನ್‌ಗೆ ಹೋಗಬಹುದು ಮತ್ತು ಗಳಿಸಲು ಪ್ರಾರಂಭಿಸಬಹುದು.