ನಿಮ್ಮ Uber ಖಾತೆಯನ್ನು ಸುರಕ್ಷಿತವಾಗಿರಿಸುವುದು

ಫಿಶಿಂಗ್ ಎಂದರೇನು?

ಫಿಶಿಂಗ್ ಎನ್ನುವುದು ನಿಮ್ಮ Uber ಖಾತೆಯ ಮಾಹಿತಿಯನ್ನು (ಇಮೇಲ್, ಫೋನ್ ಸಂಖ್ಯೆ, ಮತ್ತು/ಅಥವಾ ಪಾಸ್‌ವರ್ಡ್) ಬಿಟ್ಟುಕೊಡುವಂತೆ ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವಾಗಿರುತ್ತದೆ. ಯಶಸ್ವಿ ಫಿಶಿಂಗ್ ಪ್ರಯತ್ನವು ಗುರುತಿನ ಕಳ್ಳತನ ಮತ್ತು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು.

ಫಿಶಿಂಗ್ ಅಪೇಕ್ಷಿಸದ ಕರೆಯಾಗಿ ಸಂಭವಿಸಬಹುದು, ಆ ಕರೆಯಲ್ಲಿ ನಿಮ್ಮ ಖಾತೆಯ ಮಾಹಿತಿಯನ್ನು ಕೇಳಲಾಗುತ್ತದೆ. ಇದು ಪಠ್ಯ ಸಂದೇಶ ಅಥವಾ ಇಮೇಲ್ ಮೂಲಕವೂ ಸಂಭವಿಸಬಹುದು ಹಾಗೂ ನಕಲಿ ಲಾಗಿನ್ ಪುಟಕ್ಕೆ ಕಾರಣವಾಗುವ ಲಗತ್ತು ಅಥವಾ ಲಿಂಕ್ ಅನ್ನು ಒಳಗೊಂಡಿರಬಹುದು.

ಸಾಮಾನ್ಯ ಫಿಶಿಂಗ್ ಹಗರಣಗಳು

  • ನಿಮ್ಮ ಪಾಸ್‌ವರ್ಡ್ ಮತ್ತು ಖಾತೆಯ ಮಾಹಿತಿಯನ್ನು ಕೇಳಲು ನಕಲಿ "Uber ಬೆಂಬಲ" ಕರೆ ಅಥವಾ ಸಂದೇಶ ಕಳುಹಿಸುವುದು
  • ವೈಯಕ್ತಿಕ ಮಾಹಿತಿಗೆ ಬದಲಾಗಿ Uber ಕ್ರೆಡಿಟ್‌ಗಳನ್ನು ಕೊಡುಗೆಯಾಗಿ ನೀಡುವುದು
  • ಖಾತೆ ಮಾಹಿತಿಯನ್ನು ಕೇಳುವ ಅಪೇಕ್ಷಿಸದ ಕರೆಗಳು ಮತ್ತು ನಕಲಿ ಲಾಗಿನ್ ಪುಟಗಳಿಗೆ ಒಯ್ಯುವ ಪಠ್ಯ ಹಾಗೂ ಇಮೇಲ್ ಲಿಂಕ್‌ಗಳು.
  • ನಿಮ್ಮ Uber ಖಾತೆ ಲಾಗಿನ್‌ ಅನ್ನು ಕೇಳುವ ರಿಯಾಯಿತಿ ಉತ್ಪನ್ನಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗಳು
  • ನಿಮ್ಮ ಖಾತೆಗೆ ಗ್ಯಾಸ್ ಉಡುಗೊರೆ ಕಾರ್ಡ್ ಅನ್ನು ಸೇರಿಸಲು ನಿಮ್ಮನ್ನು ಕೇಳುವ ಇಮೇಲ್‌ಗಳು ಅಥವಾ ಕರೆಗಳು, ಇದರಿಂದ ಅವರು ನಿಮ್ಮ ಗಳಿಕೆಯನ್ನು ನಕಲಿ ಡೆಬಿಟ್ ಕಾರ್ಡ್‌ಗಳನ್ನು ಉಪಯೋಗಿಸಿ ನಗದು ಮಾಡಿಕೊಳ್ಳಬಹುದು

ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಹೇಗೆ ಸಹಾಯ ಮಾಡುವುದು

ಯಾವುದೇ ಕಾರಣಕ್ಕೂ ನಿಮ್ಮ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳದಿರುವ ಮೂಲಕ ನಿಮ್ಮ Uber ಖಾತೆಯನ್ನು ಫಿಶಿಂಗ್‌ನಿಂದ ಸುರಕ್ಷಿತವಾಗಿಡಲು ನೀವು ಸಹಾಯ ಮಾಡಬಹುದು. ನಿಮ್ಮ ಪಾಸ್‌ವರ್ಡ್, SMS ಕೋಡ್, ಬ್ಯಾಂಕಿಂಗ್ ಮಾಹಿತಿ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಫೋನ್ ಮೂಲಕ ಅಥವಾ ಇಮೇಲ್ ಮೂಲಕ ನಾವು ಎಂದಿಗೂ ಕೇಳುವುದಿಲ್ಲ.

ಫಿಶಿಂಗ್ ವೆಬ್‌ಸೈಟ್‌ಗಳನ್ನು Uber ನ ಕಾನೂನುಬದ್ಧ ವೆಬ್‌ಸೈಟ್‌ಗಳನ್ನು ಅನುಕರಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ ಮತ್ತು Uber ನಂತೆಯೇ ಕಾಣುವ ನಕಲಿ ಲಾಗಿನ್ ಪೋರ್ಟಲ್‌ಗಳನ್ನು ಒಳಗೊಂಡಿರಬಹುದು. ಆ ಕಾರಣಕ್ಕಾಗಿ, ಯಾವುದೇ ವೆಬ್‌ಸೈಟ್‌ನಲ್ಲಿ ನಿಮ್ಮ Uber ಪಾಸ್‌ವರ್ಡ್ ಅನ್ನು ನಮೂದಿಸುವ ಮೊದಲು ನಿಮ್ಮ ಬ್ರೌಸರ್‌ನ ಅಡ್ರೆಸ್ ಬಾರ್ ನಲ್ಲಿರುವ URL https://uber.com ಅಥವಾ https://auth.uber.com/ ಎಂದು ತೋರಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ ಅಭ್ಯಾಸವಾಗಿರುತ್ತದೆ.

ನಿಮ್ಮ ಖಾತೆಯನ್ನು ರಕ್ಷಿಸಲು ಸಹಾಯ ಮಾಡುವ 3 ಮಾರ್ಗಗಳು

  • ಪಾಸ್‌ವರ್ಡ್‌ಗಳು, ಸ್ವೀಕರಿಸಿದ ಕೋಡ್‌ಗಳು ಅಥವಾ ನಿಮ್ಮ ಸಾಮಾಜಿಕ ಭದ್ರತಾ ಸಂಖ್ಯೆಯನ್ನು ಇಮೇಲ್ ಮೂಲಕ ಅಥವಾ ಸ್ವೀಕರಿಸಿದ ಫೋನ್ ಕರೆಗಳಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ
  • ನಕಲಿ Uber ವೆಬ್‌ಸೈಟ್‌ಗಳನ್ನು ಕಡೆಗಣಿಸಿ. ನಿಜವಾದ Uber ವೆಬ್‌ಸೈಟ್‌ಗಳು ಯಾವಾಗಲೂ URL ನಲ್ಲಿ "uber.com" ಅನ್ನು ಹೊಂದಿರುತ್ತವೆ.
  • ನೀವು ಟ್ರಿಪ್‍ನಲ್ಲಿರುವಾಗ ನಿಮ್ಮ ಸಾಧನವನ್ನು ಬಳಸಲು ಅಥವಾ ಪ್ರವೇಶಿಸಲು ಸವಾರರಿಗೆ ಅವಕಾಶ ನೀಡುವುದನ್ನು ತಪ್ಪಿಸಿ