ಅನುಚಿತ ಬಳಕೆಯ ನೀತಿ

ಆ್ಯಪ್‌ನ ಅನುಚಿತ ಬಳಕೆಯನ್ನು ತಡೆಹಿಡಿಯಲು Uber ನ ಸ್ವಯಂಚಾಲಿತ ವ್ಯವಸ್ಥೆಗಳು ನಿರಂತರವಾಗಿ ಮೇಲ್ವಿಚಾರಣೆಯನ್ನು ನಡೆಸುತ್ತವೆ.

ಅನುಚಿತ ಬಳಕೆಯ ಉದಾಹರಣೆಗಳೆಂದರೆ, ನಿಮ್ಮನ್ನು ನೀವೇ ಸವಾರರಾಗಿ ವಿನಂತಿಸಿಕೊಳ್ಳುವುದು, ನಕಲಿ ಖಾತೆಗಳನ್ನು ರಚಿಸುವುದು, ಪೂರ್ಣಗೊಳಿಸುವ ಉದ್ದೇಶವಿಲ್ಲದೆ ಟ್ರಿಪ್‌ಗಳನ್ನು ಸ್ವೀಕರಿಸುವುದು, ಸುಳ್ಳು ಶುಲ್ಕಗಳನ್ನು ಅಥವಾ ದರಗಳನ್ನು ಕ್ಲೇಮ್ ಮಾಡುವುದು, ಟ್ರಿಪ್ ವಿವರಗಳನ್ನು ಬದಲಿಸುವುದು ಅಥವಾ ಅಮಾನ್ಯ ಸವಾರರೊಂದಿಗೆ ಉದ್ದೇಶಪೂರ್ವಕವಾಗಿ ಟ್ರಿಪ್‌ಗಳನ್ನು ಸ್ವೀಕರಿಸುವುದು ಅಥವಾ ಪೂರ್ಣಗೊಳಿಸುವುದು.

ಈ ಚಟುವಟಿಕೆಯು ನಮ್ಮ ಪ್ರಚಾರದ ನಿಯಮಗಳನ್ನು ಉಲ್ಲಂಘಿಸುತ್ತದೆ ಎನ್ನುವುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಖಾತೆಗೆ ಲಿಂಕ್ ಮಾಡಲಾದ ಅನುಚಿತ ಬಳಕೆಯನ್ನು ನಮ್ಮ ಸಿಸ್ಟಂಗಳು ಪತ್ತೆ ಮಾಡಿದಲ್ಲಿ, ಪ್ರೊಮೋಷನ್ನುಗಳಿಗೆ ಸಂಬಂಧಿಸಿದ ರಿವಾರ್ಡ್‌ಗಳು ನಿಮಗೆ ಲಭ್ಯವಾಗುವುದಿಲ್ಲ. ಈ ಚಟುವಟಿಕೆಯನ್ನು ನಮ್ಮೊಂದಿಗಿನ ನಿಮ್ಮ ನಿಯಮಗಳ ಉಲ್ಲಂಘನೆಯೆಂದೂ ಪರಿಗಣಿಸಬಹುದು ಹಾಗೂ ಖಾತೆಯನ್ನು ನಿಷ್ಕ್ರಿಯಗೊಳಿಸಲು ಕಾರಣವಾಗಬಹುದು.

ಈ ಸಂದೇಶವನ್ನು ಸ್ವೀಕರಿಸುವ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿದ್ದಲ್ಲಿ, ದಯವಿಟ್ಟು ನಮಗೆ ತಿಳಿಸಿ.