ಡೆಲಿವರಿ ರೇಟಿಂಗ್‌ಗಳು ಏಕೆ ಮುಖ್ಯವಾಗಿರುತ್ತವೆ?

ರೇಟಿಂಗ್‌ಗಳು ಗ್ರಾಹಕರ ತೃಪ್ತಿಯನ್ನು ಪ್ರತಿಬಿಂಬಿಸುತ್ತವೆ. ಒಂದು ವೇಳೆ ಗ್ರಾಹಕರು ತಮ್ಮ ಅನುಭವದಿಂದ ಸಂತೋಷಗೊಂಡಿದ್ದಲ್ಲಿ, ಅವರು ಆ್ಯಪ್ ಬಳಕೆಯನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಒಂದು ವೇಳೆ ನಿಮ್ಮ ರೇಟಿಂಗ್ ನಿಮ್ಮ ನಗರದಲ್ಲಿನ ಕನಿಷ್ಠ ಡೆಲಿವರಿ ರೇಟಿಂಗ್ ಅನ್ನು ಸಮೀಪಿಸಲು ಪ್ರಾರಂಭಿಸಿದಲ್ಲಿ, ನಿಮಗೆ ಅದನ್ನು ನಾವು ತಿಳಿಸುತ್ತೇವೆ. ಒಂದು ವೇಳೆ ನಿಮ್ಮ ಡೆಲಿವರಿ ರೇಟಿಂಗ್ ನಿಮ್ಮ ನಗರದಲ್ಲಿನ ಕನಿಷ್ಠ ಮಟ್ಟಕ್ಕಿಂತ ನಿರಂತರವಾಗಿ ಕಡಿಮೆಯಾಗುತ್ತಿದ್ದಲ್ಲಿ, ನೀವು ಪ್ಲಾಟ್‍ಫಾರ್ಮ್‍ಗೆ ಪ್ರವೇಶವನ್ನು ಕಳೆದುಕೊಳ್ಳುವ ಸ್ಸಾಧ್ಯತೆ ಇರುತ್ತದೆ.