Uber ಒಂದು ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಆಗಿದೆ. ನಮ್ಮ ಸ್ಮಾರ್ಟ್‌ಫೋನ್ ಆ್ಯಪ್‌ಗಳು ಚಾಲಕರು ಮತ್ತು ಸವಾರರನ್ನು ಸಂಪರ್ಕಗೊಳಿಸುತ್ತವೆ.
Uber ಕಾರ್ಯಾಚರಣೆ ನಡೆಸುವ ನಗರಗಳಲ್ಲಿ, ಸವಾರಿಗೆ ವಿನಂತಿಸಲು ಆ್ಯಪ್ ಅನ್ನು ಬಳಸಿ. ಸಮೀಪದ ಚಾಲಕರು ನಿಮ್ಮ ವಿನಂತಿಯನ್ನು ಒಪ್ಪಿಕೊಂಡಾಗ, ಅವರಿಗೆ ನಿಮ್ಮ ಪಿಕಪ್ ಸ್ಥಳಕ್ಕೆ ಬರಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವ ಅಂದಾಜು ಆಗಮನ ಸಮಯವನ್ನು ಆ್ಯಪ್ ಪ್ರದರ್ಶಿಸುತ್ತದೆ ಚಾಲಕರು ಇನ್ನೇನು ಆಗಮಿಸಲಿದ್ದಾರೆ ಎಂದಾಗ ಆ್ಯಪ್ ಅದನ್ನು ನಿಮಗೆ ಸೂಚಿಸುತ್ತದೆ.
ನೀವು ಯಾವ ಚಾಲಕರ ಜೊತೆಗೆ ಸವಾರಿ ಮಾಡುವಿರೋ, ಅವರ ಮೊದಲ ಹೆಸರು, ವಾಹನದ ಮಾದರಿ ಹಾಗೂ ಪರವಾನಗಿ ಪ್ಲೇಟ್ ಸಂಖ್ಯೆ ಕುರಿತಾದ ಮಾಹಿತಿಯನ್ನು ನಿಮ್ಮ ಆ್ಯಪ್ ಒದಗಿಸುತ್ತದೆ. ನೀವಿಬ್ಬರೂ ನಿಮ್ಮ ಪಿಕಪ್ ಸ್ಥಳದಲ್ಲಿ ಸಂಪರ್ಕಿಸಲು ಈ ಮಾಹಿತಿಯು ಸಹಾಯ ಮಾಡುತ್ತದೆ.
ಸವಾರಿಯ ಸಮಯದಲ್ಲಿ ಅಥವಾ ಅದಕ್ಕೂ ಮೊದಲು ನಿಮ್ಮ ಆದ್ಯತೆಯ ತಲುಪಬೇಕಾದ ಸ್ಥಳವನ್ನು ನಮೂದಿಸಲು ಆ್ಯಪ್ ಅನ್ನು ಬಳಸಿ. ನೀವು ಆದ್ಯತೆಯ ಮಾರ್ಗವನ್ನು ಹೊಂದಿದ್ದಲ್ಲಿ, ಹೋಗಬೇಕಾದ ಮಾರ್ಗಗಳ ಕುರಿತು ಒಟ್ಟಿಗೆ ಮಾತನಾಡಿದರೆ ತುಂಬಾ ಸಹಕಾರಿ.
ನೀವು ನಿಮ್ಮ ತಲುಪಬೇಕಾದ ಸ್ಥಳಕ್ಕೆ ಬಂದಾಗ ಮತ್ತು ವಾಹನದಿಂದ ಕೆಳಗಿಳಿದಾಗ, ನಿಮ್ಮ ಟ್ರಿಪ್ ಕೊನೆಗೊಳ್ಳುತ್ತದೆ. ನಿಮ್ಮ ದರವನ್ನು ಸ್ವಯಂಚಾಲಿತವಾಗಿ ಲೆಕ್ಕಾಚಾರ ಮಾಡಲಾಗುತ್ತದೆ ಹಾಗೂ ನಿಮ್ಮ Uber ಖಾತೆಗೆ ಲಿಂಕ್ ಮಾಡಿರುವ ಪೇಮೆಂಟ್ ವಿಧಾನಕ್ಕೆ ಶುಲ್ಕವನ್ನು ವಿಧಿಸಲಾಗುತ್ತದೆ.
ಕೆಲವು ನಗರಗಳಲ್ಲಿ, ನಿಮ್ಮ ದರವನ್ನು ನಗದು ರೂಪದಲ್ಲಿ ಪಾವತಿಸಲು Uber ನಿಮಗೆ ಅವಕಾಶ ಮಾಡಿಕೊಡುತ್ತದೆ. ನೀವು ಸವಾರಿಯನ್ನು ವಿನಂತಿಸಿಕೊಳ್ಳುವ ಮೊದಲು ಈ ಆಯ್ಕೆಯನ್ನು ಮಾಡಬೇಕಾಗುತ್ತದೆ.
ಟ್ರಿಪ್ ಕೊನೆಗೊಂಡ ಕೂಡಲೇ, ನಿಮ್ಮ ಚಾಲಕರಿಗೆ 1 ರಿಂದ 5 ಸ್ಟಾರ್‌ಗಳ ತನಕದ ರೇಟಿಂಗ್ ನೀಡುವಂತೆ ಆ್ಯಪ್ ನಿಮ್ಮನ್ನು ಕೇಳುತ್ತದೆ. ಚಾಲಕರಿಗೆ ಸಹ ಸವಾರರ ಬಗ್ಗೆ ರೇಟಿಂಗ್ ನೀಡಲು ಕೇಳಲಾಗುತ್ತದೆ. ಪ್ರತಿಯೊಬ್ಬರಿಗೂ ಗೌರವ ಮತ್ತು ಹೊಣೆಗಾರಿಕೆಯನ್ನು ಹೊಂದಿದ ಸಮುದಾಯವನ್ನು ಬೆಳೆಸುವ ಸಲುವಾಗಿ Uber ನ ಪ್ರತಿಕ್ರಿಯೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.
ಸಹಾಯ ಕೇಂದ್ರದ ಇತರ ವಿಷಯಗಳನ್ನು ಅನ್ವೇಷಿಸುವ ಮೂಲಕ Uber ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಕುರಿತು ಇನ್ನಷ್ಟು ತಿಳಿಯಿರಿ. ನೀವು ನಿರ್ದಿಷ್ಟ ಪ್ರಶ್ನೆಗಳು ಮತ್ತು ಉತ್ತರಗಳನ್ನು ಸಹ ಹುಡುಕಬಹುದು.