ಕೆಲವು ಅಗತ್ಯತೆಗಳನ್ನು ಪೂರೈಸುವ ಸವಾರಿ ಅಥವಾ Uber Eats ಆರ್ಡರ್ಗಳಿಗೆ ಕ್ರೆಡಿಟ್ ನೀಡಲು ಬ್ಯುಸಿನೆಸ್ಗಳು ವೋಚರುಗಳನ್ನು ಒದಗಿಸಬಹುದು. ನಿಮ್ಮ ವೋಚರ್ ಅನ್ನು ಕೇವಲ ಸವಾರಿಗಳಿಗೆ ಬಳಸಬಹುದೇ ಅಥವಾ ಇದನ್ನು ಸವಾರಿಗಳು ಹಾಗೂ ಆರ್ಡರ್ಗಳಿಗೂ ಬಳಸಬಹುದೇ ಎನ್ನುವುದನ್ನು ಆ್ಯಪ್ ನಿಮಗೆ ತಿಳಿಸುತ್ತದೆ.
ನೀವು Uber for Business ಬಳಸುವ ನಿರ್ವಾಹಕರೇ ಅಥವಾ ಸಂಯೋಜಕರೇ? Uber for Business ಸಹಾಯ ಕೇಂದ್ರದ ಮೂಲಕ ವೋಚರ್ಗಳನ್ನು ನಿರ್ವಹಿಸುವ ಕುರಿತು ಸಹಾಯವನ್ನು ಪಡೆಯಿರಿ.
ನೀವು ನಿಮ್ಮ ವೈಯಕ್ತಿಕ ಪ್ರೊಫೈಲ್ ಅನ್ನು ಬಳಸುತ್ತಿರುವಿರಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಬ್ಯುಸಿನೆಸ್ ಪ್ರೊಫೈಲ್ನಲ್ಲಿ ವೋಚರ್ಗಳು ಕಾರ್ಯನಿರ್ವಹಿಸುವುದಿಲ್ಲ.
ಗಮನಿಸಿ: ಟ್ರಿಪ್ ಅಥವಾ ಆರ್ಡರ್ ಬೆಲೆಗೆ ಮಾತ್ರವೇ ವೋಚರುಗಳು ಅನ್ವಯಿಸುತ್ತವೆ. ನಿಮ್ಮ ಚಾಲಕರಿಗೆ ನೀಡುವ ಟಿಪ್ಸ್ ಮೊತ್ತ ಹಾಗೂ ವೋಚರ್ ಮೊತ್ತವನ್ನು ಮೀರುವ ಮೊತ್ತವನ್ನು ನಿಮ್ಮ ವೈಯಕ್ತಿಕ ಪಾವತಿ ವಿಧಾನಕ್ಕೆ ವಿಧಿಸಲಾಗುತ್ತದೆ.
ಗಮನಿಸಿ: ನೀವು ಒಂದಕ್ಕಿಂತ ಹೆಚ್ಚು ಸವಾರಿ ಪ್ರೊಫೈಲ್ ಹೊಂದಿದ್ದಲ್ಲಿ, ಅದನ್ನು ಟ್ರಿಪ್ಗೆ ಬಳಸುವ ಮೊದಲು ವೋಚರ್ ಹೊಂದಿರುವ ಪ್ರೊಫೈಲ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.