ನಾನು ನನ್ನ ಫೋನ್ ಅನ್ನು ಒಂದು ವಾಹನದಲ್ಲಿ ಬಿಟ್ಟಿದ್ದೇನೆ

ನಿಮ್ಮ ಫೋನ್ ಅನ್ನು ನೀವು ವಾಹನದಲ್ಲಿ ಬಿಟ್ಟಿದ್ದಲ್ಲಿ ಮತ್ತು ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ಸಾಧ್ಯವಾಗದಿದ್ದಲ್ಲಿ, ನಮಗೆ ತಿಳಿಸಲು ಕೆಳಗಿನ ಫಾರ್ಮ್‌ ಭರ್ತಿ ಮಾಡಿ. ಇದು ಎಷ್ಟು ಕಿರಿಕಿರಿಯುಂಟು ಮಾಡಬಹುದು ಎನ್ನುವುದು ನಮಗೆ ತಿಳಿದಿದೆ ಮತ್ತು ಸಹಾಯ ಮಾಡಲು ನಾವು ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ.

ನಿಮ್ಮ ಖಾತೆಯಲ್ಲಿನ ಟ್ರಿಪ್ ಅನ್ನು ನೀವು ವಿನಂತಿಸಿದ್ದಿರಾ?

ಕೆಳಗಿನ ಫಾರ್ಮ್‌ ಭರ್ತಿ ಮಾಡುವಾಗ ಗಮನಿಸಬೇಕಾದ ಸಂಗತಿಗಳು:

  • ಸುರಕ್ಷತಾ ಕಾರಣಗಳಿಗಾಗಿ, ಸಹಾಯ ಮಾಡಲು ನಾವು ನಿಮ್ಮ ಗುರುತು ಮತ್ತು ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ.
  • ನಿಮ್ಮ ಸಂಖ್ಯೆಯನ್ನು ಹಂಚಿಕೊಳ್ಳಲು ನಮಗೆ ಅನುಮತಿ ನೀಡುವ ಮೂಲಕ, ಈ ಟ್ರಿಪ್‌ಗೆ ಈ ಫೋನ್ ಸಂಖ್ಯೆಯನ್ನು ನಿಮ್ಮ ಚಾಲಕರೊಂದಿಗೆ ನಾವು ಹಂಚಿಕೊಳ್ಳುತ್ತೇವೆ ಮತ್ತು ಚಾಲಕರು ಈ ಫೋನ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂಬುದನ್ನು ನೀವು ಒಪ್ಪುತ್ತೀರಿ. ನೀವು ಹಂಚಿಕೊಳ್ಳಲು ಒಪ್ಪಿದ ಫೋನ್ ಸಂಖ್ಯೆಯನ್ನು ಚಾಲಕರು ಬಳಸುವುದಕ್ಕೆ ನಾವು ಜವಾಬ್ದಾರಿ ವಹಿಸುವುದಿಲ್ಲ.
  • ಚಾಲಕರಿಗೆ ಅವರ ಸಮಯ ಮತ್ತು ಶ್ರಮಕ್ಕಾಗಿ ಹಣ ಪಾವತಿಸಲು, ನಿಮ್ಮ ಫೋನ್ ಹಿಂದಿರುಗಿಸಿದ ನಂತರ ನಿಮ್ಮ ಖಾತೆಗೆ ರಿಟರ್ನ್ ಶುಲ್ಕವನ್ನು ವಿಧಿಸಬಹುದು (ಮೊತ್ತವು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ).

ಟ್ರಿಪ್‌ ಅನ್ನು ಬೇರೊಬ್ಬರು ವಿನಂತಿಸಿದ್ದರೇ?

ಬೇರೊಬ್ಬರು ವಿನಂತಿಸಿದ ಟ್ರಿಪ್‌ನಲ್ಲಿನ ವಾಹನದಲ್ಲಿ ನೀವು ನಿಮ್ಮ ಫೋನ್‌ ಬಿಟ್ಟಿದ್ದಲ್ಲಿ, ಟ್ರಿಪ್‌ ವಿನಂತಿಸಿದ ವ್ಯಕ್ತಿಯು ಕಳೆದುಹೋದ ವಸ್ತುವನ್ನು ತಮ್ಮದೇ Uber ಆ್ಯಪ್‌ನಲ್ಲಿ ವರದಿ ಮಾಡಬೇಕಾಗುತ್ತದೆ:

  1. "ಖಾತೆ" ಮತ್ತು ನಂತರ "ಟ್ರಿಪ್‌ಗಳು" ಟ್ಯಾಪ್ ಮಾಡಿ.
  2. ನಿಮ್ಮ ಫೋನ್ ಕಳೆದುಕೊಂಡ ಟ್ರಿಪ್ ಅನ್ನು ಆಯ್ಕೆಮಾಡಿ.
  3. "ಕಳೆದುಹೋದ ವಸ್ತುವನ್ನು ಹುಡುಕಿ" ಮತ್ತು ನಂತರ "ಕಳೆದು ಹೋದ ವಸ್ತು ಕುರಿತು ಚಾಲಕರನ್ನು ಸಂಪರ್ಕಿಸಿ" ಟ್ಯಾಪ್‌ ಮಾಡಿ.
  4. ಚಾಲಕರಿಗೆ ಕರೆ ಮಾಡಲು ಮತ್ತು ನಿಮ್ಮ ಫೋನ್‌ ವಾಪಸ್ ನೀಡುವಿಕೆಯ ಬಗ್ಗೆ ಅವರ ಜೊತೆಗೆ ಸಹಯೋಗ ಮಾಡಲು, ಟ್ರಿಪ್‌ ವಿನಂತಿಸಿದ ವ್ಯಕ್ತಿಯು ತಮ್ಮ ಫೋನ್ ನಂಬರ್ ನಮೂದಿಸಬಹುದು.
  5. ಅವರಿಗೆ ಚಾಲಕರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ, "ಕಳೆದುಹೋದ ವಸ್ತು ಹುಡುಕಿ" ಪುಟಕ್ಕೆ ಹಿಂತಿರುಗಿ ಮತ್ತು "ಕಳೆದುಹೋದ ವಸ್ತು ಬಗ್ಗೆ ನನ್ನ ಚಾಲಕರನ್ನು ತಲುಪಲು ನನಗೆ ಸಾಧ್ಯವಾಗಲಿಲ್ಲ" ಆಯ್ಕೆಮಾಡಿ. ಅವರು ಫಾರ್ಮ್ ಭರ್ತಿ ಮಾಡಬಹುದು ಮತ್ತು ಸಹಾಯ ಮಾಡಲು ನಾವು ಅವರನ್ನು ಸಂಪರ್ಕಿಸುತ್ತೇವೆ.

ನಿಮ್ಮವಸ್ತುವನ್ನು ನೀವು ಶೀಘ್ರದಲ್ಲೇ ಮರಳಿ ಪಡೆಯುತ್ತೀರಿ ಎಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ, ಆದರೂ ಟ್ರಿಪ್ ಮುಗಿದ ನಂತರ ವಾಹನದಲ್ಲಿ ಉಳಿದಿರುವ ಯಾವುದೇ ವಸ್ತುಗಳಿಗೆ Uber ಅಥವಾ ಚಾಲಕರು ಜವಾಬ್ದಾರರಾಗಿರುವುದಿಲ್ಲ. ನಾವು ಸಹಾಯ ಮಾಡಲು ಇಲ್ಲಿದ್ದೇವೆ, ಆದರೆ ಚಾಲಕರು ನಿಮ್ಮ ವಸ್ತುವನ್ನು ಹೊಂದಿದ್ದಾರೆ ಅಥವಾ ಅವರು ಸ್ವತಂತ್ರ ಗುತ್ತಿಗೆದಾರರಾಗಿರುವುದರಿಂದ ಅದನ್ನು ನಿಮಗೆ ತಲುಪಿಸಬಹುದು ಎನ್ನುವುದನ್ನು ಖಾತರಿಪಡಿಸಲಾಗುವುದಿಲ್ಲ.

🇺🇸
open
+1
🇺🇸
open
+1
ನಿಜವಾಗಿಯೂ ನೀವೇ ಹೌದು ಎಂದು ಖಚಿತಪಡಿಸಿಕೊಳ್ಳಲು ಸ್ವಯಂಚಾಲಿತ ಸಂದೇಶವನ್ನು ಇಲ್ಲಿ ಕಳುಹಿಸಲಾಗುತ್ತದೆ. ದಯವಿಟ್ಟು ಅದನ್ನು ತೆರೆಯಿರಿ ಮತ್ತು ನಮ್ಮ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು “ಇಮೇಲ್ ವಿಳಾಸವನ್ನು ದೃಡೀಕರಿಸಿ” ಆಯ್ಕೆಮಾಡಿ. Writing in from