ಮಲ್ಟಿ-ರೆಸ್ಟೋರೆಂಟ್ ಬ್ಯಾಚ್ ಟ್ರಿಪ್‌‌ಗಳು - ಆಗಾಗ ಕೇಳಲ್ಪಡುವ ಪ್ರಶ್ನೆಗಳು

ಮಲ್ಟಿ-ರೆಸ್ಟೋರೆಂಟ್ ಬ್ಯಾಚ್ ಟ್ರಿಪ್‌ಗಳು ಯಾವುವು?

ಆರ್ಡರ್‌ಗಳಿಗೆ ಕಾಯುವ ಸಮಯ ಕಡಿಮೆ ಮಾಡಲು ಮತ್ತು ಆಹಾರ ಡೆಲಿವರಿ ಮಾಡುವುದರಲ್ಲಿ ಹೆಚ್ಚು ಸಮಯ ಕಳೆಯಲು ಮಲ್ಟಿ-ರೆಸ್ಟೋರೆಂಟ್ ಬ್ಯಾಚ್ ಟ್ರಿಪ್‌ಗಳು ನಿಮಗೆ ಸಹಾಯ ಮಾಡುತ್ತವೆ.

ಬ್ಯಾಚ್ಡ್ ಟ್ರಿಪ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ:

  • ನಿಮ್ಮ ಮೊದಲ ಆರ್ಡರ್‌ ಪಿಕಪ್‌ ವೇಳೆ, ಸಮೀಪದ ರೆಸ್ಟೋರೆಂಟ್‌ನಿಂದ ಇನ್ನೊಂದು ಆರ್ಡರ್‌ ಪಿಕಪ್‌ ಮಾಡುವುದಕ್ಕೆ ನಿರೀಕ್ಷಿಸುತ್ತಿದ್ದರೆ, ನಿಮ್ಮ ಮುಂದಿನ ಆರ್ಡರ್‌ ಸ್ವೀಕರಿಸಲು ನಿಮಗೆ ಸೂಚನೆ ಬರುತ್ತದೆ
  • ಎರಡನೇ ಆರ್ಡರ್‌ ಸ್ವೀಕರಿಸಿದ ನಂತರ, ಪಿಕಪ್‌ಗಾಗಿ ನಿಮ್ಮನ್ನು ಆ ರೆಸ್ಟೋರೆಂಟ್ ಸ್ಥಳಕ್ಕೆ ನಿರ್ದೇಶಿಸಲಾಗುತ್ತದೆ
  • ಎರಡೂ ಆರ್ಡರ್‌ಗಳಿಗೆ ಐಟಂಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಮೊದಲ ಡೆಲಿವರಿಯನ್ನು ನೀವು ಡ್ರಾಪ್ ಆಫ್‌ ಮಾಡುತ್ತೀರಿ
  • ನಿಮ್ಮ ಮೊದಲ ಡೆಲಿವರಿಯನ್ನು ನೀವು ಪೂರ್ಣಗೊಳಿಸಿದ ನಂತರ, ನಿಮ್ಮ ಬ್ಯಾಚ್ ಟ್ರಿಪ್‌ ಮುಗಿಸಲು ನಿಮ್ಮ ಎರಡನೇ ಡೆಲಿವರಿಯನ್ನು ಪೂರ್ಣಗೊಳಿಸಿ

ಬ್ಯಾಚ್ ಟ್ರಿಪ್ ಮಾಡಲು ನಾನು ನಿರಾಕರಿಸಬಹುದೇ?

ಹೌದು. ಬ್ಯಾಚ್ ಡೆಲಿವರಿಗಳನ್ನು ಒಳಗೊಂಡಂತೆ ಯಾವುದೇ ಡೆಲಿವರಿ ವಿನಂತಿಯನ್ನು ನೀವು ಸ್ವೀಕರಿಸಬಹುದು ಅಥವಾ ನಿರಾಕರಿಸಬಹುದು.

ಬ್ಯಾಚ್ ಆರ್ಡರ್‌ಗಳಿಗೆ ನನ್ನ ಡೆಲಿವರಿ ಶುಲ್ಕವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಬ್ಯಾಚ್ ಆರ್ಡರ್‌ಗಳಿಗೆ, ನಿಮ್ಮ ಡೆಲಿವರಿ ಶುಲ್ಕವನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ: 1. ಫ್ಲಾಟ್‌ ಪಿಕಪ್ ಶುಲ್ಕ + 2. ಪ್ರತಿ ರೆಸ್ಟೋರೆಂಟ್ (ಪ್ರತಿ ಹೆಚ್ಚುವರಿ ರೆಸ್ಟೋರೆಂಟ್‌ಗೆ ಫ್ಲಾಟ್ ಪಿಕಪ್‌ ಶುಲ್ಕಕ್ಕೆ ಹೆಚ್ಚುವರಿ 0.45X ಅನ್ನು ಸ್ವೀಕರಿಸಿ) ಪ್ರತಿ ಮೈಲು (ಕಿಲೋಮೀಟರ್) ದರ + ಪ್ರಕಾರ ಪಿಕಪ್‌ ಶುಲ್ಕ ಗುಣಕವನ್ನು ಅನ್ವಯಿಸಲಾಗುತ್ತದೆ. - ಪ್ರತಿ ಮೈಲು (ಕಿಲೋಮೀಟರು) ಶುಲ್ಕವನ್ನು ಪಿಕಪ್ ಸ್ಥಳಗಳ ಮತ್ತು ಡ್ರಾಪ್ ಆಫ್‌ ಪಾಯಿಂಟ್‌ಗಳ ಮಧ್ಯದ ಅಂತರದಿಂದ ಲೆಕ್ಕ ಮಾಡಲಾಗುತ್ತದೆ. - ಈ ಲೆಕ್ಕಾಚಾರವು ಅತಿ ಹೆಚ್ಚು ದಕ್ಷ ಮಾರ್ಗವನ್ನು ಆಧರಿಸಿರಬಹುದು. ಆದರೆ, ಪ್ರಯಾಣಿಸಿದ ನಿಜವಾದ ಮೈಲುಗಳನ್ನು (ಕಿಲೋಮೀಟರು) ಆಧರಿಸಿಲ್ಲದಿರಬಹುದು. 3. ನಗರವನ್ನು ಆಧರಿಸಿ ನೀವು ಪ್ರತಿ ನಿಮಿಷ ದರವನ್ನು ಸ್ವೀಕರಿಸಬಹುದು + - ಮೊದಲ ರೆಸ್ಟೋರೆಂಟ್‌ಗೆ ಆಗಮಿಸಿ ಕೊನೆಯ ಡ್ರಾಪ್‌ ಆಫ್‌ಗೆ ಹೋಗುವವರೆಗೆ ಕಳೆದ ಸಮಯವನ್ನು ಆಧರಿಸಿ ಲೆಕ್ಕ ಮಾಡಲಾಗುತ್ತದೆ - ಈ ಲೆಕ್ಕಾಚಾರವು, ಪಿಕಪ್‌ಗಳಲ್ಲಿ ನಿರೀಕ್ಷಿತ ಕಾಯುವ ಸಮಯ, ಮೊದಲ ರೆಸ್ಟೋರೆಂಟ್‌ನಿಂದ ಅಂತಿಮ ಡ್ರಾಪ್‌ ಆಫ್‌ವರೆಗೆ ನಿರೀಕ್ಷಿತ ಪ್ರಯಾಣ ಸಮಯ ಮತ್ತು ಡ್ರಾಪ್‌ ಆಫ್‌ಗಳಲ್ಲಿ ನಿರೀಕ್ಷಿತ ಕಾಯುವ ಸಮಯದ (ವಾಸ್ತವ ಸಮಯವಲ್ಲ) ಅಂದಾಜು ಮಾಡಿದ ಸಮಯವನ್ನು ಆಧರಿಸಿರಬಹುದು - ಗಮನಿಸಿ: ಆಯ್ದ ನಗರಗಳಲ್ಲಿ ಮಾತ್ರ ಸಮಯದ ಶುಲ್ಕ ಅನ್ವಯಿಸಬಹುದು. ಡೆಲಿವರಿ ಶುಲ್ಕಗಳಿಗೆ ಸಮಯ ಆಧರಿತ ಅಂಶವನ್ನು ನಿಮ್ಮ ನಗರ ಹೊಂದಿದ್ದರೆ, ಹೆಚ್ಚಿನ ವಿವರಗಳಿಗಾಗಿ uber.com ನಲ್ಲಿ ನಿಮ್ಮ ನಗರದ ವೆಬ್‌ಸೈಟ್ ಅನ್ನು ದಯವಿಟ್ಟು ನೋಡಿ. 4. ಫ್ಲಾಟ್ ಡ್ರಾಪ್‌ಆಫ್ ಶುಲ್ಕ - ಗ್ರಾಹಕರಿಗೆ ನೀವು ಡ್ರಾಪ್‌ಆಫ್ ಮಾಡುವ ಪ್ರತಿ ಆರ್ಡರ್‌ಗೆ ಫ್ಲಾಟ್ ಡ್ರಾಪ್‌ಆಫ್‌ ಶುಲ್ಕವನ್ನು ಪಡೆಯಿರಿ

ನಿಮ್ಮ ನಗರಕ್ಕೆ ಅನ್ವಯಿಸುವ ನಿಖರ ದರಗಳಿಗಾಗಿ uber.com ನಲ್ಲಿ ನಗರದ ವೆಬ್‌ಸೈಟ್‌ ಅನ್ನು ದಯವಿಟ್ಟು ನೋಡಿ.

ಉದಾಹರಣೆಗೆ, ಎರಡು ವಿಭಿನ್ನ ರೆಸ್ಟೋರೆಂಟ್‌ಗಳಿಂದ ನೀವು ಎರಡು ಆರ್ಡರ್‌ಗಳನ್ನು ಪಿಕಪ್‌ ಮಾಡುತ್ತೀರಿ ಎಂದು ಊಹಿಸೋಣ. ಫ್ಲಾಟ್ ಪಿಕಪ್ ಶುಲ್ಕ $1.50. ಹಾಗೆಯೇ, ಪ್ರತಿ ಮೈಲು ಫೀ $0.60, ಸಮಯ ಶುಲ್ಕ ಪ್ರತಿ ನಿಮಿಷಕ್ಕೆ $0.15 ಮತ್ತು ಈ ಟ್ರಿಪ್‌ನಲ್ಲಿ ನೀವು 12 ನಿಮಿಷಗಳನ್ನು ವೆಚ್ಚ ಮಾಡಿದ್ದೀರಿ ಹಾಗೂ ಒಂದು ಡ್ರಾಪ್‌ ಆಫ್‌ ಶುಲ್ಕವು $1.00 ಆಗಿದೆ (ಇದನ್ನು ಎರಡರಿಂದ ಗುಣಿಸಿ. ಏಕೆಂದರೆ, ಎರಡು ವಿಭಿನ್ನ ಆರ್ಡರ್‌ಗಳನ್ನು ಡ್ರಾಪ್ ಆಫ್‌ ಮಾಡುತ್ತಿದ್ದೀರಿ). ಆದ್ದರಿಂದ, ಇದರ ಫಲಿತಾಂಶವೆಂದರೆ: - ಪಿಕಪ್ ಶುಲ್ಕ = $ 1.50 - ಹೆಚ್ಚುವರಿ ಪಿಕಪ್ ಶುಲ್ಕ = (0.45$1.50) = $0.68 - ಪ್ರತಿ ಮೈಲು (ಕಿಲೋಮೀಟರು) ಶುಲ್ಕ = $ 0.60 - ಸಮಯ ಶುಲ್ಕ = (12$0.15) = $1.80 (ನಿಮ್ಮ ನಗರದಲ್ಲಿ ಅನ್ವಯವಾಗಿದ್ದರೆ) - ಡ್ರಾಪ್ ಆಫ್ ಶುಲ್ಕ = (2*$1.00) = $2.00 ಒಟ್ಟು ಪಾವತಿ = $1.50+$0.68+$0.60+$1.80+$2.00 = $6.58

ನನ್ನ ಮೊದಲ ಗ್ರಾಹಕರನ್ನು ನಾನು ಹುಡುಕಲಾಗದಿದ್ದರೆ ಮತ್ತು ಇದು ನನ್ನ ಎರಡನೇ ಆರ್ಡರ್ ಡೆಲಿವರಿ ವಿಳಂಬಕ್ಕೆ ಕಾರಣವಾದರೆ ಏನು ಮಾಡಬೇಕು?

ಡೆಲಿವರಿ ಮಾಡುವಾಗ ಗ್ರಾಹಕರನ್ನು ಹುಡುಕಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಅವರಿಗೆ ಕರೆ ಮಾಡಲು ಪ್ರಯತ್ನಿಸಬಹುದು. ಅವರು ಉತ್ತರಿಸದಿದ್ದರೆ, ಅವರು ಉತ್ತರಿಸಲಿಲ್ಲ ಎಂದು ಸೂಚಿಸುವ ಬ್ಯಾನರ್ ಅನ್ನು ನೀವು ಒತ್ತಬಹುದು. ಇದು ಅವರಿಗೆ ಸೂಚನೆಯನ್ನು ಕಳುಹಿಸುತ್ತದೆ ಮತ್ತು ಟೈಮರ್ ಆರಂಭವಾಗುತ್ತದೆ.

ಕೌಂಟ್‌ಡೌನ್‌ ಮುಗಿಯುವುದರೊಳಗೆ ಅವರು ನಿಮ್ಮನ್ನು ಸಂಪರ್ಕಿಸದಿದ್ದರೆ ಮತ್ತು ಡೆಲಿವರಿಯನ್ನು ಕೊನೆಗೊಳಿಸಲು ನೀವು ಪ್ರಾಂಪ್ಟ್‌ಗಳನ್ನು ಅನುಸರಿಸಿದರೆ, ಮೊದಲ ಡೆಲಿವರಿಗೆ ನೀವು ಪಾವತಿ ಪಡೆಯುತ್ತೀರಿ ಮತ್ತು ನಿಮ್ಮ ರದ್ದುಮಾಡುವಿಕೆ ರೇಟಿಂಗ್‌ ಮೇಲೆ ಇದು ಪರಿಣಾಮ ಬೀರುವುದಿಲ್ಲ. ನಂತರ ನೀವು ನಿಮ್ಮ ಎರಡನೇ ಡೆಲಿವರಿಯನ್ನು ಪೂರ್ಣಗೊಳಿಸಬಹುದು.

ಬ್ಯಾಚ್ ಟ್ರಿಪ್ ವಿನಂತಿಗಳ ಸ್ವೀಕರಿಸುವುದರಿಂದ ಸಂಪೂರ್ಣವಾಗಿ ಹೊರಬರಬಹುದೇ?

ಇಲ್ಲ, ಬ್ಯಾಚ್ ಟ್ರಿಪ್ ವಿನಂತಿಗಳನ್ನು ಸ್ವೀಕರಿಸುವುದರಿಂದ ಸಂಪೂರ್ಣ ಹಿಂದೆ ಸರಿಯುವ ಆಯ್ಕೆಯನ್ನು ನಾವು ಪ್ರಸ್ತುತ ಬೆಂಬಲಿಸುವುದಿಲ್ಲ. ಹಾಗಾದರೆ, ಬ್ಯಾಚ್ ಟ್ರಿಪ್ ವಿನಂತಿಗಳೂ ಸೇರಿದಂತೆ ಯಾವುದೇ ಟ್ರಿಪ್ ವಿನಂತಿಯನ್ನು ಸಮ್ಮತಿಸಲು ನೀವು ನಿರಾಕರಿಸಬಹುದು.