ಸಾಧನದ ಮಾಲೀಕತ್ವವನ್ನು ಪರಿಶೀಲಿಸಲು ನಿಮ್ಮ ಫೋನ್ ಸಂಖ್ಯೆಯ ಸ್ಕ್ರೀನ್ಶಾಟ್ ಅನ್ನು ನಾವು ಕೇಳಬಹುದು. ನಿಮ್ಮ ಸಾಧನಕ್ಕೆ ಅನ್ವಯವಾಗುವ ಕೆಳಗಿನ ಹಂತಗಳನ್ನು ಅನುಸರಿಸಿ.
iOS ಸಾಧನಗಳು
- ಸಾಧನದಲ್ಲಿ "ಸೆಟ್ಟಿಂಗ್ಸ್" ತೆರೆಯಿರಿ.
- ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಫೋನ್" ಆಯ್ಕೆಮಾಡಿ.
- "ನನ್ನ ಸಂಖ್ಯೆ" ಪಕ್ಕದಲ್ಲಿ ಪಟ್ಟಿ ಮಾಡಲಾದ ಸಂಖ್ಯೆಯನ್ನು ಸೆರೆಹಿಡಿಯುವ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ.
- ನಿಮ್ಮ ಸಾಧನದಲ್ಲಿರುವ "ಫೋಟೋಗಳು" ಆ್ಯಪ್ನಲ್ಲಿ ನಿಮ್ಮ ಉಳಿದ ಚಿತ್ರಗಳೊಂದಿಗೆ ಈ ಚಿತ್ರವನ್ನು ಸಹ ಉಳಿಸಲಾಗುತ್ತದೆ.
Android ಸಾಧನಗಳು
ನಿಮ್ಮ Android OS ನ ಆವೃತ್ತಿಯನ್ನು ಅವಲಂಬಿಸಿ ಸ್ಥಳವು ಬದಲಾಗಬಹುದು. ಅನೇಕ ಆವೃತ್ತಿಗಳಿಗೆ, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
- "ಸೆಟ್ಟಿಂಗ್ಸ್" ತೆರೆಯಿರಿ.
- ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಫೋನ್ ಬಗ್ಗೆ" ಅಥವಾ "ಸಾಧನದ ಬಗ್ಗೆ" ಆಯ್ಕೆಮಾಡಿ.
- ಈ ಪರದೆಯ ಮೇಲೆ ಫೋನ್ ಸಂಖ್ಯೆಯನ್ನು ಪ್ರದರ್ಶಿತವಾಗಬಹುದು. ಇಲ್ಲದಿದ್ದಲ್ಲಿ, "ಫೋನ್ ಗುರುತು" ಅಥವಾ "ಸ್ಟೇಟಸ್" ನಂತರ "SIM ಸ್ಟೇಟಸ್" ಆಯ್ಕೆಮಾಡಿ.
- ಅದೇ ಸಮಯದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಡೌನ್ ಕೀಯನ್ನು ಒತ್ತುವ ಮೂಲಕ ನಿಮ್ಮ ಸಂಖ್ಯೆಯ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ.