ನನ್ನ ಫೋನ್ ಚಾರ್ಜ್ ಆಗುತ್ತಿಲ್ಲ

ನಿಮ್ಮ ಫೋನ್ ಬ್ಯಾಟರಿ ಚಾರ್ಜ್ ಆಗದಿದ್ದಲ್ಲಿ ಅಥವಾ ನಿಮ್ಮ ವಾಹನಕ್ಕೆ ಪ್ಲಗ್ ಇನ್ ಮಾಡಿದಾಗ ಚಾರ್ಜ್ ಹೋಗುತ್ತಿದ್ದಲ್ಲಿ, ಈ ಕೆಳಗಿನ ಪರಿಹಾರಗಳನ್ನು ಪ್ರಯತ್ನಿಸಿ.

ಸಾಕೆಟ್ ಕಾರು ಚಾರ್ಜರ್‌ಗೆ ಬದಲಾಯಿಸಿ

ಅನೇಕ ಕಾರಿನ USB ಪೋರ್ಟ್‌ಗಳು ಅಲ್ಪ ಪ್ರಮಾಣದ ವಿದ್ಯುಚ್ಚಕ್ತಿಯನ್ನು ಮಾತ್ರವೇ ಒದಗಿಸುತ್ತವೆ. ಹೆಚ್ಚಿನ ಹೊಸ ಫೋನ್‌ಗಳು "ಕ್ವಿಕ್ ಚಾರ್ಜ್ 3.0" ನಂತಹ ಒಂದು ಅಥವಾ ಹೆಚ್ಚಿನ ವೇಗದ ಚಾರ್ಜಿಂಗ್ ತಂತ್ರಜ್ಞಾನಗಳನ್ನು ಬೆಂಬಲಿಸುತ್ತವೆ ಮತ್ತು ನಿಮ್ಮ ಫೋನ್‌ನಂತೆಯೇ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುವ ಪವರ್ ಸಾಕೆಟ್ ಕಾರಿನ ಚಾರ್ಜರ್‌ನೊಂದಿಗೆ (ಸಿಗರೇಟ್ ಲೈಟರ್ ಚಾರ್ಜರ್ ಎಂದೂ ಕರೆಯುತ್ತಾರೆ) ಉತ್ತಮವಾಗಿ ಜೋಡಿಸಲ್ಪಟ್ಟಿರುತ್ತವೆ.

ನಿಮ್ಮ ನಿರ್ದಿಷ್ಟ ಫೋನ್ ಮಾದರಿಗಾಗಿ ವಿನ್ಯಾಸಗೊಳಿಸಲಾದ ವೇಗದ ಕಾರಿನ ಚಾರ್ಜರ್‌ಗಾಗಿ ಆನ್‌ಲೈನ್‌ನಲ್ಲಿ ಹುಡುಕಲು ಮತ್ತು ಉತ್ತಮ ವಿಮರ್ಶೆಗಳಿರುವ ಒಂದನ್ನು ಆಯ್ಕೆ ಮಾಡುವಂತೆ ನಾವು ಶಿಫಾರಸ್ಸು ಮಾಡುತ್ತೇವೆ.

ಪರದೆಯ ಬೆಳಕನ್ನು ಕಡಿಮೆ ಮಾಡಿ

ನಿಮ್ಮ ಪರದೆಯು ಎಷ್ಟು ಪ್ರಕಾಶಮಾನವಾಗಿರುತ್ತದೆಯೋ, ನಿಮ್ಮ ಫೋನ್ ಅಷ್ಟು ಹೆಚ್ಚು ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ. ಡ್ರೈವರ್ ಆ್ಯಪ್ ಬಳಸುವಾಗ ನಿಮ್ಮ ಫೋನ್ ಅನ್ನು ನೀವು ಇನ್ನೂ ಸ್ಪಷ್ಟವಾಗಿ ನೋಡಬಹುದಾದ ರೀತಿಯಲ್ಲಿ ಪರದೆಯ ಪ್ರಕಾಶಮಾನವನ್ನು ಮಂದಗೊಳಿಸಲು ಪ್ರಯತ್ನಿಸಿ.

ಹೊಸ ಕೇಬಲ್ ಪಡೆಯಿರಿ

ಮೇಲಿನ ಪರಿಹಾರಗಳು ನಿಮ್ಮ ಫೋನ್ ಚಾರ್ಜ್‌ಗೆ ಸಹಾಯ ಮಾಡದಿದ್ದಲ್ಲಿ, ನೀವು ಹೊಸ ಚಾರ್ಜಿಂಗ್ ಕೇಬಲ್ ಅನ್ನು ಖರೀದಿಸಬೇಕಾಗಬಹುದು. ಹೆಣೆಯಲ್ಪಟ್ಟ ಮತ್ತು ದಪ್ಪವಾದ ವೈರಿಂಗ್ ಹೊಂದಿರುವ ಒಂದನ್ನು ಪಡೆಯಲು ನಾವು ಶಿಫಾರಸ್ಸು ಮಾಡುತ್ತೇವೆ.

ಪೋರ್ಟಬಲ್ ಪವರ್ ಬ್ಯಾಂಕ್ ಬಳಸಿ

ನಿಮ್ಮ ವಾಹನದಿಂದ ದೂರದಲ್ಲಿರುವಾಗ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ಪೋರ್ಟಬಲ್ ಪವರ್ ಬ್ಯಾಂಕ್ ನಿಮಗೆ ಅನುಮತಿಸುತ್ತದೆ, ಆದ್ದರಿಂದ ನಿಮಗೆ ಅಗತ್ಯವಿರುವಾಗ ಅದು ಚಾರ್ಜ್ ಆಗಿರುತ್ತದೆ.

ಯಾವುದೇ USB ಅಡಾಪ್ಟರುಗಳನ್ನು ತೆಗೆದುಹಾಕಿ

ಚಾರ್ಜಿಂಗ್ ಕೇಬಲ್ ಅನ್ನು ನಿಮ್ಮ ಫೋನ್‌ಗೆ ಹೊಂದುವಂತೆ ಮಾಡುವ ಯಾವುದೇ ರೀತಿಯ ಅಡಾಪ್ಟರ್ ಚಾರ್ಜಿಂಗ್ ನಿಮ್ಮ ಫೋನ್ ಅನ್ನು ನಿಧಾನಗೊಳಿಸುತ್ತದೆ. ಉದಾಹರಣೆಗೆ, USB-C ಅಡಾಪ್ಟರ್ ಹೊಂದಿರುವ ಮೈಕ್ರೋ USB ಕಾರ್ಡ್ USB-C ಕಾರ್ಡ್‌ಗಿಂತ ನಿಧಾನವಾಗಿ ಚಾರ್ಜ್ ಆಗಬಹುದು (ವಿಶೇಷವಾಗಿ ಇದು ಕಡಿಮೆ-ಗುಣಮಟ್ಟದ ಅಡಾಪ್ಟರ್ ಆಗಿದ್ದಲ್ಲಿ.)

ನಿಮ್ಮ ಚಾರ್ಜಿಂಗ್ ಕೇಬಲ್ ಪರಿಶೀಲಿಸಿ

ಎಲ್ಲಾ USB ಪೋರ್ಟ್ ಚಾರ್ಜಿಂಗ್ ಕೇಬಲ್‌ಗಳು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಫಾಸ್ಟ್ ಚಾರ್ಜಿಂಗ್ ಕೇಬಲ್‌ಗಳು ಸಹಾ, ತಯಾರಕರು ವಿಭಿನ್ನ ಸಾಧನಗಳನ್ನು ಎಷ್ಟು ಬೇಗನೆ ಚಾರ್ಜ್ ಮಾಡುತ್ತಾರೆ ಎನ್ನುವುದನ್ನು ಅನುಸರಿಸಿ ಬದಲಾಗುತ್ತವೆ, ಅಂದರೆ ಕೆಲವು ವೇಗದ ಚಾರ್ಜಿಂಗ್ ಕೇಬಲ್‌ಗಳು ಇತರವುಗಳಂತೆ ಕಾರ್ಯನಿರ್ವಹಿಸುವುದಿಲ್ಲ.

ನೀವು ಸಾಧ್ಯವಾದಷ್ಟು ವೇಗವಾಗಿ ಚಾರ್ಜ್ ಪಡೆಯುತ್ತಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಫೋನ್‌ನ ಉತ್ಪಾದಕರಿಂದ ಅಥವಾ ವಿನ್ಯಾಸಗೊಳಿಸಲಾದ ವೇಗದ ಚಾರ್ಜಿಂಗ್ ಕೇಬಲ್ ಅನ್ನು ಖರೀದಿಸಲು ನಾವು ಶಿಫಾರಸ್ಸು ಮಾಡುತ್ತೇವೆ.

ಬಳಕೆ ಮಾಡದಿರುವ ಆ್ಯಪ್‌ಗಳನ್ನು ಮುಚ್ಚಿ

ನಿಮ್ಮ ಫೋನ್ ಚಾರ್ಜ್ ಆಗುತ್ತಿರುವಾಗ, ಸ್ವಲ್ಪ ಪವರ್ ಹಿನ್ನೆಲೆ ಕಾರ್ಯಗಳಿಗೆ ಮತ್ತು ನಿಮ್ಮ ಫೋನ್ ಚಾಲನೆಯಲ್ಲಿರುವ ಆ್ಯಪ್‌ಗಳಿಗೆ ಉಪಯೋಗವಾಗುತ್ತದೆ. ನಿಮ್ಮ ಫೋನ್ ವೇಗವಾಗಿ ಚಾರ್ಜ್ ಆಗಲು ಸಹಾಯ ಮಾಡಲು ನೀವು ಬಳಸದೇ ಇರುವ ಯಾವುದೇ ಆ್ಯಪ್‌ಗಳಿಂದ ಬಲವಂತವಾಗಿ ಹೊರಗೆ ಬನ್ನಿ.