ನಿಮ್ಮ ಪಿಕಪ್ ಸ್ಥಳ ಬದಲಾಯಿಸಲಾಗುತ್ತಿದೆ

ನೀವು ಒಂದು ಸವಾರಿಗಾಗಿ ವಿನಂತಿಸಿದಾಗ, ಹತ್ತಿರದ ಅತ್ಯುತ್ತಮ ಪಿಕಪ್ ಸ್ಥಳವನ್ನು ಸೂಚಿಸಲು GPS ಅನ್ನು ಆ್ಯಪ್ ಬಳಸುತ್ತದೆ.

ನಿಮಗೆ ಬೇರೆಯೇ ಪಿಕಪ್ ಸ್ಥಳವು ಬೇಕಾದಲ್ಲಿ:

  1. ನಕ್ಷೆಯಲ್ಲಿ ಪಿಕಪ್ ಸ್ಥಳದ ಲೇಬಲ್ ಮೇಲೆ ಟ್ಯಾಪ್ ಮಾಡಿ.
  2. ಒಂದು ಹೊಸ ವಿಳಾಸ ಅಥವಾ ಕಟ್ಟಡವನ್ನು ನಮೂದಿಸಿ
  3. ಆ್ಯಪ್‌ ಸೂಚಿಸಿದ ಸ್ಥಳಗಳಲ್ಲಿ ಒಂದನ್ನು ಆರಿಸಿ.

ನೀವು ಒಂದು ಸವಾರಿಗಾಗಿ ವಿನಂತಿ ಮಾಡಿದ ನಂತರವೂ ಕೂಡಾ ನಿಮ್ಮ ಪಿಕಪ್ ಸ್ಥಳವನ್ನು ಬದಲಾಯಿಸಬಹುದು. ಇದನ್ನು ಮಾಡಲು:

  1. ನಿಮ್ಮ ಪಿಕಪ್ ಸ್ಥಳದ ಪಕ್ಕದಲ್ಲಿರುವ "ತಿದ್ದುಪಡಿ ಮಾಡಿ" ಅನ್ನು ಟ್ಯಾಪ್ ಮಾಡಿ.
  2. ಹೊಸ ವಿಳಾಸವನ್ನು ಟೈಪ್ ಮಾಡಿ ಅಥವಾ ಬೂದು ವೃತ್ತದೊಳಗಿನ ನಕ್ಷೆಯಲ್ಲಿನ ಯಾವುದೇ ಸ್ಥಳಕ್ಕೆ ನಿಮ್ಮ ಪಿನ್ ಅನ್ನು ಎಳೆಯಿರಿ.
  3. ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು "ದೃಢೀಕರಿಸಿ" ಬಟನ್ ಟ್ಯಾಪ್ ಮಾಡಿ.

ನಿಮ್ಮ ಪಿಕಪ್ ಸ್ಥಳವನ್ನು ಒಂದು ಬಾರಿ ಮಾತ್ರವೇ ಹೊಂದಾಣಿಕೆ ಮಾಡಲು ನಿಮಗೆ ಸಾಧ್ಯವಾಗುತ್ತದೆ ಹಾಗೂ ಅದನ್ನು ನಿಮ್ಮ ಸ್ಕ್ರೀನ್ ಮೇಲೆ ತೋರಿಸಿರುವ ವೃತ್ತದೊಳಗೆ ಮಾತ್ರವೇ ಸರಿಸಬಹುದು.

Uber Pool ನಲ್ಲಿ ನಿಮ್ಮ ಪಿಕಪ್ ಸ್ಥಳವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.