ಪಾರ್ಟ್‌ನರ್ ಅನ್ನು ಬದಲಾಯಿಸಿ

ನೀವು ಪಾರ್ಟ್‌ನರ್ ಅನ್ನು ಬದಲಾಯಿಸಲು ಬಯಸಿದಲ್ಲಿ, ದಯವಿಟ್ಟು ಕೆಳಗಿನ ಲೇಖನದಲ್ಲಿನ ಹಂತಗಳನ್ನು ಅನುಸರಿಸಿ ಹಾಗೂ ನೀವು ಪ್ರಸ್ತುತ ಚಾಲನೆ ಮಾಡುತ್ತಿರುವ ಪಾರ್ಟ್‌ನರ್ ಖಾತೆಯಿಂದ ಮೊದಲು ನಿಮ್ಮನ್ನು ತೆಗೆದುಹಾಕಿಕೊಳ್ಳಿ.

ನಿಮ್ಮನ್ನು ಪಾರ್ಟ್‌ನರ್ ಖಾತೆಯಿಂದ ತೆಗೆದುಹಾಕಿದಾಗ, ಅದರ ಬಗ್ಗೆ ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ.

ಮುಂದೆ, ಕೆಳಗಿನ ಲೇಖನಕ್ಕೆ ಭೇಟಿ ನೀಡುವಂತೆ ನೀವು ಜೊತೆಗೆ ಓಡಿಸಲು ಯೋಜಿಸಿರುವ ಪಾರ್ಟ್‌ನರ್‌ಗೆ ತಿಳಿಸಿ ಹಾಗೂ ಅದರಲ್ಲಿರುವ ಹಂತಗಳನ್ನು ಪೂರ್ಣಗೊಳಿಸಲು ಕೇಳಿಕೊಳ್ಳಿ. ನೀವು ಮತ್ತು ನಿಮ್ಮ ಹೊಸ ಪಾರ್ಟ್‌ನರ್ ಟ್ರಿಪ್ ವಿನಂತಿಗಳನ್ನು ಸ್ವೀಕರಿಸಲು ಒಂದೇ ನಗರದಲ್ಲಿ ನೋಂದಾಯಿಸಿಕೊಳ್ಳಬೇಕು ಎನ್ನುವುದನ್ನು ದಯವಿಟ್ಟು ಗಮನಿಸಿ. ನೀವು ಒಂದೇ ನಗರದಲ್ಲಿ ನೋಂದಣಿಯಾಗಿಲ್ಲದಿದ್ದಲ್ಲಿ, ನೀವು ನಗರವನ್ನು ಬದಲಾಯಿಸಿದಾಗ ನಾವು ನಿಮ್ಮ ನೋಂದಾಯಿತ ನಗರವನ್ನು ಬದಲಾಯಿಸುತ್ತೇವೆ.

ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ನಿಮ್ಮ ಹೊಸ ಪಾರ್ಟ್‌ನರ್ ಅವರ ಒಪ್ಪಿಗೆಯ ಅಗತ್ಯವಿರುತ್ತದೆ. ಈ ಸಮಯದಲ್ಲಿ ನೀವು ಈಗಾಗಲೇ ಪೂರ್ಣಗೊಳಿಸಿದ ಯಾವುದೇ ಟ್ರಿಪ್ ಇದ್ದರೂ, ಅದನ್ನು ನಿಮ್ಮ ಮಾಜಿ ಪಾರ್ಟ್‌ನರ್ ಖಾತೆಗೆ ಪಾವತಿಸಲಾಗುತ್ತದೆ.