ನಾನು ಚಾಲಕನಿಗೆ ನೀಡಿರುವ ರೇಟಿಂಗ್ ಅನ್ನು ಬದಲಿಸುವುದು ಹೇಗೆ?

ನಿಮ್ಮ ಟ್ರಿಪ್ ನಂತರ ನಿಮಗೆ ಇಮೇಲ್‌ನಲ್ಲಿ ರಸೀತಿಯು ತಲುಪಿದ ಮೇಲೆ, ನೀವು ಚಾಲಕರಿಗೆ ನೀಡಿದ ಸ್ಟಾರ್ ರೇಟಿಂಗ್ ಅನ್ನು ಬದಲಾಯಿಸಬಹುದು.

ಇಮೇಲ್‌ನಲ್ಲಿ, “ರೇಟ್‌ ಮಾಡಿ ಅಥವಾ ಟಿಪ್ ನೀಡಿ” ಆಯ್ಕೆಮಾಡಿ. ನಿಮ್ಮನ್ನು uber.com ನಲ್ಲಿನ ನಿಮ್ಮ ಖಾತೆಗೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಚಾಲಕರಿಗೆ ನೀಡಿದ ಸ್ಟಾರ್ ರೇಟಿಂಗ್ ಅನ್ನು ನವೀಕರಿಸಬಹುದು. ಒಂದು ಟ್ರಿಪ್ ರದ್ದುಗೊಂಡಿದ್ದಲ್ಲಿ, ಆ ಚಾಲಕರನ್ನು ರೇಟ್ ಮಾಡುವ ಆಯ್ಕೆ ನಿಮಗೆ ಕಾಣುವುದಿಲ್ಲ.

ರಸೀತಿ ಇಮೇಲ್ ಅನ್ನು ಮರುಕಳುಹಿಸಲು: 1. ನಿಮ್ಮ ಆ್ಯಪ್‌ ಮೆನು ತೆರೆಯಿರಿ ಮತ್ತು “ನಿಮ್ಮ ಟ್ರಿಪ್‌ಗಳು” ಆಯ್ಕೆಮಾಡಿ 2. ಟ್ರಿಪ್ ಆಯ್ಕೆ ಮಾಡಿ ಹಾಗೂ ನಂತರ “ರಸೀತಿ” ಒತ್ತಿ 3. ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಇಮೇಲ್ ಮರುಕಳುಹಿಸಿ” ಅನ್ನು ಒತ್ತಿ

ದಯವಿಟ್ಟು ಗಮನಿಸಿ, ನೀವು ಚಾಲಕರಿಗೆ 1 ಸ್ಟಾರ್ ರೇಟ್ ಮಾಡಿದಲ್ಲಿ, ಭವಿಷ್ಯದಲ್ಲಿ ಆ ಚಾಲಕ‌ರೊಂದಿಗೆ ನಿಮ್ಮನ್ನು ಹೊಂದಾಣಿಕೆ ಮಾಡದಿರಲು ನಾವು ಪ್ರಯತ್ನಿಸುತ್ತೇವೆ.

ಸವಾರರು ಮತ್ತು ಚಾಲಕರು ಇಬ್ಬರನ್ನೂ ಬೆಂಬಲಿಸಲು ರೇಟಿಂಗ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ನಿಖರವಾದ ರೇಟಿಂಗ್ ನೀಡಲು ಮತ್ತು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಸಮಯ ವ್ಯಯಿಸುವ ಮೂಲಕ, Uber ಪ್ಲಾಟ್‌ಫಾರ್ಮ್‌ನಲ್ಲಿರುವ ಪ್ರತಿಯೊಬ್ಬರಿಗೂ ಸವಾರಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನೀವು ನಮಗೆ ಸಹಾಯ ಮಾಡುತ್ತಿರುವಿರಿ.