ನನ್ನ ಡೈರೆಕ್ಟ್ ಡೆಪಾಸಿಟ್‌ ಸೆಟ್ ಅಪ್ ಮಾಡಲು ನನಗೆ ಸಹಾಯದ ಅಗತ್ಯವಿದೆ

ನೀವು Uber ನೊಂದಿಗೆ ನೇರ ಡೆಪಾಸಿಟ್‌ ಅನ್ನು vault.uber.com ನಲ್ಲಿ ಹೊಂದಿಸಿದಾಗ, ನಿಮ್ಮ ಗುರುತನ್ನು ಪರಿಶೀಲಿಸುವ ಸಲುವಾಗಿ 4-ಅಂಕಿಯ ವಿಶಿಷ್ಟ ಪಿನ್‌ ಒಂದನ್ನು Uber ನಿಮಗೆ ಪಠ್ಯ SMS‌ ಮೂಲಕ ಕಳುಹಿಸುತ್ತದೆ. ಈ ಪಿನ್‌ ಸಂಖ್ಯೆಯು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ರಕ್ಷಿಸಲು ಇರುವ ಒಂದು ಸುರಕ್ಷತಾ ಕ್ರಮವಾಗಿದೆ.

ನಿಮ್ಮ ಫೋನ್‌ ಸಂಖ್ಯೆಗೆ SMS‌ ಬರದಿದ್ದಲ್ಲಿ, ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಪರಿಷ್ಕರಿಸುವ ಸಲುವಾಗಿ ಪಿನ್‌ ಪರಿಶೀಲನೆಯನ್ನು ಪಡೆಯಲು ನಿಮ್ಮ Uber ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನೀವು ಅಪ್‌ಡೇಟ್‌ ಮಾಡಬೇಕಾಗಬಹುದು.

ನಿಮ್ಮ ಫೋನ್‌ ಸಂಖ್ಯೆ ಅಪ್‌ಡೇಟ್‌ ಮಾಡಲು:

  1. ಇಲ್ಲಿಗೆ ಹೋಗಿ partners.uber.com
  2. ಮೇಲ್ಭಾಗದ ಎಡ ಮೂಲೆಯಲ್ಲಿರುವ ಮೆನು ಕ್ಲಿಕ್‌ ಮಾಡಿ
  3. ಎಡ ಭಾಗದ ಮೆನುವಿನಲ್ಲಿ ಪ್ರೊಫೈಲ್‌ ಆಯ್ಕೆ ಮಾಡಿ
  4. ನಿಮ್ಮ ಹೆಸರಿನ ಪಕ್ಕ ಇರುವ ಎಡಿಟ್‌ ಕ್ಲಿಕ್‌ ಮಾಡಿ
  5. ನಿಮ್ಮ ಫೋನ್‌ ಸಂಖ್ಯೆ ಅ‌ಪ್‌ಡೇಟ್ ಮಾಡಲು:
  6. ಉಳಿಸು ಕ್ಲಿಕ್ ಮಾಡಿ

ನಿಮ್ಮ ಖಾತೆಯಲ್ಲಿ ಫೋನ್‌ ಸಂಖ್ಯೆ ಅಪ್‌ಡೇಟ್‌ ಮಾಡಲು ಈಗಲೂ ನಿಮಗೆ ಸಾಧ್ಯವಾಗದಿದ್ದಲ್ಲಿ ಅಥವಾ Uber ನಿಂದ ಪಠ್ಯ SMS‌ ಬರದಿದ್ದಲ್ಲಿ, ಈ ಕೆಳಗಿನ ಭದ್ರತೆ ಪ್ರಶ್ನೆಗೆ ಉತ್ತರಿಸಿ ಹಾಗೂ ನೀವು ಬಳಸಲು ಬಯಸುವ ಫೋನ್‌ ಸಂಖ್ಯೆ ನಮೂದಿಸಿ ಮತ್ತು ನಾವು ನಿಮಗಾಗಿ ಅದನ್ನು ಅಪ್‌ಡೇಟ್‌ ಮಾಡುತ್ತೇವೆ.