ಒಂದು ಟ್ರಿಪ್‌ನಲ್ಲಿ ಬಹು ನಿಲುಗಡೆಗಳನ್ನು ಮಾಡುವುದು

ಸವಾರರಿಗೆ ಟ್ರಿಪ್‌ನಲ್ಲಿರುವಾಗ ಗರಿಷ್ಠ 2 ಹೆಚ್ಚುವರಿ ನಿಲುಗಡೆಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಇದನ್ನು ಅವರು ಆ್ಯಪ್‌ನಲ್ಲಿಯೇ ಮಾಡಬಹುದು.

ಈ ಹೆಚ್ಚುವರಿ ನಿಲುಗಡೆಗಳನ್ನು ನಿಮ್ಮ ಟ್ರಿಪ್ ನಕ್ಷೆಯಲ್ಲಿ ಕಪ್ಪು ಬಣ್ಣದ ಚೌಕದ ಐಕಾನ್ ಮೂಲಕ ಗುರುತು ಮಾಡಲಾಗಿರುತ್ತದೆ ಹಾಗೂ ಅಂತಿಮ ನಿಲುಗಡೆ ಸ್ಥಳವನ್ನು ಕೆಂಪು ಬಣ್ಣದ ಚೌಕದ ಮೂಲಕ ಗುರುತು ಮಾಡಲಾಗಿರುತ್ತದೆ.

ನೀವು ಟ್ರಿಪ್‌-ಮಧ್ಯದ ತಲುಪಬೇಕಾದ ಸ್ಥಳಗಳಲ್ಲಿ ಒಂದಕ್ಕೆ ಆಗಮಿಸಿದಾಗ, ಪರದೆಯ ಕೆಳಭಾಗದಲ್ಲಿ “ನಿಲುಗಡೆ ಖಚಿತಪಡಿಸಿ”ಎಂದು ತಿಳಿಸುವ ಸ್ಲೈಡರ್ ಕಾಣಿಸುತ್ತದೆ.

ಈ ಬಾಕ್ಸ್ ಅನ್ನು ಸ್ಲೈಡ್ ಮಾಡುವುದರಿಂದ, ಸವಾರರ ಟ್ರಿಪ್‌ನಲ್ಲಿ ನಿಮ್ಮ ನ್ಯಾವಿಗೇಶನ್ ಅನ್ನು ಮುಂದಿನ ತಲುಪಬೇಕಾದ ಸ್ಥಳಕ್ಕೆ ಸ್ವಯಂಚಾಲಿತವಾಗಿ ಹೊಂದಿಸುತ್ತದೆ.

ಎಲ್ಲಾ ಸವಾರರು ತಮ್ಮ ಅಂತಿಮ ನಿಲುಗಡೆಯಲ್ಲಿ ನಿಮ್ಮ ವಾಹನದಿಂದ ನಿರ್ಗಮಿಸಿದ ಬಳಿಕ "ಟ್ರಿಪ್ ಮುಕ್ತಾಯಗೊಳಿಸಿ" ಸ್ವೈಪ್ ಮಾಡಿ.

ಟ್ರಿಪ್‌ ಸಮಯದಲ್ಲಿ ಒಂದು ಹೆಚ್ಚುವರಿ ನಿಲುಗಡೆಯನ್ನು ಸೇರಿಸಿದಾಗ, ನೀವು ಕಾಯುವ ಸಮಯ ಮತ್ತು ಪ್ರಯಾಣಿಸಿದ ಹೆಚ್ಚುವರಿ ದೂರವನ್ನು ಶುಲ್ಕಕ್ಕೆ ಸೇರಿಸಲಾಗುತ್ತದೆ.

Uber Pool ಟ್ರಿಪ್‌ಗಳಲ್ಲಿ ಈ ವೈಶಿಷ್ಟ್ಯವು ಲಭ್ಯವಿಲ್ಲ.