ನಾನು ಟ್ರಿಪ್ ವಿನಂತಿಗಳನ್ನು ಪಡೆಯುತ್ತಿಲ್ಲ

ಆನ್‌ಲೈನ್‌ನಲ್ಲಿರುವಾಗ ಡೆಲಿವರಿ ವಿನಂತಿಗಳನ್ನು ಸ್ವೀಕರಿಸುವಲ್ಲಿ ನೀವು ಸಮಸ್ಯೆಗಳನ್ನು ಹೊಂದಿದ್ದಲ್ಲಿ, ಈ ಕೆಳಗಿನವುಗಳನ್ನು ಪ್ರಯತ್ನಿಸಿ:

  • ನೀವು ಚಾಲನೆ ಮಾಡಲು ಸಕ್ರಿಯವಾಗಿರುವ ನಗರದೊಳಗೆ ಇದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ
  • ಹೆಚ್ಚಿನ ಬೇಡಿಕೆಯಿರುವ ಸ್ಥಳಕ್ಕೆ ಹೋಗಿ.
  • ನೀವು ಅರ್ಹರಾಗಿರುವ ಎಲ್ಲಾ ಟ್ರಿಪ್ ಮಾದರಿಗಳನ್ನು ಸ್ವೀಕರಿಸಲು ನಿಮ್ಮ ಆದ್ಯತೆಗಳನ್ನು ಹೊಂದಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ
  • ತಲುಪಬೇಕಾದ ಸ್ಥಳದ ಸೆಟ್ಟಿಂಗ್ ಅನ್ನು ಆಫ್ ಮಾಡಿ (ಅದು ಆನ್ ಆಗಿದ್ದಲ್ಲಿ)
  • ನಿಮ್ಮ ಸಾಧನದ ಡೇಟಾ ಅಥವಾ ವೈ-ಫೈ ಸಂಪರ್ಕವನ್ನು ಪರಿಶೀಲಿಸಿ
  • ನಿಮ್ಮ ಫೋನ್ ಅನ್ನು ಮರುಪ್ರಾರಂಭಿಸಿ
  • Uber ಆ್ಯಪ್‍ನ ಇತ್ತೀಚಿನ ಆವೃತ್ತಿಯನ್ನು ನೀವು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನೀವು ಮೇಲಿನ ಪರಿಹಾರಗಳನ್ನು ಪ್ರಯತ್ನಿಸಿದಲ್ಲಿ ಹಾಗೂ ಇನ್ನೂ ವಿನಂತಿಗಳನ್ನು ಸ್ವೀಕರಿಸದಿದ್ದಲ್ಲಿ, ಆ ಪ್ರದೇಶ ಅಥವಾ ಆ ದಿನದ ಸಮಯದಲ್ಲಿ ಕಡಿಮೆ ಬೇಡಿಕೆಯನ್ನು ಅನುಭವಿಸುವ ಸಾಧ್ಯತೆಯಿರುತ್ತದೆ. ಟ್ರಿಪ್‌ಗಳ ಬೇಡಿಕೆಯು ಸ್ಥಳ, ದಿನದ ಸಮಯ ಮತ್ತು ವರ್ಷದ ಸಮಯಕ್ಕೆ ಅನುಗುಣವಾಗಿ ಬದಲಾಗಬಹುದು.

ನಿಮ್ಮ ಖಾತೆಯಲ್ಲಿ ಸಮಸ್ಯೆ ಇದೆ ಎಂದು ನಿಮಗೆ ಇನ್ನೂ ಅನಿಸುತ್ತಿದ್ದಲ್ಲಿ, ಕೆಳಗೆ ನಮಗೆ ತಿಳಿಸಿ.

ಗಮನಿಸಿ: ನಿಮ್ಮ ಖಾತೆಯನ್ನು ಪರಿಶೀಲಿಸಲು ಮತ್ತು ನೀವು ಏಕೆ ವಿನಂತಿಗಳನ್ನು ಸ್ವೀಕರಿಸುತ್ತಿಲ್ಲ ಎನ್ನುವುದನ್ನು ಕಂಡುಹಿಡಿಯಲು, ನೀವು ಆ್ಯಪ್‌ನಲ್ಲಿ ಆನ್‌ಲೈನ್‌ನಲ್ಲಿರಬೇಕಾಗುತ್ತದೆ ಕೆಳಗಿನ ನಮೂನೆಯನ್ನು ಸಲ್ಲಿಸುವ ಮೊದಲು ದಯವಿಟ್ಟು ಆನ್‌ಲೈನ್‌ಗೆ ಹೋಗಿ.