ನಿಮ್ಮ ರೆಫರಲ್ ಕೋಡ್ ಬಳಸಿಕೊಂಡು ನಿಮ್ಮ ಸ್ನೇಹಿತರು ಸೈನ್ ಅಪ್ ಮಾಡಿದಾಗ, ಅವರ ರೆಫರಲ್ ಸ್ಟೇಟಸ್ ಹಾಗೂ ಅವರು ಪೂರ್ಣಗೊಳಿಸಿದ ಟ್ರಿಪ್‌ಗಳ ಸಂಖ್ಯೆಯನ್ನು ನೀವು ಟ್ರ್ಯಾಕ್ ಮಾಡಬಹುದು.
ನಿಮ್ಮ ಆಹ್ವಾನಗಳ ರೆಫರಲ್ ಸ್ಟೇಟಸ್ ವೀಕ್ಷಿಸಲು:
ನಿಮ್ಮ ಸ್ನೇಹಿತರು ಅವಶ್ಯವಿರುವ ಟ್ರಿಪ್‌ಗಳನ್ನು ಪೂರ್ತಿಗೊಳಿಸಿದ 48 ಗಂಟೆಗಳ ಒಳಗೆ ನಾವು ನಿಮಗೆ ಇಮೇಲ್ ಅಥವಾ ಪುಶ್ ನೋಟಿಫಿಕೇಶನ್/ಅಧಿಸೂಚನೆ ಮೂಲಕ ಅದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.
ನಿಮ್ಮ ರೆಫರಲ್ ರಿವಾರ್ಡ್‌ಗಳು ಒಂದರಿಂದ ಎರಡು ವಾರಗಳ ಒಳಗೆವಿವಿಧ ಅಥವಾ ಇತರ ಪಾವತಿಗಳು ವಿಭಾಗದಲ್ಲಿ ನಿಮ್ಮ ಸಾಪ್ತಾಹಿಕ ಪೇಮೆಂಟ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ನಿಮ್ಮ ಸ್ನೇಹಿತರು ಹೀಗೆ ಮಾಡಿದಲ್ಲಿ ರೆಫರಲ್ ರಿವಾರ್ಡ್ ನಿಮಗೆ ಕಾಣಿಸದೆ ಹೋಗಬಹುದು:
ರೆಫರಲ್ ತಪ್ಪಿಹೋಗಿದೆಯೇ ಅಥವಾ ನಿಮಗೆ ಸರಿಯಾದ ಮೊತ್ತ ಪಾವತಿಸಿಲ್ಲವೇ ಎನ್ನುವುದನ್ನು ಈ ಕೆಳಗೆ ನಮಗೆ ತಿಳಿಸಿ.
ರೆಫರಲ್ ಮೊತ್ತಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ ಹಾಗೂ ನೀವು ರೆಫರ್ ಮಾಡಿದ ಪಾರ್ಟ್‌ನರ್ ಅವರ ನಗರವನ್ನು ಕೂಡ ಅವಲಂಬಿಸಿರುತ್ತದೆ. ನೀವು ಪಡೆದ ರೆಫರಲ್ ಮೊತ್ತವು ನೀವು ಮೂಲತಃ ನಿರೀಕ್ಷಿಸಿದ ಮೊತ್ತಕ್ಕಿಂತ ಭಿನ್ನವಾಗಿದ್ದಲ್ಲಿ, ರೆಫರ್ ಮಾಡಿದ ಪಾರ್ಟ್‌ನರ್ ಸರಿಯಾದ ನಗರದಲ್ಲಿ ಸೈನ್ ಅಪ್ ಮಾಡಿದ್ದಾರೆಯೇ ಎನ್ನುವುದನ್ನು ದಯವಿಟ್ಟು ಪರಿಶೀಲಿಸಿ. ರೆಫರಲ್ ಆಫರ್ಗಳು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ ಹಾಗೂ ಆಫರ್ ನಿಯಮಗಳು ಬದಲಾಗಬಹುದು.