Uber ಬ್ಯುಸಿನೆಸ್ ಖಾತೆಯ ಅಡ್ಮಿನ್ಗಳಿಗೆ ಬ್ಯುಸಿನೆಸ್ ಪ್ರೊಫೈಲ್ನಲ್ಲಿ ಕೈಗೊಂಡ ಟ್ರಿಪ್ಗಳಿಗೆ ಖರ್ಚಿನ ಕೋಡ್ಗಳು ಬೇಕಾಗಬಹುದು.
ನಿಮ್ಮ ಅಡ್ಮಿನ್ಗೆ ಖರ್ಚಿನ ಕೋಡ್ಗಳು ಅಗತ್ಯವಿದ್ದಲ್ಲಿ, ಪಟ್ಟಿಯಿಂದ ಖರ್ಚಿನ ಕೋಡ್ ಅನ್ನು ಆಯ್ಕೆ ಮಾಡಲು ಅಥವಾ ಸವಾರಿಯನ್ನು ವಿನಂತಿ ಮಾಡುವ ಮೊದಲು ನಿಮ್ಮದೇ ಆದ ಒಂದು ಕೋಡ್ ನಮೂದಿಸಲು ಪ್ರಾಂಪ್ಟ್ ಮಾಡಲಾಗುತ್ತದೆ.
ನೀವು ಪ್ರಾಂಪ್ಟ್ ಪಡೆಯದಿದ್ದಲ್ಲಿ ಆದರೆ ಖರ್ಚಿನ ಕೋಡ್ ಅಥವಾ ಮೆಮೊವನ್ನು ನಮೂದಿಸಲು ಬಯಸಿದಲ್ಲಿ, ನೀವು ಸವಾರಿಗಾಗಿ ವಿನಂತಿಸಿದ ನಂತರ ನಿಮ್ಮ ಪರದೆಯ ಕೆಳಭಾಗದಲ್ಲಿರುವ ಖರ್ಚಿನ ಮಾಹಿತಿ ಟ್ಯಾಬ್ನಲ್ಲಿ ನೀವು ಹಾಗೆ ಮಾಡಬಹುದು.
ಸೂಚನೆ: ಟ್ರಿಪ್ ಮುಗಿಯುವ ಮೊದಲು, ಖರ್ಚಿನ ಮೆಮೊವನ್ನು ಭರ್ತಿ ಮಾಡಬೇಕು. ಟ್ರಿಪ್ ಪೂರ್ಣಗೊಂಡ ನಂತರ ನೀವು ಖರ್ಚಿನ ಮಾಹಿತಿಯನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ.
ನಿಮ್ಮ ಮಾಸಿಕ ಸ್ಟೇಟ್ಮೆಂಟ್ ಮತ್ತು ಟ್ರಿಪ್ ರಸೀತಿಗಳಲ್ಲಿ ಖರ್ಚಿನ ಕೋಡ್ಗಳನ್ನು ಸೂಚಿಸಲಾಗಿರುತ್ತದೆ. ನಿಮ್ಮ ಕಂಪನಿಯ ಅಡ್ಮಿನ್ಗಳು ಸಹ ತಮ್ಮ ಡ್ಯಾಶ್ಬೋರ್ಡ್ನಲ್ಲಿ ಈ ಮಾಹಿತಿಗೆ ಪ್ರವೇಶ ಹೊಂದಿರುತ್ತಾರೆ. ನಿಮ್ಮ ಕಂಪನಿಯ ಖರ್ಚಿನ ಮೆಮೊ ನೀತಿಯ ಬಗ್ಗೆ ನಿಮ್ಮ ಅಡ್ಮಿನ್ ರವರಲ್ಲಿ ಕೇಳಿ.