ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಅಪ್‌ಡೇಟ್ ಮಾಡಲು:
1. ಡ್ರೈವರ್ ಆ್ಯಪ್ ಅನ್ನು ತೆರೆಯಿರಿ.
2. ವಾಲೆಟ್ > ಸೆಟ್ಟಿಂಗ್ಸ್ > ಬ್ಯಾಂಕ್ ಖಾತೆಯನ್ನು ಟ್ಯಾಪ್ ಮಾಡಿ.
3. ಮೇಲಿನ ಬಲಭಾಗದಲ್ಲಿರುವ 3 ಚುಕ್ಕೆಗಳನ್ನು ಟ್ಯಾಪ್ ಮಾಡಿದ ನಂತರ "ಎಡಿಟ್ ಮಾಡಿ" ಆಯ್ಕೆಮಾಡಿ.
4. ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ ಮತ್ತು "ಮುಗಿದಿದೆ" ಅನ್ನು ಟ್ಯಾಪ್ ಮಾಡಿ.
ಗಮನಿಸಿ: ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಡೇಟ್ ಅಥವಾ ಬದಲಾವಣೆ ಮಾಡಿದಲ್ಲಿ ನಿಮ್ಮ ಸಾಪ್ತಾಹಿಕ ಪಾವತಿಯ ಸ್ವೀಕೃತಿಯು 3-5 ವ್ಯವಹಾರ ದಿನಗಳವರೆಗೆ ವಿಳಂಬವಾಗಬಹುದು. ಸಾಧ್ಯವಾದರೆ, ಸೋಮವಾರ ಸ್ಥಳೀಯ ಸಮಯ ಬೆಳಿಗ್ಗೆ 4 ಗಂಟೆಯ ಮೊದಲು ಬದಲಾವಣೆಗಳನ್ನು ಸಲ್ಲಿಸಿ. ಇದರಿಂದ ನಿಮ್ಮ ಮುಂದಿನ ಪಾವತಿಯನ್ನು ನಿಮ್ಮ ಹೊಸ ಖಾತೆಗೆ ಮಾಡಲಾಗುತ್ತದೆ. ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದಿದ್ದರೆ, ನಿಮ್ಮ ಪ್ರೊಫೈಲ್ ಅನ್ನು ನಾವು ಅಪ್‌ಡೇಟ್ ಮಾಡುವ ತನಕ ನಿಮ್ಮ ಗಳಿಕೆಗಳು ಇನ್ನೂ ಸಹ ನಿಮ್ಮ ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಗೆ ಹೋಗಬಹುದು.