Uber ಬೌನ್ಸ್ ಸವಾರಿಗಳು ಬೇರೆ ಸ್ಥಳದಲ್ಲಿರುವ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಟ್ರಿಪ್ಗಳನ್ನು ವಿನಂತಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ.
ಬೇರೆ ಯಾರಿಗಾದರೂ ಸವಾರಿಯನ್ನು ವಿನಂತಿಸಿಕೊಳ್ಳಲು:
- "ಎಲ್ಲಿಗೆ?" ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ನೇಹಿತರ ಪಿಕಪ್ ಸ್ಥಳವನ್ನು ನಮೂದಿಸಿ.
- "ಪಿಕಪ್ ದೃಢೀಕರಿಸಿ" ಟ್ಯಾಪ್ ಮಾಡಿ.
- ನಿಮ್ಮ ಸ್ನೇಹಿತರ ಸಂಪರ್ಕ ವಿವರಗಳನ್ನು ನಮೂದಿಸಿ: ಸಂಪರ್ಕ ಪಿಕ್ಕರ್ನಿಂದ ಅವರ ಸಂಪರ್ಕ ಮಾಹಿತಿಯನ್ನು ಆಯ್ಕೆಮಾಡಿ ಅಥವಾ ಅವರ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ.
- ನಿಮ್ಮ ಸ್ನೇಹಿತರನ್ನು ಆಯ್ಕೆಮಾಡಿ. ಅವರ ಐಕಾನ್ ಮೇಲೆ ಬಾಣವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
- "ಸವಾರಿಯನ್ನು ದೃಢೀಕರಿಸಿ" ಮತ್ತು "ಮುಂದೆ" ಟ್ಯಾಪ್ ಮಾಡಿ.
"ಬೇರೆ ಯಾರೋ" ಎಂದು ಆರಿಸುವ ಆಯ್ಕೆಯನ್ನು ನೀವು ನೋಡದಿದ್ದಲ್ಲಿ, ಬದಲಿಗೆ ಇದನ್ನು ಪ್ರಯತ್ನಿಸಿ:
- "ಎಲ್ಲಿಗೆ?" ಬಾಕ್ಸ್ ಮೇಲೆ ಟ್ಯಾಪ್ ಮಾಡಿ.
- ನಿಮ್ಮ ಹೆಸರಿನ ಪಕ್ಕದಲ್ಲಿರುವ ಡ್ರಾಪ್ಡೌನ್ ಐಕಾನ್ ಅನ್ನು ಟ್ಯಾಪ್ ಮಾಡಿ.
- ಮೇಲೆ ವಿವರಿಸಿದ ಉಳಿದ ಹಂತಗಳ ಮೂಲಕ ಮುಂದುವರೆಯಿರಿ.
ಒಮ್ಮೆ ಟ್ರಿಪ್ ಅನ್ನು ಸ್ವೀಕರಿಸಿದ ನಂತರ, ಸವಾರರು ಸವಾರಿಯ ಕುರಿತು ವಿವರವಾದ ಸೂಚನೆಗಳೊಂದಿಗೆ Uber ನಿಂದ ಪಠ್ಯ ಸಂದೇಶಗಳನ್ನು ಪಡೆಯುತ್ತಾರೆ.
ಬೇರೆಯವರಿಗೆ ಬುಕ್ ಮಾಡಿದ ಸವಾರಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ವೀಕ್ಷಿಸಿ ಈ ಲೇಖನವನ್ನು.