ಟ್ರಿಪ್ ಕೊನೆಗೊಳಿಸಲಾಗುತ್ತಿದೆ

ಸವಾರರ ಕೊನೆಯ ನಿಲ್ದಾಣಕ್ಕೆ ತಲುಪಿದಾಗ ಟ್ರಿಪ್ ಕೊನೆಗೊಳ್ಳುತ್ತದೆ. ನಿಮ್ಮ ವಾಹನ ಸಂಪೂರ್ಣ ನಿಂತಾಗ, “ಮುಗಿದಿದೆ” ಎಂಬುದನ್ನು ಸ್ವೈಪ್ ಮಾಡಿ. ನಿಮ್ಮ ಆ್ಯಪ್ ನಿಮ್ಮ ಟ್ರಿಪ್ ಅನುಭವವನ್ನು ಮೌಲ್ಯಾಂಕನ ಮಾಡುವಂತೆ ನಿಮಗೆ ಹೇಳುತ್ತದೆ.

ತಲುಪಬೇಕಾದ ಸ್ಥಳದ ವಿಳಾಸಕ್ಕೆ ಸಾಧ್ಯವಾದಷ್ಟು ಹತ್ತಿರ ನಿಲ್ಲಿಸಿ ಅಥವಾ ಪಾರ್ಕ್ ಮಾಡಿ.

ಹೆಚ್ಚಿನ ಸವಾರರು ನಿಖರವಾದ ತಲುಪಬೇಕಾದ ಸ್ಥಳವನ್ನು ಆ್ಯಪ್‍‌ನಲ್ಲಿ ಹಾಕಿರುತ್ತಾರೆ, ವಾಹನದಿಂದ ಎಲ್ಲಿ ನಿರ್ಗಮಿಸಲು ಬಯಸುತ್ತಾರೆ ಎಂಬುದನ್ನು ಸವಾರರ ಬಳಿ ಖಚಿತಪಡಿಸಿಕೊಳ್ಳುವುದು ಉತ್ತಮ ಅಭ್ಯಾಸ.

ರಸ್ತೆ ಮುಚ್ಚಿರುವ ಕಾರಣ ಅಥವಾ ಇತರ ತಡೆಗಳ ಕಾರಣ ಸವಾರರು ತಲುಪಬೇಕಾದ ಸ್ಥಳವನ್ನು ತಲುಪಲು ಕಷ್ಟವಾದರೆ, ಹತ್ತಿರ ಎಲ್ಲಿ ನಿಲ್ಲಿಸಬಹುದು ಎಂಬ ಆಯ್ಕೆಗಳ ಬಗ್ಗೆ ಮಾತನಾಡಿ.

ಸವಾರರಿಗೆ ವಾಹನ ದಟ್ಟಣೆ ಅಥವಾ ಇತರ ರಸ್ತೆಯ ತೊಂದರೆಗಳನ್ನು ತಪ್ಪಿಸಲು ಸಹಾಯ ಮಾಡಲು ಒಂದು ಕಣ್ಣಿಡಿ. ವಾಹನದ ಬಾಗಿಲು ತೆಗೆದಾಗ ಮತ್ತು ಲಗೇಜ್‌ ಇಳಿಸಲು ಸಹಕರಿಸಿದರೆ ತುಂಬಾ ಸವಾರರಿಗೆ ಅದು ಖುಷಿ ಕೊಡುತ್ತದೆ.