ಆನ್‌ಲೈನ್‌ನಲ್ಲಿರುವಾಗ ನಾನು ಇತರ ಆ್ಯಪ್‌ಗಳನ್ನು ಬಳಸಬಹುದೇ ಅಥವಾ ವೈಯಕ್ತಿಕ ಕರೆಗಳನ್ನು ಸ್ವೀಕರಿಸಬಹುದೇ?

ನೀವು ಆನ್‌ಲೈನ್‌ ಹೋಗಿ, ಸವಾರರ ಟ್ರಿಪ್‌ ವಿನಂತಿಯನ್ನು ಸಮ್ಮತಿಸುವುದಕ್ಕೂ ಮೊದಲು ಇನ್ನೊಂದು ಆಪ್‌ಗೆ ಬದಲಾದರೆ, ನೀವು ವಿನಂತಿಗಳನ್ನು ಸ್ವೀಕರಿಸಲು ಬಯಸದಿದ್ದರೆ ಆಫ್‌ಲೈನ್‌ಗೆ ಹೋಗಿ ಎಂಬುದಾಗಿ ಪ್ರತಿ 3 ನಿಮಿಷಗಳಿಗೆ ನಿಮಗೆ ಜ್ಞಾಪಿಸುವ ಪಾಪ್‌ ಅಪ್‌ ನೊಟಿಫಿಕೇಶನ್‌ ಪ್ರದರ್ಶನವಾಗುತ್ತದೆ. ನೀವು ಟ್ರಿಪ್‌ನಲ್ಲಿದ್ದಾಗ, ನಿಮ್ಮ ಆಪ್‌ ಈ ಪಾಪ್‌ ಅಪ್‌ಗಳನ್ನು ಕಳುಹಿಸುವುದಿಲ್ಲ.

ನೀವು ಇತರ ಆಪ್‌ಗಳನ್ನು ಅಥವಾ ಫೋನ್ ಅನ್ನು ಬಳಸುವಾಗ ನಿಮ್ಮ Uber ಆಪ್ ಚಾಲನೆಯಲ್ಲಿ ಮುಂದುವರಿಯುತ್ತದೆ. ನಿಖರ ದರಗಳಿಗೆ ನಿಮ್ಮ ಟ್ರಿಪ್‌ಗಳನ್ನು ರೆಕಾರ್ಡ್‌ ಮಾಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಲು ಜಿಪಿಎಸ್‌ ಮಾಹಿತಿಯನ್ನು ನಿರಂತರವಾಗಿ ಸಂಗ್ರಹಿಸಲಾಗುತ್ತದೆ.

ಫೋನ್‌ ಬಳಕೆ ಬಗ್ಗೆ ಸ್ಥಳೀಯ ನಿಯಮಗಳನ್ನು ಅನುಸರಿಸಿ. ಡ್ರೈವಿಂಗ್‌ ಮಾಡುವಾಗ ಫೋನ್‌ನಲ್ಲಿ ಮಾತನಾಡುವುದು ಗಮನ ಬೇರೆಡೆ ಹರಿಸುತ್ತದೆ ಮತ್ತು ಅಪಾಯಕಾರಿಯಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಕೆಲವು ಸವಾರರು ಇದನ್ನು ಒರಟು ವರ್ತನೆ ಮತ್ತು ಅಸುರಕ್ಷಿತ ಎಂದು ಭಾವಿಸುತ್ತಾರೆ.