ಸಂಪರ್ಕಗಳನ್ನು Uber ಹೇಗೆ ಬಳಸಿಕೊಳ್ಳುತ್ತದೆ?

ಮೇ 2018 ರಿಂದ ಪ್ರಾರಂಭಿಸಿ, ನಿಮ್ಮ ಫೋನ್‌ನ ಸಂಪರ್ಕಗಳನ್ನು ನಿಮ್ಮ ಖಾತೆಗೆ ಸೇರಿಸುವುದನ್ನು Uber ಆ್ಯಪ್‌ ಇನ್ನು ಮುಂದೆ ಬೆಂಬಲಿಸುವುದಿಲ್ಲ. ಈ ಐಚ್ಛಿಕ ವೈಶಿಷ್ಟ್ಯವು ನಿಮಗಾಗಿ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಮಾಡಲು Uber ಆ್ಯಪ್‌ಗೆ ಅವಕಾಶ ಮಾಡಿಕೊಟ್ಟಿದೆ (ಉದಾಹರಣೆಗೆ ಯಾವ ಸ್ನೇಹಿತರನ್ನು ಇನ್ವೈಟ್ ಮಾಡಬೇಕೆಂದು ಸೂಚಿಸುವುದು). ನಿಮ್ಮ ಫೋನ್‌ನಲ್ಲಿನ ಸಂಪರ್ಕಗಳು ಇನ್ನು ಮುಂದೆ Uber ಸರ್ವರ್‌ಗಳಿಗೆ ಸಿಂಕ್ ಆಗುವುದಿಲ್ಲ ಮತ್ತು ಹಿಂದೆ ಸಿಂಕ್ ಮಾಡಿದ ಸಂಪರ್ಕ ಮಾಹಿತಿಯನ್ನು ಅಳಿಸಲಾಗುತ್ತದೆ.

ಆ್ಯಪ್‌ನಲ್ಲಿ ನಿಮ್ಮ ವಿಳಾಸ ಪುಸ್ತಕವನ್ನು ಪ್ರದರ್ಶಿಸುವ ವೈಶಿಷ್ಟ್ಯಗಳನ್ನು ನೀವು ಬಳಸಿದಲ್ಲಿ ಸಂಪರ್ಕಗಳ ಅನುಮತಿಯನ್ನು ಆ್ಯಪ್‌ ಕೇಳುತ್ತಲೇ ಇರುತ್ತದೆ, ಉದಾಹರಣೆಗೆ:

  • ವಿಶ್ವಾಸಾರ್ಹ ಸಂಪರ್ಕಗಳು
  • ವಿಭಜಿತ ದರಗಳು
  • ETA ಹಂಚಿಕೊಳ್ಳಿ
  • ಸ್ನೇಹಿತನನ್ನು ಆಮಂತ್ರಿಸಿ

ನೀವು ಸ್ನೇಹಿತರೊಂದಿಗೆ ದರಗಳನ್ನು ವಿಭಜಿಸುವಂತಹ ವೈಶಿಷ್ಟ್ಯಗಳನ್ನು ಬಳಸುವಾಗ ನೀವು ಆಯ್ಕೆ ಮಾಡುವ ನಿರ್ದಿಷ್ಟ ಸಂಪರ್ಕಗಳ ಮಾಹಿತಿಯನ್ನು Uber ಸಂಗ್ರಹಿಸುವುದನ್ನು ಮುಂದುವರಿಸುತ್ತದೆ.