ತುರ್ತು ಸಂಪರ್ಕ ಮಾಹಿತಿ

ತುರ್ತು ಸಂಪರ್ಕ ಎಂದರೇನು?

ತುರ್ತು ಸಂಪರ್ಕವು ನೀವು ಆಯ್ಕೆ ಮಾಡಿದ ವ್ಯಕ್ತಿಯಾಗಿದ್ದು, ನಿರ್ದಿಷ್ಟ ಘಟನೆ ಸಂಭವಿಸಿದಲ್ಲಿ ಮತ್ತು Uber ನಿಮ್ಮನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದಿದ್ದರೆ ಇವರನ್ನು ಸಂಪರ್ಕಿಸಬಹುದು.

ಈ ವ್ಯಕ್ತಿಯನ್ನು Uber ಯಾವಾಗ ಸಂಪರ್ಕಿಸುತ್ತದೆ?

ತುರ್ತು ಪರಿಸ್ಥಿತಿಯಲ್ಲಿ, Uber ಮೊದಲು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತದೆ ಮತ್ತು ಅದು ಸಾಧ್ಯವಾಗದಿದ್ದರೆ, ನೀವು ಆಯ್ಕೆಮಾಡಿದ ತುರ್ತು ಸಂಪರ್ಕಗಳಿಗೆ ನಾವು ಕರೆ ಮಾಡುತ್ತೇವೆ.

ನಿಮ್ಮ ತುರ್ತು ಸಂಪರ್ಕಕ್ಕೆ ನಾವು ಕರೆ ಮಾಡಿದರೆ, ವಿಷಯ ಹೀಗೆ ಇರಬಹುದು:

  • ತನಿಖೆಯುಕ್ತ: ಏನಾಯಿತು ಮತ್ತು ಯಾರು ಭಾಗಿಯಾಗಿದ್ದಾರೆ ಎಂಬುದೂ ಸೇರಿದಂತೆ ತುರ್ತು ಘಟನೆಯ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುವ ಕುರಿತಾಗಿ ಸಹಾಯಕ್ಕಾಗಿ.
  • ಮಾಹಿತಿಯುಕ್ತ: ತುರ್ತು ಘಟನೆಯಲ್ಲಿ ಏನಾಯಿತು ಎಂಬುದರ ಕುರಿತು ಸಂಪರ್ಕಗಳಿಗೆ ತಿಳಿಸಲು.

ಇವುಗಳು ತುರ್ತು ಪರಿಸ್ಥಿತಿಗಳೆಂದು Uber ವ್ಯಾಖ್ಯಾನಿಸಿದ ಘಟನೆಗಳಾಗಿವೆ:

  • ಸಾವು
  • ಆಸ್ಪತ್ರೆಗೆ ದಾಖಲು
  • ಆಂಬ್ಯುಲೆನ್ಸ್‌ಗೆ ಕರೆ ಮಾಡಬೇಕಾಗಿರುವುದು
  • ಗಂಭೀರ ಗಾಯಗಳು

ಅವುಗಳು ಅತ್ಯಂತ ವಿರಳವಾಗಿದ್ದರೂ, ಟ್ರಿಪ್‌ ವೇಳೆ ಈ ಸನ್ನಿವೇಶಗಳು ಸಂಭವಿಸಬಹುದು.

ನೀವು ಯಾವುದೇ ಸಂಖ್ಯೆಯನ್ನು ತುರ್ತು ಸಂಪರ್ಕವಾಗಿ ಸೇರಿಸಬಹುದು. ಆದರೆ Uber 2 ಸಂಪರ್ಕಗಳನ್ನು ಮಾತ್ರ ಸಂಪರ್ಕಿಸಲು ಪ್ರಯತ್ನಿಸುತ್ತದೆ. ಕೊನೆಯದಾಗಿ ನೋಂದಣಿ ಮಾಡಿದ 2 ಸಂಪರ್ಕಕ್ಕೆ ಆದ್ಯತೆ ನೀಡುತ್ತದೆ.

ಒಂದು ವೇಳೆ ಮೊದಲ ತುರ್ತು ಸಂಪರ್ಕದೊಂದಿಗೆ ಸಂವಹನ ನಡೆಸಲು Uber ಯಶಸ್ವಿಯಾದರೆ, ನಾವು ಎರಡನೆಯದನ್ನು ಸಂಪರ್ಕಿಸುವುದಿಲ್ಲ.

ಮತ್ತು, ಗೌಪ್ಯತೆಯ ಬಗ್ಗೆ ಏನು?

ಬಳಕೆದಾರರ ಡೇಟಾ ಗೌಪ್ಯತೆಗೆ Uber ಬದ್ಧವಾಗಿದೆ. ನಿಮ್ಮ ಸಂಪರ್ಕಗಳಿಗೆ ತುರ್ತು ಸಂದರ್ಭದಲ್ಲಿ ಮಾತ್ರ ಕರೆ ಮಾಡಲಾಗುತ್ತದೆ. ನಿಮ್ಮ ಖಾತೆಯಿಂದ ನೀವು ತುರ್ತು ಸಂಪರ್ಕವನ್ನು ತೆಗೆದುಹಾಕಿದರೆ, Uber ಈ ಮಾಹಿತಿಯನ್ನು ತಕ್ಷಣ ಅಳಿಸುತ್ತದೆ.