ಕ್ಯಾಮೆರಾಗಳು ಮತ್ತು ರೆಕಾರ್ಡಿಂಗ್

ಸಾರಿಗೆ ಸೇವೆಗಳನ್ನು ಪೂರೈಸುವ ಉದ್ದೇಶಕ್ಕಾಗಿ ಸವಾರರುಗಳನ್ನು ರೆಕಾರ್ಡ್ ಮಾಡಲು ವೀಡಿಯೊ ಕ್ಯಾಮೆರಾಗಳು, ಡ್ಯಾಶ್ ಕ್ಯಾಮ್‌ಗಳು ಅಥವಾ ಇತರ ರೆಕಾರ್ಡಿಂಗ್ ಸಾಧನಗಳನ್ನು ಸ್ಥಾಪಿಸಲು ಮತ್ತು ಬಳಸಲು Uber ತನ್ನ ಚಾಲಕರಿಗೆ ಅನುಮತಿಸುತ್ತದೆ.

ಗಮನಿಸಿ: ವಾಹನಗಳಲ್ಲಿ ರೆಕಾರ್ಡಿಂಗ್ ಉಪಕರಣಗಳನ್ನು ಬಳಸುವ ವ್ಯಕ್ತಿಗಳು ಸವಾರರಿಗೆ ಅವರನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂದು ಹೇಳಿ ಅವರಿಂದ ಸಮ್ಮತಿ ಪಡೆಯುವುದನ್ನು ಸ್ಥಳೀಯ ನಿಯಮಾವಳಿಗಳು ಅಗತ್ಯಗೊಳಿಸಿರಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ. ಈ ನಿಯಮಗಳು ಅನ್ವಯವಾಗುತ್ತವೆ ಎನ್ನುವುದನ್ನು ನಿರ್ಧರಿಸಲು ಸ್ಥಳೀಯ ನಿಯಮಾವಳಿಗಳನ್ನೊಮ್ಮೆ ಪರಿಶೀಲಿಸಿ.

ಜೊತೆಗೆ, ನಮ್ಮ ಸಮುದಾಯ ಮಾರ್ಗಸೂಚಿಗಳು ಸಾರಿಗೆ ಸೇವೆಗಳನ್ನು ಪೂರೈಸುವ ಉದ್ದೇಶಕ್ಕಾಗಿ ಹೊರತುಪಡಿಸಿ ಯಾವುದೇ ಕಾರಣಕ್ಕಾಗಿ ಬಳಕೆದಾರರಿಗೆ ಯಾವುದೇ ಇತರ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಬಳಸಲು ಅನುಮತಿಸುವುದಿಲ್ಲ. ಅಗೌರವ ಅಥವಾ ಅಸುರಕ್ಷಿತವಾಗಿರುವ ನಡವಳಿಕೆ, ಭಾಷೆ ಅಥವಾ ಸನ್ನೆಗಳಿಗಾಗಿ ಖಾತೆಗೆ ಪ್ರವೇಶವನ್ನು ತೆಗೆದುಹಾಕಬಹುದು ಎನ್ನುವುದನ್ನು ಅವು ನಿರ್ದಿಷ್ಟಪಡಿಸಿರುತ್ತದೆ. ವ್ಯಕ್ತಿಯ ಚಿತ್ರ, ಆಡಿಯೋ ಅಥವಾ ವೀಡಿಯೊ ರೆಕಾರ್ಡಿಂಗ್ ಅನ್ನು ಪ್ರಸಾರ ಮಾಡುವುದು ಈ ನಿಯಮಗಳ ಉಲ್ಲಂಘನೆಯಾಗುತ್ತದೆ ಹಾಗೂ ಖಾತೆಗೆ ಪ್ರವೇಶವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು.