ರೇಟಿಂಗ್ ಸುಧಾರಿಸುವುದು ಹೇಗೆ

ಟ್ರಿಪ್ ಸಮಯದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಕೈ ಮೀರಿದ ಸನ್ನಿವೇಶಗಳು ನೀವು ನಿಮ್ಮ ಸವಾರರಿಂದ ಪಡೆಯುವ ರೇಟಿಂಗ್ ಅನ್ನು ಬಾಧಿಸಬಹುದು.

ಇದು ಆತಂಕಕ್ಕೆ ಕಾರಣವಾಗಬಹುದುಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ಒಟ್ಟಾರೆ ರೇಟಿಂಗ್ ನಿಮ್ಮ ಇತ್ತೀಚಿನ 500 ಟ್ರಿಪ್‌ಗಳ ಸರಾಸರಿಯನ್ನು ಅವಲಂಬಿಸಿರುವುದರಿಂದ, ಒಂದು ಟ್ರಿಪ್ ರೇಟಿಂಗ್ ನಿಮ್ಮ ಸರಾಸರಿ ರೇಟಿಂಗ್ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುವುದಿಲ್ಲ.

ಇದರ ಜೊತೆಗೆ, ಸವಾರರು ನಕಾರಾತ್ಮಕ ರೇಟಿಂಗ್ ನೀಡಿ, ನಿಮ್ಮ ಕಾರ್ಯಕ್ಷಮತೆಗೆ ಸಂಬಂಧಿಸಿಲ್ಲದ ಟ್ರಿಪ್ ಸಮಸ್ಯೆಗಳನ್ನು ಆಯ್ಕೆಮಾಡಿದರೆ (ಉದಾ, ತುಂಬಾ ಪಿಕಪ್‌ಗಳು, ದರ, ಆ್ಯಪ್), ನಿಮ್ಮ ಒಟ್ಟಾರೆ ರೇಟಿಂಗ್‌ ಮೇಲೆ ಅದು ಪರಿಣಾಮ ಬೀರುವುದಿಲ್ಲ.

5-ಸ್ಟಾರ್ ಚಾಲಕರಿಂದ ಸಲಹೆಗಳು

ಇವುಗಳನ್ನು ಮಾಡಿದಾಗ ಸವಾರರು ಮೆಚ್ಚುತ್ತಾರೆ ಎಂದು 5-ಸ್ಟಾರ್ ಚಾಲಕರುಗಳು ವರದಿ ಮಾಡಿರುತ್ತಾರೆ:

  • ವಾಹನವನ್ನು ಸ್ವಚ್ಛ, ಅತ್ಯುತ್ತಮ ನಿರ್ವಹಣೆಯೊಂದಿಗೆ ಹಾಗೂ ದುರ್ಗಂಧ-ಮುಕ್ತವಾಗಿ ಇರಿಸಿದಾಗ
  • ತಲುಪಬೇಕಾದ ಸ್ಥಳಕ್ಕೆ ಅವರ ಆದ್ಯತೆಯ ಮಾರ್ಗದ ಬಗ್ಗೆ ಸವಾರರನ್ನು ಕೇಳಿದಾಗ
  • ಮಾತುಕತೆಯಲ್ಲಿ ವಿನಯ, ವೃತ್ತಿಪರತೆ ಮತ್ತು ಗೌರವವನ್ನು ತೋರಿದಾಗ
  • ವೃತ್ತಿಪರವಾಗಿ ಬಟ್ಟೆ ಧರಿಸಿದಾಗ
  • ಸವಾರರಿಗೆ ವಾಹನದ ಬಾಗಿಲು ತೆರೆದಾಗ
  • ನೀರಿನ ಬಾಟಲಿ, ತಿನಿಸು, ಗಮ್, ಮಿಂಟ್ ಮತ್ತು ಸೆಲ್ ಫೋನ್ ಚಾರ್ಜರ್‌ಗಳನ್ನು ನೀಡಿದಾಗ
  • ಸುರಕ್ಷಿತವಾಗಿ ಮಾಡಬಹುದಾಗಿದ್ದಲ್ಲಿ, ಲಗೇಜ್ ಮತ್ತು ಬ್ಯಾಗ್‌ಗಳನ್ನು ಇರಿಸಲು ಸಹಾಯ ಮಾಡಿದಾಗ

ಸವಾರರಿಂದ ನಿಮ್ಮ ಕುರಿತು ಸಾಪ್ತಾಹಿಕ ವಿಮರ್ಶೆ ಹಂಚಿಕೊಳ್ಳುವಿಕೆಗಳು ರೇಟಿಂಗ್‌ಗಳು ಮತ್ತು ಅನಿಸಿಕೆಗಳು. ಇದು ನೀವು ಸೃಷ್ಟಿಸುತ್ತಿರುವ ಟ್ರಿಪ್ ಅನುಭವಗಳ ಒಳನೋಟವನ್ನು ಒದಗಿಸುತ್ತದೆ.