drivers.uber.com ನಲ್ಲಿ ಯಾವ ಡೇಟಾ ಲಭ್ಯವಿದೆ?

drivers.uber.com ನಲ್ಲಿ , ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು, ಅವುಗಳೆಂದರೆ:

  • ಪೇಮೆಂಟ್ ಸ್ಟೇಟ್‌ಮೆಂಟ್ ಗಳು
  • ತೆರಿಗೆ ದಾಖಲೆಗಳು
  • ಬ್ಯಾಂಕಿಂಗ್ ಮಾಹಿತಿ

ಪೇಮೆಂಟ್ ಸ್ಟೇಟ್‌ಮೆಂಟ್‌ಗಳು

ಪೇಮೆಂಟ್ ಸ್ಟೇಟ್‌ಮೆಂಟ್‌ಗಳಟ್ಯಾಬ್ ನಿಮಗೆ ಪಾವತಿ ಅವಧಿಯ ಆಧಾರದ ಮೂಲಕ ನಿಮ್ಮ ಸ್ಟೇಟ್‌ಮೆಂಟ್‌ಗಳನ್ನು ಆ್ಯಕ್ಸೆಸ್ ಮಾಡಲು ಅನುವು ಮಾಡಿಕೊಡುತ್ತದೆ.

ಪೇಮೆಂಟ್ ಸ್ಟೇಟ್‌ಮೆಂಟ್‌ ಅನ್ನು ವೀಕ್ಷಿಸಲು:

  1. drivers.uber.com ಗೆ ಸೈನ್ ಇನ್ ಮಾಡಿ.
  2. ಮುಖ್ಯ ಮೆನು ತೆರೆಯಲು ಮೆನು ಐಕಾನ್ ಅನ್ನು ಟ್ಯಾಪ್ ಮಾಡಿ.
  3. "ಗಳಿಕೆಗಳು" ಮತ್ತು ನಂತರ "ಸ್ಟೇಟ್ಮೆಂಟ್‌ಗಳು" ಆಯ್ಕೆಮಾಡಿ.
  4. ಸರಿಯಾದ ಸ್ಟೇಟ್‌ಮೆಂಟ್‌ ಅನ್ನು ವೀಕ್ಷಿಸಲು ತಿಂಗಳು ಮತ್ತು ವರ್ಷವನ್ನು ಆಯ್ಕೆ ಮಾಡಿ.
  5. ಅನ್ವಯವಾಗುವ ವಾರದಲ್ಲಿ, "ಸ್ಟೇಟ್‌ಮೆಂಟ್‌ ವೀಕ್ಷಿಸಿ" ಅನ್ನು ಟ್ಯಾಪ್ ಮಾಡಿ. ಸ್ಟೇಟ್‌ಮೆಂಟ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು, "CSV ಡೌನ್‌ಲೋಡ್" ಬಟನ್ ಟ್ಯಾಪ್ ಮಾಡಿ.

ಪ್ರತಿಯೊಂದು ಸ್ಟೇಟ್ಮೆಂಟ್ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:

  • ಆ ವಾರದಲ್ಲಿ ನಿಮ್ಮ ಗಳಿಕೆಗಳು ಮತ್ತು ಬಾಕಿ
  • ನಿಮ್ಮ ಬ್ಯಾಲೆನ್ಸ್‌ನ ಶುಲ್ಕ ವಿವರಣೆ
  • ಆ ವಾರದಲ್ಲಿನ ಎಲ್ಲಾ ಟ್ರಿಪ್‌ಗಳು ಐಟಂ ಶುಲ್ಕ ವಿವರಣೆಯ ಸಮೇತ. ನಿರ್ದಿಷ್ಟ ಟ್ರಿಪ್‌ನ ವಿವರಗಳನ್ನು ವೀಕ್ಷಿಸಲು, ಟ್ರಿಪ್ ಐಡಿ ಕಾಲಂನಲ್ಲಿನ ಲಿಂಕ್ ಅನ್ನು ಆಯ್ಕೆ ಮಾಡಿ.

ತೆರಿಗೆ ದಾಖಲೆಗಳು

ನಿಮ್ಮ ತೆರಿಗೆ ದಾಖಲೆಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು, ತೆರಿಗೆ ಮಾಹಿತಿ ಟ್ಯಾಬ್‌ಗೆ ಹೋಗಿ. PDF ಆಗಿ ಡೌನ್‌ಲೋಡ್ ಮಾಡಿಕೊಳ್ಳಲು ಅಥವಾ ನಿಮ್ಮ ದಾಖಲೆಗಳನ್ನು ಪ್ರಿಂಟ್ ಮಾಡಿಕೊಳ್ಳಲು Uber ವಾರ್ಷಿಕ ಸಾರಾಂಶವನ್ನು ಒದಗಿಸುತ್ತದೆ.

ನೀವು ತೆರಿಗೆ ಸೆಟ್ಟಿಂಗ್ಸ್ ಟ್ಯಾಬ್‌ನಲ್ಲಿನಿಮ್ಮ ತೆರಿಗೆ ಮಾಹಿತಿಯನ್ನು ನವೀಕರಿಸಬಹುದು.

ಬ್ಯಾಂಕಿಂಗ್ ಮಾಹಿತಿ

ಬ್ಯಾಂಕಿಂಗ್ಟ್ಯಾಬ್ ನಿಮಗೆ ಇದನ್ನು ಅನುಮತಿಸುತ್ತದೆ:

  • ನೈಜ ಸಮಯದಲ್ಲಿ ನಿಮ್ಮ ಖಾತೆಯ ಬಾಕಿ ಮೊತ್ತ ಹಾಗೂ ವಹಿವಾಟು ಇತಿಹಾಸವನ್ನು ವೀಕ್ಷಿಸಬಹುದು
  • ನಿಮ್ಮ ಪಾವತಿ ವಿಧಾನಗಳು (ಅಂದರೆ, ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳು ಮತ್ತು ಡೆಬಿಟ್ ಕಾರ್ಡ್‌ಗಳು) ಮತ್ತು ಆದ್ಯತೆಗಳನ್ನು ನಿರ್ವಹಿಸಬಹುದು
  • Uber ಗೆ ಪಾವತಿಗಳನ್ನು ಮಾಡಬಹುದು

ನಿಮ್ಮ ಪಾವತಿ ಭದ್ರತೆಗಾಗಿ, ಸೂಕ್ಷ ಮಾಹಿತಿಯನ್ನು (ಉದಾಹರಣೆಗೆ ನಿಮ್ಮ ಬ್ಯಾಂಕ್ ಖಾತೆಯ ಪೂರ್ಣ ಸಂಖ್ಯೆ) ಮರೆಮಾಚಲಾಗುತ್ತದೆ.