ನಿಮ್ಮ ಖಾತೆಯಲ್ಲಿ ಪಾವತಿ ವಿಧಾನವನ್ನು ನವೀಕರಿಸಲಾಗುತ್ತಿದೆ

ಆದ್ಯತೆಯ ಪಾವತಿ ವಿಧಾನವನ್ನು ಸೇರಿಸುವುದು ಹಾಗೂ ಆಯ್ಕೆ ಮಾಡುವುದು ನಿಮಗೆ ಸವಾರಿಯನ್ನು ವಿನಂತಿಸಲು ಅನುವು ಮಾಡಿಕೊಡುತ್ತದೆ. ನೀವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು, PayPal, Venmo, ಡಿಜಿಟಲ್ ವ್ಯಾಲೆಟ್‌ಗಳು ಮತ್ತು Uber ಗಿಫ್ಟ್ ಕಾರ್ಡುಗಳು ಸೇರಿದಂತೆ ಪಾವತಿ ವಿಧಾನಗಳನ್ನು ಸೇರಿಸಬಹುದು. ಟ್ರಿಪ್ ಕೊನೆಗೊಂಡಾಗ, ನೀವು ಆಯ್ಕೆ ಮಾಡಿದ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲಾಗುತ್ತದೆ.

ಸವಾರಿಯ ಸಮಯದಲ್ಲಿ, ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ನಿಮ್ಮ ಆ್ಯಪ್ ಬಳಸಿ. ಆ್ಯಪ್‌ನ ಕೆಳಗಿನಿಂದ ಮೇಲಿನವರೆಗೂ ಸ್ವೈಪ್ ಮಾಡಿ ಮತ್ತು ಟ್ರಿಪ್ ಮುಗಿಯುವ ಮೊದಲು ನಿಮಗೆ ಬೇಕಾದ ಪಾವತಿ ವಿಧಾನವನ್ನು ಟ್ಯಾಪ್ ಮಾಡಿ.

ಪಾವತಿ ವಿಧಾನವನ್ನು ಸೇರಿಸಿ:

  1. ನಿಮ್ಮ ಆ್ಯಪ್‌ ಮೆನುವಿನಿಂದ "ವಾಲೆಟ್" ಅನ್ನು ಆಯ್ಕೆ ಮಾಡಿ.
  2. "ಪಾವತಿ ವಿಧಾನವನ್ನು ಸೇರಿಸಿ" ಟ್ಯಾಪ್ ಮಾಡಿ.
  3. ಕಾರ್ಡ್ ಮಾಹಿತಿಯನ್ನು ಹಸ್ತಚಾಲಿತವಾಗಿ ನಮೂದಿಸುವ ಮೂಲಕ, ಕಾರ್ಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ಪರ್ಯಾಯ ಪಾವತಿ ಪ್ರಕಾರವನ್ನು ಸೇರಿಸುವ ಮೂಲಕ ಪಾವತಿ ವಿಧಾನವನ್ನು ಸೇರಿಸಿ.

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿ

  1. ಕಾರ್ಡ್ ಸ್ಕ್ಯಾನ್ ಮಾಡಲು, ಕ್ಯಾಮರಾ ಐಕಾನ್ ಟ್ಯಾಪ್ ಮಾಡಿ. ನಿಮ್ಮ ಫೋನ್ Uber ಆ್ಯಪ್‌ ಕ್ಯಾಮರಾ ಬಳಸಲು ಅನುಮತಿ ಕೇಳಬಹುದು.
  2. ನಿಮ್ಮ ಫೋನಿನ ಸ್ಕ್ರೀನಿನಲ್ಲಿ ನಿಮ್ಮ ಕಾರ್ಡ್ ಅನ್ನು ಕೇಂದ್ರೀಕರಿಸಿ ಅದರಿಂದ ಎಲ್ಲಾ 4 ಭಾಗಗಳು ಗ್ರೀನ್ ಬಣ್ಣದಲ್ಲಿ ಮಿಂಚುತ್ತವೆ. ಉಬ್ಬು ಅಕ್ಷರಗಳನ್ನು ಮತ್ತು ಸಂಖ್ಯೆಗಳನ್ನು ಹೊಂದಿರುವ ಕಾರ್ಡ್‌ಗಳು ಸಾಮಾನ್ಯವಾಗಿ ಸ್ಕ್ಯಾನ್ ಮಾಡಲು ಸುಲಭವಾಗಿರುತ್ತವೆ.
  3. ಕಾರ್ಡ್‌ನ ಮುಕ್ತಾಯ ದಿನಾಂಕ, CVV ಸಂಖ್ಯೆ ಮತ್ತು ಬಿಲ್ಲಿಂಗ್ ZIP ಅಥವಾ ಪೋಸ್ಟಲ್ ಕೋಡ್ ಅನ್ನು ನಮೂದಿಸಿ.
  4. "ಸೇವ್" ಟ್ಯಾಪ್ ಮಾಡಿ.

ಹಸ್ತಚಾಲಿತವಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸೇರಿಸಲು

  1. ನಿಮ್ಮ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
  2. ಕಾರ್ಡ್‌ನ ಮುಕ್ತಾಯ ದಿನಾಂಕ, CVV ಸಂಖ್ಯೆ ಮತ್ತು ಬಿಲ್ಲಿಂಗ್ ZIP ಅಥವಾ ಪೋಸ್ಟಲ್ ಕೋಡ್ ಅನ್ನು ನಮೂದಿಸಿ.
  3. "ಸೇವ್" ಟ್ಯಾಪ್ ಮಾಡಿ.

ಕಾರ್ಡ್ ಮಾಹಿತಿಯನ್ನು ನವೀಕರಿಸಿ

ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನ ಮುಕ್ತಾಯ ದಿನಾಂಕ, CCV ಸಂಖ್ಯೆ ಮತ್ತು ಬಿಲ್ಲಿಂಗ್ ZIP ಅಥವಾ ಪೋಸ್ಟಲ್ ಕೋಡ್ ಅನ್ನು ತಿದ್ದುಪಡಿ ಮಾಡಬಹುದು. ಒಂದು ವೇಳೆ ನೀವು Uber for Business ಪ್ರೊಫೈಲ್ ಹೊಂದಿದ್ದಲ್ಲಿ, ನಿಮ್ಮ ಮೆನುವಿನಿಂದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಕಾರ್ಡ್‌ಗೆ ಸಂಬಂಧಿಸಿದ ಪ್ರೊಫೈಲ್ ಅನ್ನು ಸಹ ನೀವು ಬದಲಾಯಿಸಬಹುದು. ಪ್ರಾರಂಭಿಸಲು ಪ್ರೊಫೈಲ್‌ಗಳನ್ನು ಆಯ್ಕೆ ಮಾಡಿ.

  1. ನಿಮ್ಮ ಆ್ಯಪ್ ಮೆನುವಿನಿಂದ "ಪಾವತಿ" ಆಯ್ಕೆ ಮಾಡಿ.
  2. ನೀವು ನವೀಕರಿಸಲು ಬಯಸುವ ಪಾವತಿ ಆಯ್ಕೆಯನ್ನು ಆರಿಸಿಕೊಳ್ಳಿ.
  3. ಮೂರು ಡಾಟ್ ಇರುವ ಐಕಾನ್ ಅನ್ನು ಟ್ಯಾಪ್ ಮಾಡಿ, ನಂತರ "ತಿದ್ದುಪಡಿ" ಅನ್ನು ಟ್ಯಾಪ್ ಮಾಡಿ.
  4. ಬದಲಾವಣೆಗಳನ್ನು ಮಾಡಿ, ನೀವು ಪೂರ್ಣಗೊಳಿಸಿದ ನಂತರ "ಸೇವ್" ಟ್ಯಾಪ್ ಮಾಡಿ.

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ತಿದ್ದುಪಡಿ ಮಾಡಲು ಸಾಧ್ಯವಾಗದಿದ್ದರೂ ಸಹ, ಕಾರ್ಡ್ ಅನ್ನು ನಿಮ್ಮ ಖಾತೆಯಿಂದ ತೆಗೆದುಹಾಕಬಹುದು ಮತ್ತು ನಂತರ ಹೊಸ ಪಾವತಿ ವಿಧಾನವಾಗಿ ಸೇರಿಸಬಹುದು.

ಪಾವತಿ ವಿಧಾನವನ್ನು ಆಳಿಸಿ:

ನಿಮ್ಮ ಖಾತೆಯು ಎಲ್ಲಾ ಸಮಯದಲ್ಲೂ ಕನಿಷ್ಠ ಒಂದು ಪಾವತಿ ವಿಧಾನವನ್ನು ಹೊಂದಿರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಏಕೈಕ ಪಾವತಿ ವಿಧಾನವನ್ನು ಅಳಿಸಲು ನೀವು ಬಯಸಿದಲ್ಲಿ, ನೀವು ಮೊದಲು ಹೊಸದನ್ನು ಸೇರಿಸಬೇಕಾಗುತ್ತದೆ.

  1. ನಿಮ್ಮ ಆ್ಯಪ್ ಮೆನುವಿನಿಂದ "ಪಾವತಿ" ಆಯ್ಕೆ ಮಾಡಿ.
  2. ನೀವು ಅಳಿಸಲು ಬಯಸುವ ಕಾರ್ಡ್ ಅನ್ನು ಆಯ್ಕೆ ಮಾಡಿ.
  3. ಮೇಲಿನ ಬಲ ಭಾಗದಲ್ಲಿರುವ ಮೂರು ಡಾಟ್ ಐಕಾನ್ ಅನ್ನು ಟ್ಯಾಪ್ ಮಾಡಿ.
  4. "ಅಳಿಸು" ಟ್ಯಾಪ್ ಮಾಡಿ ನಂತರ ದೃಢೀಕರಿಸಿ.