ನನ್ನ ಪೇಮೆಂಟ್‌ ಸ್ಟೇಟ್‌ಮೆಂಟ್‌ನಲ್ಲಿ ಟ್ರಿಪ್‌ ಕಾಣಿಸುತ್ತಿಲ್ಲ

ಪೇಮೆಂಟ್ ಸ್ಟೇಟ್‌ಮೆಂಟ್‌ಗಳು ನಿಮ್ಮ ಸಾಪ್ತಾಹಿಕ ಪಾವತಿಯ ಆವರ್ತನದ ಎಲ್ಲಾ ಟ್ರಿಪ್‍‌ಗಳನ್ನು ಒಳಗೊಂಡಿರುತ್ತವೆ. ಈ ಆವರ್ತನವು ಸ್ಥಳೀಯ ಸಮಯ ಸೋಮವಾರ ಬೆಳಿಗ್ಗೆ 4 ಗಂಟೆಗೆ ಶುರುವಾಗಿ ಮುಂದಿನ ಸೋಮವಾರ ಬೆಳಿಗ್ಗೆ 4 ಗಂಟೆಯ ತನಕ ಇರುತ್ತದೆ. ಯಾವುದೇ ಟ್ರಿಪ್ ಅನ್ನು ಸೋಮವಾರ 4 ಗಂಟೆಯ ನಂತರ ಮುಗಿಸಿದ್ದಲ್ಲಿ, ಅದು ನಿಮ್ಮ ಮುಂದಿನ ಸಾಪ್ತಾಹಿಕ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಬಹುದು.

ವಾರದ ನಡುವೆ ನೀವು ಪ್ರಗತಿಯಲ್ಲಿರುವ ಅಥವಾ ಪ್ರಸ್ತುತ ಪೇಮೆಂಟ್ ಸ್ಟೇಟ್‌ಮೆಂಟ್‌ಗಾಗಿ ನೋಡುತ್ತಿದ್ದರೆ, ಮುಗಿಸಿದ ಟ್ರಿಪ್‌ಗಳು ಕಾಣಿಸಿಕೊಳ್ಳಲು ಕೆಲವೊಮ್ಮೆ 48 ಗಂಟೆಗಳು ಬೇಕಾಗುತ್ತವೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

48-ಗಂಟೆಯ ಪ್ರಕ್ರಿಯೆಗೊಳಿಸುವಿಕೆ ಅವಧಿಯ ನಂತರವೂ ನಿಮಗೆ ಟ್ರಿಪ್ ಪತ್ತೆ ಮಾಡಲು ಆಗದಿದ್ದಲ್ಲಿ ಹಾಗೂ ಆ ಟ್ರಿಪ್ ನೀವು ಪರಿಶೀಲಿಸುತ್ತಿರುವ ಸಾಪ್ತಾಹಿಕ ಆವರ್ತನದ ಒಳಗೆ ಇದ್ದರೆ, ಈ ಫಾರ್ಮ್ ಮೂಲಕ ನಮಗೆ ತಿಳಿಸಿ.

ಹೆಚ್ಚು ಶುಲ್ಕಗಳನ್ನು ಹೊಂದಿರುವ ಟ್ರಿಪ್‌ಗಳನ್ನು ಪರಿಶೀಲಿಸಲು ಹೆಚ್ಚು ಸಮಯ ಬೇಕಾಗಬಹುದು.