ಚಾಲಕ ಆ್ಯಪ್ ಕೆಲವೊಮ್ಮೆ ಪಿಕಪ್ ಅಥವಾ ಡ್ರಾಪ್ ಪಾಯಿಂಟ್ ಸ್ಥಳದ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡುತ್ತದೆ ಮತ್ತು ಇದು ನಿಮಗೆ ನಿರಾಶಾದಾಯಕ ಅನುಭವವನ್ನು ನೀಡುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆ್ಯಪ್ನಲ್ಲಿನ ನ್ಯಾವಿಗೇಷನ್ನ ನಿಖರತೆಯನ್ನು ಸುಧಾರಿಸಲು ನಮ್ಮಲ್ಲಿ ಎಂಜಿನಿಯರ್ಗಳ ತಂಡವಿದೆ. ನಿರ್ದಿಷ್ಟ ಮತ್ತು ನಿಖರವಾದ ವಿವರಗಳನ್ನು ಒದಗಿಸಿದಲ್ಲಿ, ಈ ತಂಡವು ನೀವು ಅನುಭವಿಸಿದ ಸಮಸ್ಯೆಯನ್ನು ಪರಿಹರಿಸಬಹುದು.
ಆ್ಯಪ್ನಲ್ಲಿ ವಿವರಿಸಿದ ಪಿಕಪ್ ಅಥವಾ ಡ್ರಾಪ್ ಆಫ್ ಪಾಯಿಂಟ್ ಸ್ಥಳದ ಬಗ್ಗೆ ನಿಮಗೆ ಸಮಸ್ಯೆ ಇದ್ದಲ್ಲಿ, ದಯವಿಟ್ಟು ಕೆಳಗಿನ ನಮೂನೆಯನ್ನು ಭರ್ತಿ ಮಾಡಿ. ನಿಮ್ಮ ಪ್ರತಿಕ್ರಿಯೆಯನ್ನು ಪರಿಶೀಲನೆಗಾಗಿ ವಿಶೇಷ ತಂಡಕ್ಕೆ ಸಲ್ಲಿಸಲಾಗುತ್ತದೆ. ದೋಷವನ್ನು ಸರಿಪಡಿಸಲು ನಮ್ಮ ತಂಡಕ್ಕೆ ಸಹಾಯ ಮಾದುವ ಸಲುವಾಗಿ, ದಯವಿಟ್ಟು ಸ್ಪಷ್ಟವಾದ ಪ್ರತಿಕ್ರಿಯೆ ನೀಡಲು ಕೆಳಗಿನ ಸೂಚನೆಗಳನ್ನು ಅನುಸರಿಸಿ.
ಕೆಳಗೆ ಪಟ್ಟಿ ಮಾಡಲಾದ ಪ್ರಾಂಪ್ಟ್ಗಳು ನೀವು ಅನುಭವಿಸಿದ ಸಮಸ್ಯೆಯನ್ನು ವಿವರಿಸದಿದ್ದಲ್ಲಿ, ಬೇರೆ ಲೇಖನವನ್ನು ಹುಡುಕಲು ಸಹಾಯ ಕೇಂದ್ರಕ್ಕೆ ಹಿಂತಿರುಗಿ, ಅಥವಾ , ಆ್ಯಪ್ನ ಸಹಾಯ ವಿಭಾಗದಲ್ಲಿರುವ ನಮ್ಮ ಯಾವುದೇ ಸಮಯದಲ್ಲಿ ಪ್ರತಿಕ್ರಿಯೆನಮೂನೆಯ ಮೂಲಕ ನಿಮ್ಮ ಅಭಿಪ್ರಾಯವನ್ನು ಸಲ್ಲಿಸಿ.
ಮೊದಲಿಗೆ, ನೀವು ಅನುಭವಿಸಿದ ಸಮಸ್ಯೆಯನ್ನು ಸರಿಯಾಗಿ ಪ್ರತಿಬಿಂಬಿಸುವ ಕೆಳಗಿನ ವರ್ಗವನ್ನು ಆಯ್ಕೆ ಮಾಡಿ (ದಯವಿಟ್ಟು ಒಂದನ್ನು ಆರಿಸಿ). ನಂತರ, ಹೆಚ್ಚುವರಿ ವಿವರಗಳನ್ನು ಒದಗಿಸಲು ಪ್ರಶ್ನೆಗಳಿಗೆ ಉತ್ತರಿಸಿ. ನಿಮಗೆ ಕೆಳಗಿನ ಮಾಹಿತಿಯನ್ನು ನೀಡಲು ಸಾಧ್ಯವಾಗದಿದ್ದಲ್ಲಿ, ನಮ್ಮ ತಂಡವು ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸುತ್ತದೆ ಆದರೆ ಮ್ಯಾಪಿಂಗ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿರಬಹುದು.
This website uses third-party cookies to serve you relevant ads and provide personalisation by remembering your location. You may opt out from these cookies by selecting the "Opt out" button below. If you have an Uber account, you may opt out of the "sale" or "sharing" of your data here.