ನಿಮ್ಮ ನಗರದಲ್ಲಿ Uber Eats ಸೇವೆಯು ಲಭ್ಯವಿದ್ದಲ್ಲಿ, ಟ್ರಿಪ್ ವಿನಂತಿಗಳನ್ನು ಸ್ವೀಕರಿಸಲು ನೀವು ಬಳಸುವ ಅದೇ ಆ್ಯಪ್ ಮೂಲಕ ಡೆಲಿವರಿ ವಿನಂತಿಗಳನ್ನು ಸ್ವೀಕರಿಸಲು ಸಹ ನೀವು ಆಯ್ಕೆ ಮಾಡಬಹುದು. ಒಂದು ವೇಳೆ ನಿಮ್ಮ ಪ್ರದೇಶದಲ್ಲಿ ಸವಾರಿ ವಿನಂತಿಗಳು ಕಡಿಮೆಯಾಗಿದ್ದಲ್ಲಿ ಈ ಆಯ್ಕೆಯು ನಿಮಗೆ ಗಳಿಕೆಯನ್ನು ಮುಂದುವರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಡೆಲಿವರಿ ವಿನಂತಿಗಳನ್ನು ಸ್ವೀಕರಿಸುವುದನ್ನು ಪ್ರಾರಂಭಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಈ ಆಯ್ಕೆಯು ನಿಮ್ಮ ಆ್ಯಪ್ನಲ್ಲಿ ತಕ್ಷಣವೇ ಲಭ್ಯವಿರುತ್ತದೆ. ಡೆಲಿವರಿ ವಿನಂತಿಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
ಡೆಲಿವರಿ ವಿನಂತಿಗಳನ್ನು ಸ್ವೀಕರಿಸಲಾಗುತ್ತಿಲ್ಲವೇ?
ನೀವು ಡೆಲಿವರಿ ವಿನಂತಿಗಳನ್ನು ಸ್ವೀಕರಿಸಲು ಆಯ್ಕೆ ಮಾಡಿದ್ದು, ಕೆಲವು ಗಂಟೆಗಳೊಳಗೆ ಯಾವುದೇ ವಿನಂತಿಗಳನ್ನು ಸ್ವೀಕರಿಸದೇ ಇದ್ದಲ್ಲಿ, ಚಾಲಕ ಆ್ಯಪ್ಗೆ ಹೋಗಿ ಈ ಹಂತಗಳನ್ನು ಅನುಸರಿಸಿ: