ಪ್ರಾಣಿಯು ಸೇವಾ ಪ್ರಾಣಿಯೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನೀವು ಸವಾರನಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು:
1. ಅಂಗವೈಕಲ್ಯದ ಕಾರಣಕ್ಕೆ ಪ್ರಾಣಿಯ ಅಗತ್ಯವಿದೆಯೇ?
2. ಪ್ರಾಣಿಗೆ ಯಾವ ಕೆಲಸ ಅಥವಾ ಕಾರ್ಯವನ್ನು ನಿರ್ವಹಿಸಲು ತರಬೇತಿ ನೀಡಲಾಗಿದೆ?
ಒಬ್ಬ ಸವಾರ ತನ್ನ ಜತೆ ಪ್ರಯಾಣಿಸುತ್ತಿರುವ ಪ್ರಾಣಿ ತನ್ನ ಭಾವನಾತ್ಮಕ ಬೆಂಬಲ ಪ್ರಾಣಿ ಎಂದು ಹೇಳಿದರೆ ಅಥವಾ ಅಂಗವೈಕಲ್ಯದಿಂದಾಗಿ ಪ್ರಾಣಿ ಅಗತ್ಯವಿಲ್ಲ ಎಂದು ಅಥವಾ ಅಂಗವೈಕಲ್ಯಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಅದು ತರಬೇತಿ ಪಡೆದಿಲ್ಲ ಎಂದು ಹೇಳಿದರೆ, ನೀವು ನಿಮ್ಮ ಸ್ವಂತ ವಿವೇಚನೆಯ ಆಧಾರದಲ್ಲಿ ಟ್ರಿಪ್ ಅನ್ನು ಪೂರ್ಣಗೊಳಿಸಬಹುದು ಅಥವಾ ನಿರಾಕರಿಸಬಹುದು.