ಸವಾರಿಯನ್ನು ವಿನಂತಿಸುವಾಗ, ಲಭ್ಯವಿರುವ ವಾಹನ ಆಯ್ಕೆಗಳ ಮೂಲಕ ನೀವು ಸ್ವೈಪ್ ಮಾಡಬಹುದು ಹಾಗೂ ಅದು ಎಷ್ಟು ಸವಾರರನ್ನು ಹೊತ್ತೊಯ್ಯಬಹುದು ಎನ್ನುವುದನ್ನು ವೀಕ್ಷಿಸಲು ಅದರ ಮೇಲೆ ಟ್ಯಾಪ್ ಮಾಡಿ. ನಿಮ್ಮ ವಿನಂತಿಯನ್ನು ದೃಢೀಕರಿಸುವ ಮೊದಲು ಇದನ್ನು ನೋಡುವಂತೆ ಶಿಫಾರಸು ಮಾಡಲಾಗುತ್ತದೆ.
ಕೆಲವು ಸಂದರ್ಭಗಳಲ್ಲಿ , ನೀವು ನಿರೀಕ್ಷಿಸಿದ್ದಕ್ಕಿಂತ ಚಿಕ್ಕದಾದ ಅಥವಾ ಕಡಿಮೆ ಸುಸಜ್ಜಿತವಾದ ವಾಹನದಲ್ಲಿ ಚಾಲಕ-ಪಾರ್ಟ್ನರ್ ಆಗಮಿಸಬಹುದು. ಉದಾಹರಣೆಗೆ, ನೀವು UberXL ಅನ್ನು ವಿನಂತಿಸಿದಲ್ಲಿ ಮತ್ತು ನಾಲ್ಕು ಸವಾರರಿಗೆ ಮಾತ್ರ ಆಸನ ಹೊಂದಿರುವ ವಾಹನವು ಬಂದಲ್ಲಿ, ಅದು UberXL ಸವಾರಿಗೆ ಅರ್ಹತೆ ಪಡೆಯುವುದಿಲ್ಲ.
ಇದು ವಾಹನ ವರ್ಗೀಕರಣ ದೋಷದ ಪರಿಣಾಮವಾಗಿರಬಹುದು. ನಿಮ್ಮ ಚಾಲಕ-ಪಾರ್ಟ್ನರ್ ವಾಹನವು ನೀವು ನಿರೀಕ್ಷಿಸುತ್ತಿರುವ ರೀತಿಗೆ ಮ್ಯಾಚ್ ಆಗುವುದಿಲ್ಲ ಎಂದು ನೀವು ಭಾವಿಸಿದಲ್ಲಿ, ಕೆಳಗಿನ ನಮೂನೆಯಲ್ಲಿ ನಮಗೆ ತಿಳಿಸಿ. ನಿಮಗೆ ರದ್ದತಿ ಶುಲ್ಕವನ್ನು ಪರಿಶೀಲಿಸಬೇಕೆಂದಾದಲ್ಲಿ, ಈ ಲೇಖನವನ್ನು ವೀಕ್ಷಿಸಿ.