Uber ಆ್ಯಪ್ನಲ್ಲಿ ಸವಾರಿಗಾಗಿ ಹೇಗೆ ವಿನಂತಿಸುವುದು ಎನ್ನುವುದು ಇಲ್ಲಿದೆ:
- ನಿಮ್ಮ ಆ್ಯಪ್ ತೆರೆಯಿರಿ ಮತ್ತು ನೀವು ತಲುಪಬೇಕಾದ ಸ್ಥಳವನ್ನು "ಎಲ್ಲಿಗೆ?" ಕ್ಷೇತ್ರದಲ್ಲಿ ನಮೂದಿಸಿ
- ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಎಲ್ಲಾ ವಾಹನ ಆಯ್ಕೆಗಳನ್ನು ವೀಕ್ಷಿಸಲು ಮೇಲಕ್ಕೆ ಸ್ವೈಪ್ ಮಾಡಿ. ನಿಮ್ಮ ಸವಾರಿಗಾಗಿ ಆಯ್ಕೆಮಾದುವ ಸಲುವಾಗಿ ಮೊದಲು ಒಂದನ್ನು, ನಂತರ "Uber X ಆರಿಸಿ" ಅನ್ನು ಟ್ಯಾಪ್ ಮಾಡಿ (ಬಟನ್ ನಿಮ್ಮ ವಾಹನದ ಆಯ್ಕೆಯಾಗಿರುತ್ತದೆ)
- ನಿಮ್ಮ ಪಿಕಪ್ ಸ್ಥಳವನ್ನು ಖಚಿತಪಡಿಸಲು ನಿಮ್ಮನ್ನು ಕೇಳಬಹುದು. ಹಾಗಿದ್ದಲ್ಲಿ, ನಕ್ಷೆಯಲ್ಲಿ ಪಿನ್ ಅನ್ನು ಸರಿಸಿ ಅಥವಾ ಸ್ಥಳಗಳ ಪಟ್ಟಿಯಿಂದ ಆಯ್ಕೆಮಾಡಿ. ಪ್ರದೇಶದಲ್ಲಿನ ಅರ್ಹ ಚಾಲಕರಿಗೆ ನಿಮ್ಮ ವಿನಂತಿಯನ್ನು ಕಳುಹಿಸಲು "ಪಿಕಪ್ ದೃಡೀಕರಿಸಿ" ಅನ್ನು ಒತ್ತಿ.
- ನಿಮ್ಮ ಪಿಕಪ್ ಅನ್ನು ಖಚಿತಪಡಿಸಲು ನಿಮ್ಮನ್ನು ಕೇಳದಿದ್ದಲ್ಲಿ, ಆ ಪ್ರದೇಶದಲ್ಲಿ ಇರುವ ಅರ್ಹ ಚಾಲಕರಿಗೆ ನಿಮ್ಮ ವಿನಂತಿಯನ್ನು ಕಳುಹಿಸಲು “UberX ಅನ್ನು ದೃಢೀಕರಿಸಿ” (ಬಟನ್ ನಿಮ್ಮ ವಾಹನ ಆಯ್ಕೆಯಾಗಿರುತ್ತದೆ) ಟ್ಯಾಪ್ ಮಾಡಿ.
- ಅರ್ಹ ಚಾಲಕನೊಂದಿಗೆ ಹೊಂದಾಣಿಕೆಯಾಗುವ ಅಂದಾಜು ಸಮಯವನ್ನು ನೀವು ವೀಕ್ಷಿಸುತ್ತೀರಿ. ನೀವು ಆಯ್ಕೆ ಮಾಡಿದ ಸವಾರಿಯ ಮಾದರಿಗೆ ಯಾವುದೇ ಚಾಲಕರುಗಳು ಲಭ್ಯವಿಲ್ಲದಿದ್ದಲ್ಲಿ, ಹತ್ತಿರದ ಲಭ್ಯವಿರುವ ಚಾಲಕರುಗಳೊಂದಿಗೆ ಪರ್ಯಾಯ ಸವಾರಿ ಮಾದರಿಯನ್ನು ಆ್ಯಪ್ ಸೂಚಿಸುತ್ತದೆ.
- ಒಮ್ಮೆ ಚಾಲಕರು ನಿಮ್ಮ ವಿನಂತಿಯನ್ನು ಸ್ವೀಕರಿಸಿದ ನಂತರ, ನಿಮಗೆ ಅವರ ಸ್ಥಳ ಮತ್ತು ಅಂದಾಜು ಆಗಮನದ ಸಮಯ ನಕ್ಷೆಯಲ್ಲಿ ಕಾಣಿಸುತ್ತದೆ.
ನಿಮ್ಮ ವಿನಂತಿಗೆ ಯಾವುದೇ ಚಾಲಕರುಗಳು ಲಭ್ಯವಿಲ್ಲದಿದ್ದಲ್ಲಿ ಆ್ಯಪ್ ನಿಮಗೆ ತಿಳಿಸುತ್ತದೆ.
ನಿಮ್ಮ ಚಾಲಕರು ನಿಮ್ಮ ಪಿಕಪ್ ಸ್ಥಳಕ್ಕೆ ಹತ್ತಿರದಲ್ಲಿದ್ದಾಗ Uber ನಿಮಗೆ ಅಧಿಸೂಚನೆಗಳನ್ನು ಕಳುಹಿಸುತ್ತದೆ.
ಕೆಲವು ನಗರಗಳಲ್ಲಿ ನೀವು ಅನೇಕ ನಿಲುಗಡೆಗಳೊಂದಿಗೆ ಸವಾರಿ ಮಾಡಲು ವಿನಂತಿಸಬಹುದು.
ಸವಾರಿಗಾಗಿ ಬೇಗ ಬರುವಂತೆ ವಿನಂತಿಸುವ ಸಲುವಾಗಿ ನಿಮ್ಮ ನೆಚ್ಚಿನ ಸ್ಥಳಗಳನ್ನು ಸಹ ನೀವು ಉಳಿಸಿಕೊಳ್ಳಬಹುದು:
IOS ನಲ್ಲಿ ಉಳಿಸಿದ ಸ್ಥಳಗಳನ್ನು ಸೇರಿಸಲಾಗುತ್ತಿದೆ
Android ನಲ್ಲಿ ಉಳಿಸಿದ ಸ್ಥಳಗಳನ್ನು ಸೇರಿಸಲಾಗುತ್ತಿದೆ