TalkBack ನೊಂದಿಗೆ ನಿಮ್ಮ ಚಾಲಕರನ್ನು ಸಂಪರ್ಕಿಸಿ

ನೀವು ಅವರ ಜೊತೆಗೆ ಸಂಪರ್ಕಕ್ಕೆ ಬಂದ ನಂತರ ನಿಮ್ಮ ಚಾಲಕರಿಗೆ ಕರೆ ಮಾಡುವ ಅಥವಾ ಸಂದೇಶ ನೀಡುವ ಆಯ್ಕೆಗಳು ನಿಮ್ಮ ಪರದೆಯ ಕೆಳಭಾಗದಲ್ಲಿರುವ ಬಿಳಿ ಪಟ್ಟಿಯಲ್ಲಿ ಗೋಚರಿಸುತ್ತವೆ.

ಬಿಳಿ ಪಟ್ಟಿಯಲ್ಲಿ ಫೋನ್ ಐಕಾನ್ ಮತ್ತು ಸಂದೇಶ ಇನ್‌ಪುಟ್ ಬಾಕ್ಸ್ ಇರುತ್ತದೆ, ಅಲ್ಲಿ ಚಾಲಕರ ಹೆಸರು ಮತ್ತು ವಾಹನದ ಮಾಹಿತಿಗಳು ಗೋಚರಿಸುತ್ತವೆ.

ನಿಮ್ಮ ಚಾಲಕರಿಗೆ ಕರೆ ಮಾಡಲು:

  1. ಒಂದು ಬಾರಿ ಟ್ಯಾಪ್ ಮಾಡಿ, ನಂತರ ನಿಮ್ಮ ಚಾಲಕರ ಮಾಹಿತಿಯಡಿಯಲ್ಲಿ ರೌಂಡ್ ಫೋನ್ ಐಕಾನ್ ಅನ್ನು ಎರಡು ಬಾರಿ ಟ್ಯಾಪ್ ಮಾಡಿ
  2. ಒಂದು ಬಾರಿ ಟ್ಯಾಪ್ ಮಾಡಿ ನಂತರ ಫೋನ್ ಸಂಖ್ಯೆ ಅಥವಾ "ಉಚಿತ ಕರೆ" ಬಟನ್ ಅನ್ನು ಎರಡು ಬಾರಿ ಟ್ಯಾಪ್ ಮಾಡಿ
  3. ನೀವು ಆರಿಸಿದ ಆಯ್ಕೆಯ ಪ್ರಕಾರ ನಿಮ್ಮ ಫೋನ್ ಸ್ವಯಂಚಾಲಿತವಾಗಿ ನಿಮ್ಮ ಚಾಲಕರಿಗೆ ಕರೆಯನ್ನು ಮಾಡುತ್ತದೆ

ನಿಮ್ಮ ಚಾಲಕರಿಗೆ ಸಂದೇಶ ಕಳುಹಿಸಲು:

  1. ಒಂದು ಬಾರಿ ಟ್ಯಾಪ್ ಮಾದಿ, ನಂತರ ನಿಮ್ಮ ಚಾಲಕರ ಮಾಹಿತಿಯಡಿಯಲ್ಲಿ ಪಠ್ಯ ಕ್ಷೇತ್ರವನ್ನು ಎರಡು ಬಾರಿ ಟ್ಯಾಪ್ ಮಾಡಿ
  2. ನಿಮ್ಮ ಸಂದೇಶವನ್ನು ಟೈಪ್ ಮಾಡಿ ಅಥವಾ ಮಾತನಾಡಿ
  3. ಒಂದು ಬಾರಿ ಟ್ಯಾಪ್ ಮಾಡಿ, ನಂತರ "ಕಳುಹಿಸು" ಬಟನ್ ಅನ್ನು ಎರಡು ಬಾರಿ ಟ್ಯಾಪ್ ಮಾಡಿ