Upcoming updates to the Uber Eats agreements in Japan

1 ಡಿಸೆಂಬರ್ 2019 ರಿಂದ, ನಾವು ನಮ್ಮ Uber Eats ವ್ಯಾಪಾರವನ್ನು ಸ್ಥಳೀಕರಿಸುತ್ತಿದ್ದೇವೆ ಅದು ನಿಮ್ಮ Uber Eats ಒಪ್ಪಂದದಲ್ಲಿ ನವೀಕರಣಕ್ಕೆ ಕಾರಣವಾಗುತ್ತದೆ. ಒಂದು ಸ್ಥಳೀಯ ಕಂಪನಿ, Uber Portier Japan, Inc., ರೆಸ್ಟೋರೆಂಟ್‌ಗಳು ಮತ್ತು ಗ್ರಾಹಕರೊಂದಿಗೆ ನಿಮ್ಮನ್ನು ಸಂಪರ್ಕಿಸುವ ಲೀಡ್ ಜನರೇಷನ್ ಸೇವೆಗಳನ್ನು ಒದಗಿಸುತ್ತದೆ. Uber Portier BV ನಿಮಗೆ Uber Eats ಆ್ಯಪ್‌ಗಳಿಗೆ ಪರವಾನಗಿ ನೀಡುವುದನ್ನು ಮುಂದುವರಿಸುತ್ತದೆ. ಸೇವೆಗಳು ಮತ್ತು Uber Eats ಆ್ಯಪ್‌ಗಳು ಮೊದಲಿನ ರೀತಿಯಲ್ಲಿಯೇ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ.

ಈ ನವೀಕರಣದ ಕುರಿತು ನೀವು ಪ್ರಶ್ನೆಗಳನ್ನು ಹೊಂದಿರಬಹುದು ಹಾಗೂ ಇದು ವ್ಯಾವಹಾರಿಕವಾಗಿ ನಿಮ್ಮ ಪರಿಸ್ಥಿತಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಅರ್ಥವಾಗುವಂತಹದ್ದಾಗಿದೆ. ನೀವು ಹೊಂದಿರುವ ಯಾವುದೇ ಪ್ರಶ್ನೆಗಳ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಒದಗಿಸಲು ನಾವು ಕೆಳಗೆ ಪದೇ ಪದೇ ಕೇಳುವ ಪ್ರಶ್ನೆಗಳನ್ನು ಸೇರಿಸಿದ್ದೇವೆ. ನಿಮ್ಮ ಪ್ರಶ್ನೆಗೆ ಉತ್ತರವನ್ನು ನೀವು ವೀಕ್ಷಿಸದಿದ್ದಲ್ಲಿ, ದಯವಿಟ್ಟು ಕೆಳಗಿನ ನಮೂನೆಯ ಮೂಲಕ ನಮ್ಮನ್ನು ಸಂಪರ್ಕಿಸಿ.

ನನ್ನ ಗಳಿಕೆಯ ಮೇಲೆ ಪರಿಣಾಮ ಆಗುತ್ತದೆಯೇ?
ನಮ್ಮ Uber Eats ವ್ಯಾಪಾರದ ಸ್ಥಳೀಕರಣವು ನೀವು ರೆಸ್ಟೋರೆಂಟ್ ಪಾರ್ಟ್‌ನರ್‌ಗೆ ವಿಧಿಸುವ ಯಾವುದೇ ಶುಲ್ಕದ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಈ ಬದಲಾವಣೆಯಿಂದ ನಿಮ್ಮ ಗಳಿಕೆಗಳ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.

ನಾನು ಈಗಾಗಲೇ JCT ತೆರಿಗೆದಾರನಾಗಿದ್ದಲ್ಲಿ, Uber ಸೇವಾ ಶುಲ್ಕದ ಮೇಲೆ ಉಂಟಾದ JCT ಮೊತ್ತವನ್ನು ನಾನು ಹಿಂಪಡೆಯಬಹುದೇ?
ಹೌದು, ನಿಮ್ಮ JCT ರಿಟರ್ನ್‌ನಲ್ಲಿ ನೀವು JCT ಅನ್ನು ಇನ್‌ಪುಟ್ ಕ್ರೆಡಿಟ್ ಆಗಿ ಕ್ಲೈಮ್ ಮಾಡಲು ಸಾಧ್ಯವಾಗಬಹುದು. ವಿವರಗಳಿಗಾಗಿ, ದಯವಿಟ್ಟು ನಿಮ್ಮ ಸ್ಥಳೀಯ ತೆರಿಗೆ ಕಚೇರಿಯನ್ನು ಸಂಪರ್ಕಿಸಿ.

ನಾನು Uber Eats ಆ್ಯಪ್‌ ಅನ್ನು ಹೇಗೆ ಬಳಸುತ್ತೇನೆ ಎನ್ನುವುದಕ್ಕೆ ಈ ನವೀಕರಣವು ಯಾವ ರೀತಿಯಲ್ಲಿ ಸಂಬಂಧ ಹೊಂದಿದೆ?
ನೀವು ಡೆಲಿವರಿ ಮಾಡುವ ಸಲುವಾಗಿ Uber Eats ಆ್ಯಪ್‌ ಅನ್ನು ಬಳಸುವ ವಿಧಾನದ ಮೇಲೆ ಈ ನವೀಕರಣವು ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ.

ಪರಿಷ್ಕೃತ Uber Eats ಒಪ್ಪಂದದ ನಿಯಮಗಳನ್ನು ನಾನು ಒಪ್ಪದಿದ್ದಲ್ಲಿ ಏನು ಮಾಡಬೇಕು?
ನೀವು ಆಯ್ಕೆಯಿಂದ ಹೊರಗುಳಿಯಲು ಮತ್ತು Uber Eats ಒಪ್ಪಂದವನ್ನು ಕೊನೆಗೊಳಿಸಲು ಬಯಸಿದಲ್ಲಿ, ಖಾತೆಯನ್ನು ನಿಷ್ಕ್ರಿಯಗೊಳಿಸಲು ದಯವಿಟ್ಟು ಸಂಪರ್ಕಿಸಿ

ನನ್ನ ತೆರಿಗೆ ಬಾಧ್ಯತೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ಎಲ್ಲಿ ಪಡೆಯಬಹುದು?
ನೀವು ತೆರಿಗೆಯ ಬಗ್ಗೆ ಸಲಹೆಯನ್ನು ಬಯಸಿದಲ್ಲಿ, ಸಹಾಯಕ್ಕಾಗಿ ನೋಂದಾಯಿತ ಅಕೌಂಟೆಂಟ್ ಅಥವಾ ತೆರಿಗೆ ವೃತ್ತಿಪರರನ್ನು ಸಂಪರ್ಕಿಸಿ.