ನಿಮ್ಮ Uber ಖಾತೆಯನ್ನು ಸುರಕ್ಷಿತವಾಗಿರಿಸುವುದು

ಫಿಶಿಂಗ್ ಎಂದರೇನು?

ಫಿಶಿಂಗ್ ಎನ್ನುವುದು ನಿಮ್ಮ Uber ಖಾತೆಯ ಮಾಹಿತಿಯನ್ನು (ಇಮೇಲ್, ಫೋನ್ ಸಂಖ್ಯೆ ಅಥವಾ ಪಾಸ್‌ವರ್ಡ್) ಬಿಟ್ಟುಕೊಡುವಂತೆ ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವಾಗಿರುತ್ತದೆ. ನಕಲಿ ಲಾಗಿನ್ ಪುಟಕ್ಕೆ ಹೋಗುವ ಲಿಂಕ್ ಅಥವಾ ಲಗತ್ತನ್ನು ಹೊಂದಿರುವ ಅಪೇಕ್ಷಿಸದ ಇಮೇಲ್ ಅಥವಾ SMS ಅನ್ನು ಬಳಸಿಕೊಂಡು ಫಿಶಿಂಗ್ ಪ್ರಯತ್ನಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ. ನಿಮ್ಮ ಪಾಸ್‌ವರ್ಡ್ ಅಥವಾ ಹಣಕಾಸಿನ ಮಾಹಿತಿ ಸೇರಿದಂತೆ ನಿಮ್ಮ ಖಾತೆಯ ಬಗ್ಗೆ ಮಾಹಿತಿಯನ್ನು ವಿನಂತಿಸುವ ಇಮೇಲ್ ಅಥವಾ ಫೋನ್ ಮೂಲಕ Uber ಉದ್ಯೋಗಿಗಳು ನಿಮ್ಮನ್ನು ಎಂದಿಗೂ ಸಂಪರ್ಕಿಸುವುದಿಲ್ಲ.

ನಿಮ್ಮ Uber ಖಾತೆಯ ಇಮೇಲ್ ಅಥವಾ ಪಾಸ್‌ವರ್ಡ್ ಅನ್ನು ನಮೂದಿಸಲು ನಿಮ್ಮನ್ನು ಕೇಳಿದಲ್ಲಿ, ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿರುವ URL https://www.uber.com ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳಿ.

ಫಿಶಿಂಗ್ ಬಗ್ಗೆ ಶಂಕೆ ಹೊಂದಿದ್ದಲ್ಲಿ ಏನು ಮಾಡಬೇಕು

ಒಂದು ವೇಳೆ ನೀವು Uber ನಿಂದ ಎಂದು ಹೇಳಿಕೊಳ್ಳುವ ಸಂದೇಶವನ್ನು ಸ್ವೀಕರಿಸಿದಲ್ಲಿ, ಹೊರಗಿನ ಲಿಂಕ್‌ಗೆ ಹೋಗಲು ನಿಮ್ಮನ್ನು ಕೇಳಿಕೊಳ್ಳುವುದು https://www.uber.com ನಿಂದ ಬಂದಿರದಿದ್ದಲ್ಲಿ, ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಮತ್ತು ಯಾವುದೇ ಮಾಹಿತಿಯೊಂದಿಗೆ ಪ್ರತಿಕ್ರಿಯಿಸಬೇಡಿ.

ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಹೇಗೆ ಸಹಾಯ ಮಾಡುವುದು

  • ನೀವು ಇತರ ವೆಬ್‌ಸೈಟ್‌ಗಳಲ್ಲಿ ಬಳಸದ ಅನನ್ಯ ಪಾಸ್‌ವರ್ಡ್ ಅನ್ನು ಬಳಸಿ
  • ನಿಮ್ಮ ಪಾಸ್‌ವರ್ಡ್ ಸಣ್ಣ ಮತ್ತು ದೊಡ್ಡ ಅಕ್ಷರಗಳು, ಸಂಖ್ಯೆಗಳು ಮತ್ತು ಕನಿಷ್ಠ ಒಂದು ಚಿಹ್ನೆಯನ್ನು ಒಳಗೊಂಡಂತೆ ಕನಿಷ್ಠ 10 ಅಕ್ಷರಗಳನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಲಾಗಿನ್ ಮಾಹಿತಿಯನ್ನು ಮಾತ್ರವೇ ಒದಗಿಸಿ https://www.uber.com ನಲ್ಲಿ
  • ನಿಮ್ಮ ಕಂಪ್ಯೂಟರ್ ಇತ್ತೀಚಿನ ನವೀಕರಣಗಳು ಮತ್ತು ಆಂಟಿ-ವೈರಸ್ ಸಾಫ್ಟ್‌ವೇರ್ ಅನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ