'ನೆಟ್‌ವರ್ಕ್ ದೋಷ' ಎಂದು ನನ್ನ iPhone ತಿಳಿಸುತ್ತದೆ

ನಿಮ್ಮ ಆ್ಯಪ್‌ನಲ್ಲಿ ನೆಟ್‌ವರ್ಕ್ ದೋಷದ ಸಂದೇಶ ಕಂಡುಬಂದಲ್ಲಿ, ಕೆಳಗಿನ ಕ್ರಮಗಳನ್ನು ಅನುಸರಿಸಿ:

1. ಸೆಟ್ಟಿಂಗ್‌ಗಳು > ವೈಫೈನಲ್ಲಿ ವೈಫೈ ಅನ್ನು ಆಫ್ ಮಾಡಿ.
2. ಸೆಟ್ಟಿಂಗ್‌ಗಳು > ಏರೋಪ್ಲೇನ್ ಮೋಡ್ ನಲ್ಲಿ ಏರೋಪ್ಲೇನ್ ಮೋಡ್ ಆಫ್ ಮಾಡಿ.
3. ಸೆಟ್ಟಿಂಗ್‌ಗಳು > ಸೆಲ್ಯುಲಾರ್ > ಸೆಲ್ಯುಲಾರ್ ಡೇಟಾದಲ್ಲಿ ಸೆಲ್ಯುಲಾರ್ ಡೇಟಾವನ್ನು ಆನ್ ಮಾಡಿ.
4. ಸೆಲ್ಯುಲಾರ್ ಡೇಟಾದಲ್ಲಿ > ಸೆಲ್ಯುಲಾರ್ ಡೇಟಾವನ್ನು ಬಳಸಿ, Uber ಪಾರ್ಟ್‌ನರ್ ಆ್ಯಪ್ ಅನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ಪರಿಶೀಲಿಸಿ.

ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಮತ್ತೆ ಸಂಪರ್ಕಿಸಲು ಪ್ರಯತ್ನಿಸಿ.

ನೀವು ಇನ್ನೂ ನೆಟ್‌ವರ್ಕ್ ದೋಷ ಸಂದೇಶವನ್ನು ಸ್ವೀಕರಿಸುತ್ತಿದ್ದಲ್ಲಿ, ನೀವು ಸೆಟ್ಟಿಂಗ್‌ಗಳು > ಜನರಲ್ > ರೀಸೆಟ್ > ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಮರುಹೊಂದಿಸಿಗೆ ಸಹ ಹೋಗಬಹುದು. ಇದು ನಿಮ್ಮ ಫೋನ್‌ನಿಂದ ಸಂಗ್ರಹಿಸಲಾದ ಎಲ್ಲಾ ಪಾಸ್‌ವರ್ಡ್‌ಗಳನ್ನು ಅಳಿಸಬಹುದು ಎನ್ನುವುದನ್ನು ಗಮನಿಸಿ.