ನನ್ನ ದಾಖಲೆಗಳನ್ನು ಯಾವಾಗ ಅನುಮೋದಿಸಲಾಗುತ್ತದೆ?

ಅಪ್‌ಲೋಡ್ ಮಾಡಲಾದ ದಾಖಲೆಗಳನ್ನು ಪರಿಶೀಲಿಸಲು ಸಾಮಾನ್ಯವಾಗಿ 1-5 ದಿನಗಳು ಬೇಕಾಗುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು, ದಾಖಲೆಗಳನ್ನು ಅಪ್‌ಲೋಡ್ ಮಾಡುವಾಗ ದಯವಿಟ್ಟು ಈ ಸಲಹೆಗಳನ್ನು ನೆನಪಿನಲ್ಲಿಡಿ:

  • ಎಲ್ಲಾ ದಾಖಲೆಗಳು ಅಪ್ ಟು ಡೇಟ್ ಆಗಿವೆ ಮತ್ತು ಅವಧಿ ಮುಗಿದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಅವಧಿ ಮುಗಿದ ದಾಖಲೆಗಳನ್ನು ತಿರಸ್ಕರಿಸಲಾಗುತ್ತದೆ ಹಾಗೂ ನೀವು ಮತ್ತೆ ಸಲ್ಲಿಸುವಾಗ ನಿಮ್ಮ ಕಾಯುವ ಸಮಯವನ್ನು ವಿಸ್ತರಿಸಲಾಗುತ್ತದೆ.
  • ನಿಮ್ಮ ವಾಹನದ ವಿಮೆಯ ಪುರಾವೆ ಮತ್ತು ಚಾಲಕರ ಪರವಾನಗಿ ದಾಖಲೆಗಳಲ್ಲಿ ನಿಮ್ಮ ಹೆಸರನ್ನು ಸ್ಪಷ್ಟವಾಗಿ ಪಟ್ಟಿ ಮಾಡಬೇಕು. ಈ ದಾಖಲೆಗಳಲ್ಲಿನ ನಿಮ್ಮ ಹೆಸರು ನಿಮ್ಮ Uber ಖಾತೆಗೆ ಸೈನ್ ಅಪ್ ಮಾಡಲು ನೀವು ಬಳಸುವ ಹೆಸರಿಗೆ ಹೊಂದಿಕೆಯಾಗಬೇಕು.
  • ಅಪ್‌ಲೋಡ್ ಮಾಡಿದ ಚಿತ್ರಗಳು ಸ್ಪಷ್ಟ ಮತ್ತು ಸುಲಭವಾಗಿ ಓದಬಲ್ಲವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ದಾಖಲೆಗಳನ್ನು ಫೋಟೋ ತೆಗೆಯುವಾಗ ಕ್ಯಾಮೆರಾದ ಫ್ಲ್ಯಾಷ್ ಬಳಸುವುದನ್ನು ತಪ್ಪಿಸಿ. ಅಗತ್ಯವಿರುವ ಮಾಹಿತಿಯನ್ನು ಅಸ್ಪಷ್ಟಗೊಳಿಸುವಂತಹ ತೀಕ್ಷ್ಣಪ್ರಕಾಶವನ್ನು ಫ್ಲ್ಯಾಶ್ ಉಂಟು ಮಾಡುತ್ತದೆ.
  • ಅಪ್‌ಲೋಡ್ ಮಾಡಿದ ಫೋಟೋಗಳಲ್ಲಿ ನಿಮ್ಮ ದಾಖಲೆಗಳ ಎಲ್ಲಾ 4 ಭಾಗಗಳು ಕಾಣಿಸುತ್ತಿವೆಯೇ ಎಂದು ಪರಿಶೀಲಿಸಿ.