ಸೇವಾ ಪ್ರಾಣಿ ನಿಯಮ

ರಾಜ್ಯ ಮತ್ತು ಫೆಡರಲ್ ಕಾನೂನು Uber ಡ್ರೈವರ್ ಆ್ಯಪ್‌ ಅನ್ನು ಬಳಸುವ ಚಾಲಕರಿಗೆ ಸೇವಾ ಪ್ರಾಣಿಗಳ ಕಾರಣದಿಂದಾಗಿ ಸೇವಾ ಪ್ರಾಣಿಗಳೊಂದಿಗಿನ ಸವಾರರಿಗೆ ಸೇವೆಯನ್ನು ನಿರಾಕರಿಸುವುದನ್ನು ಮತ್ತು ಸೇವಾ ಪ್ರಾಣಿಗಳೊಂದಿಗಿನ ಸವಾರರ ವಿರುದ್ಧ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. Uber ನ ತಾರತಮ್ಯ ರಹಿತ ನೀತಿಯಲ್ಲಿ ವಿವರಿಸಿದಂತೆ, ಈ ಕಾನೂನು ಬಾಧ್ಯತೆಯನ್ನು ಉಲ್ಲಂಘಿಸಿ ತಾರತಮ್ಯದ ನಡವಳಿಕೆಯಲ್ಲಿ ತೊಡಗಿರುವ ಚಾಲಕ ಪಾರ್ಟ್‌ನರ್‌ಗಳು ಡ್ರೈವರ್ ಆ್ಯಪ್ ಅನ್ನು ಬಳಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ.

ಸೇವಾ ಪ್ರಾಣಿ ಎಂದರೆ ಯಾವುದು?

ಸೇವಾ ಪ್ರಾಣಿ ಎಂದರೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ ಕೆಲಸ ಮಾಡಲು ಅಥವಾ ಕಾರ್ಯಗಳನ್ನು ನಿರ್ವಹಿಸುವಂತೆ ಮಾಡಲು ತರಬೇತಿ ಪಡೆದ ಪ್ರಾಣಿ.

ಸವಾರರ ಪ್ರಾಣಿಯನ್ನು ಸೇವಾ ಪ್ರಾಣಿ ಎಂದು ದೃಢೀಕರಿಸಲು ಚಾಲಕ ಪಾರ್ಟ್‌ನರ್ ಕೇಳಬಹುದಾದ ಕೇವಲ ಎರಡು ಪ್ರಶ್ನೆಗಳನ್ನು ಮಾತ್ರವೇ ಕಾನೂನು ಒದಗಿಸುತ್ತದೆ:

  • ಅಂಗವೈಕಲ್ಯದ ಕಾರಣದಿಂದಾಗಿ ಪ್ರಾಣಿಯ ಅಗತ್ಯವಿದೆಯೇ?
  • ಪ್ರಾಣಿಗೆ ಯಾವ ಕೆಲಸ ಅಥವಾ ಕಾರ್ಯವನ್ನು ನಿರ್ವಹಿಸಲು ತರಬೇತಿ ನೀಡಲಾಗಿದೆ?

ಸವಾರರ ಪ್ರಾಣಿ ಸೇವಾ ಪ್ರಾಣಿ ಎಂದು ಸಾಬೀತುಪಡಿಸುವ ದಾಖಲಾತಿಯನ್ನು ಪ್ರಸ್ತುತಪಡಿಸಿ ಎಂದು ಸವಾರರಲ್ಲಿ ಚಾಲಕರು ವಿನಂತಿಸಬಾರದು.

ಸೇವಾ ಪ್ರಾಣಿ ಟ್ಯಾಗ್ ಅನ್ನು ಧರಿಸಬೇಕಿಲ್ಲ, ನೋಂದಾಯಿಸಿಕೊಳ್ಳಬೇಕಿಲ್ಲ ಅಥವಾ ಅದು ಸೇವಾ ಪ್ರಾಣಿ ಎಂಬ ಯಾವುದೇ ರೀತಿಯ ಪುರಾವೆಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ.

ಚಾಲಕರ ಕಾನೂನು ಬಾಧ್ಯತೆಗಳು

ಸೇವಾ ಪ್ರಾಣಿಗಳೊಂದಿಗೆ ಬರುವ ಸವಾರರಿಗೆ ಸೇವೆಯನ್ನು ಒದಗಿಸಲು ಚಾಲಕರು ಕಾನೂನಾತ್ಮಕ ಬದ್ಧತೆ ಹೊಂದಿರುತ್ತಾರೆ.

ಅಲರ್ಜಿಗಳು, ಧಾರ್ಮಿಕ ಆಕ್ಷೇಪಣೆಗಳು ಅಥವಾ ಪ್ರಾಣಿಗಳ ಸಾಮಾನ್ಯ ಭಯದಿಂದಾಗಿ ಚಾಲಕರೊಬ್ಬರು ಸೇವಾ ಪ್ರಾಣಿಗಳೊಂದಿಗೆ ಬರುವ ಸವಾರರಿಗೆ ಸೇವೆಯನ್ನು ಕಾನೂನಾತ್ಮಕವಾಗಿ ನಿರಾಕರಿಸುವಂತಿಲ್ಲ.

Uber ನೊಂದಿಗೆ ಮಾಡಿಕೊಳ್ಳುವ ತಮ್ಮ ಲಿಖಿತ ತಂತ್ರಜ್ಞಾನ ಸೇವೆಗಳ ಒಪ್ಪಂದದ ಮೂಲಕ, ಡ್ರೈವರ್ ಆ್ಯಪ್ ಅನ್ನು ಬಳಸುವ ಎಲ್ಲಾ ಡ್ರೈವರ್ ಪಾರ್ಟ್‌ನರ್‌ಗಳು ಸೇವಾ ಪ್ರಾಣಿಗಳೊಂದಿಗೆ ಬರುವ ಸವಾರರಿಗೆ ಸೇವೆಯನ್ನು ಒದಗಿಸಲು ತಮ್ಮ ಕಾನೂನು ಬಾಧ್ಯತೆಯ ಬಗ್ಗೆ ಅರಿವು ಮೂಡಿಸಿಕೊಂಡಿರುತ್ತಾರೆ ಮತ್ತು ಕಾನೂನನ್ನು ಅನುಸರಿಸಲು ಒಪ್ಪಿಕೊಂಡಿರುತ್ತಾರೆ. ಚಾಲಕರು ಸೇವಾ ಪ್ರಾಣಿಯ ಕಾರಣದಿಂದ ಸವಾರರನ್ನು ಸಾಗಿಸಲು ನಿರಾಕರಿಸಿದಲ್ಲಿ, ಚಾಲಕರು ಕಾನೂನನ್ನು ಉಲ್ಲಂಘಿಸಿದಂತೆ ಆಗುತ್ತದೆ ಹಾಗೂ Uber ಜೊತೆಗಿನ ಒಪ್ಪಂದವನ್ನು ಉಲ್ಲಂಘಿಸಿದಂತೆ ಆಗುತ್ತದೆ.

ಸೇವಾ ಪ್ರಾಣಿಯೊಂದಿಗೆ ಸವಾರನನ್ನು ಸಾಗಿಸಲು ನಿರಾಕರಿಸಿದಲ್ಲಿ ಉಂಟಾಗುವ ಪರಿಣಾಮಗಳು

ಚಾಲಕರು ಸೇವಾ ಪ್ರಾಣಿಯ ಕಾರಣದಿಂದ ಸವಾರರನ್ನು ಉದ್ದೇಶಪೂರ್ವಕವಾಗಿ ಸಾಗಿಸಲು ನಿರಾಕರಿಸಿದ್ದಾರೆ ಎಂದು Uber ನಿರ್ಧರಿಸಿದಲ್ಲಿ, ಚಾಲಕರು ಚಾಲಕ ಆ್ಯಪ್‌ ಅನ್ನು ಬಳಸದಂತೆ ಶಾಶ್ವತವಾಗಿ ತಡೆಯಲಾಗುತ್ತದೆ. ಘಟನೆಯ ಪರಿಶೀಲನೆಯ ನಂತರ Uber ತನ್ನ ಸ್ವಂತ ವಿವೇಚನೆಯಿಂದ ಈ ನಿರ್ಣಯವನ್ನು ಮಾಡುತ್ತದೆ.

ನಿರ್ದಿಷ್ಟ ಚಾಲಕ ಪಾರ್ಟ್‌ನರ್ ಸವಾರರನ್ನು ಸೇವಾ ಪ್ರಾಣಿಯೊಂದಿಗೆ ಸಾಗಿಸಲು ನಿರಾಕರಿಸಿದ್ದಾರೆ ಎಂದು Uber ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಸವಾರರಿಂದ ತೋರಿಕೆಯ ದೂರುಗಳನ್ನು ಸ್ವೀಕರಿಸಿದಲ್ಲಿ, ಚಾಲಕ ನೀಡಿದ ಸಮರ್ಥನೆಯನ್ನು ಲೆಕ್ಕಿಸದೇ ಆ ಚಾಲಕ ಪಾರ್ಟ್‌ನರ್ ಚಾಲಕ- ಪಾರ್ಟ್‌ನರ್ ಆ್ಯಪ್ ಅನ್ನು ಬಳಸದಂತೆ ಶಾಶ್ವತವಾಗಿ ತಡೆಯಲಾಗುತ್ತದೆ.

ಸೇವಾ ಪ್ರಾಣಿ ದೂರನ್ನು ಹೇಗೆ ವರದಿ ಮಾಡುವುದು

ಒಬ್ಬ ಸವಾರರು ತನ್ನ‌ ಸೇವಾ ಪ್ರಾಣಿಗೆ ಸಂಬಂಧಿಸಿದ ಸಮಸ್ಯೆಯನ್ನು ಹೊಂದಿದ್ದಲ್ಲಿ, 'ಸವಾರಿ ರದ್ದತಿ, ಕಿರುಕುಳ ಅಥವಾ ಅಸಮರ್ಪಕ ಶುಚಿಗೊಳಿಸುವ ಶುಲ್ಕಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಸೇರಿದಂತೆ, ಸವಾರರು ಸಮಸ್ಯೆಯನ್ನು Uber ಗೆ ವರದಿ ಮಾಡಬಹುದು.

ಒಮ್ಮೆ ಸವಾರರು ಸೇವಾ ಪ್ರಾಣಿ ದೂರನ್ನು ಸಲ್ಲಿಸಿದಲ್ಲಿ, Uber ನ ವಿಶೇಷ ಬೆಂಬಲ ತಂಡವು ಸಮಸ್ಯೆಯನ್ನು ತನಿಖೆ ಮಾಡುತ್ತದೆ ಮತ್ತು Uber ನ ತಂತ್ರಜ್ಞಾನ ಸೇವೆಗಳ ಒಪ್ಪಂದ ಮತ್ತು ಈ ಸೇವಾ ಪ್ರಾಣಿ ನೀತಿಗೆ ಅನುಗುಣವಾಗಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ. Uber ನ ವಿಶೇಷ ಬೆಂಬಲ ತಂಡವು ತನಿಖೆಯ ಫಲಿತಾಂಶ ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಒಂದು ವಾರದೊಳಗೆ ಸವಾರರಿಗೆ ತಿಳಿಸಲು ಸಮಂಜಸವಾದ ಮತ್ತು ಉತ್ತಮ ನಂಬಿಕೆಯ ಪ್ರಯತ್ನವನ್ನು ಮಾಡುತ್ತದೆ.

Uber ರೈಡರ್ ಆ್ಯಪ್‌‌ನಿಂದ ದೂರು ಸಲ್ಲಿಸಲು,"ನಾನು ಸೇವಾ ಪ್ರಾಣಿಗಳ ಸಮಸ್ಯೆಯನ್ನು ವರದಿ ಮಾಡಲು ಬಯಸುತ್ತೇನೆ" ಎಂಬ ದೂರಿನ ಪರದೆಗೆ ನ್ಯಾವಿಗೇಟ್ ಮಾಡಿ, ಇದು ಟ್ರಿಪ್ ವಿವರಗಳ ಸ್ಕ್ರೀನ್ ಮತ್ತು ಖಾತೆ ಮೆನು ಬಟನ್ ಎರಡರಲ್ಲೂ ಲಭ್ಯವಿದೆ.

ಸೇವಾ ಪ್ರಾಣಿಗಳೊಂದಿಗೆ ಬರುವ ಸವಾರರ ಹಕ್ಕುಗಳು

ಸೇವಾ ಪ್ರಾಣಿಯೊಂದಿಗೆ ಬಂದಿರುವುದಕ್ಕಾಗಿ ಸವಾರರಿಗೆ ಸೇವೆಯನ್ನು ನೀಡಲು ನಿರಾಕರಿಸುವಂತಿಲ್ಲ. ಸೇವಾ ಪ್ರಾಣಿಯ ಕಾರಣ ಚಾಲಕ ಪಾರ್ಟ್‌ನರ್ ಸವಾರರ ಸೇವೆಯನ್ನು ನಿರಾಕರಿಸಿದ ಕಾರಣಕ್ಕಾಗಿ ಸವಾರರಿಗೆ ಯಾವುದೇ ಟ್ರಿಪ್ ರದ್ದತಿ ಶುಲ್ಕಗಳು ಅಥವಾ ವಿಧಿಸಲಾದ ಇತರ ಶುಲ್ಕಗಳನ್ನು ಮರುಪಾವತಿಸಲಾಗುತ್ತದೆ.

ಚಾಲಕರೊಂದಿಗಿನ ತನ್ನ ಒಪ್ಪಂದವನ್ನು Uber ರದ್ದುಗೊಳಿಸಬಹುದು ಎನ್ನುವುದನ್ನೂ ಒಳಗೊಂಡಂತೆ ಅವರ ದೂರಿಗೆ ಪ್ರತಿಕ್ರಿಯೆಯಾಗಿ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದರ ಕುರಿತು ಸವಾರರಿಗೆ ಮಾಹಿತಿಯನ್ನು ತಿಳಿಸಲಾಗುತ್ತದೆ.

ಸೇವ ಪ್ರಾಣಿ ಇತ್ತು ಎನ್ನುವ ಕಾರಣಕ್ಕೆ ಚಾಲಕರು ಒಬ್ಬ ಸವಾರರಿಗೆ ಸವಾರಿಯನ್ನು ನೀಡಲು ನಿರಾಕರಿಸಿದಲ್ಲಿ, ಚಾಲಕ ಪಾರ್ಟ್‌ನರ್ Uber ಜೊತೆಗಿನ ಚಾಲಕ ಪಾರ್ಟ್‌ನರ್ ಒಪ್ಪಂದದ ಸಂಬಂಧವನ್ನು ಕೊನೆಗೊಳಿಸಿದ ಪ್ರತಿ ನಿದರ್ಶನಕ್ಕೆ $25 ರ ಖಾತೆಯ ಕ್ರೆಡಿಟ್ ಅನ್ನು ಸವಾರರಿಗೆ ಒದಗಿಸಲಾಗುತ್ತದೆ.

Cleaning fees

Riders will be refunded any cleaning fees charged for shedding by their service animals.

A rider will not be charged for the first or second reported mess involving a service animal’s bodily fluids or hair. A rider can be charged for the third reported mess involving a service animal’s bodily fluids or hair. The rider may contest that such a mess occurred by responding to the fee notification email to notify customer support. If a rider contests the cleaning fee, Uber will make a reasonable good faith effort to determine whether a mess occurred.