COVID-19 ಸಂಪರ್ಕಕ್ಕೆ ಬಂದಿರುವವರಿಗಾಗಿ ಮಾರ್ಗದರ್ಶನ

COVID-19 ಪರೀಕ್ಷೆಯ ನಂತರ ನಾನು ಪಾಸಿಟಿವ್ ಆಗಿರುವುದರಿಂದ ನನ್ನ ಸಂಪರ್ಕಕ್ಕೆ ಬಂದಿರಬಹುದಾದ ಯಾರಿಗಾದರೂ ನಾನು ಯಾವ ರೀತಿಯಲ್ಲಿ ತಿಳಿಸಬಹುದು?

ದಯವಿಟ್ಟು ನಿಮ್ಮ ಸ್ಥಳೀಯ ಆರೋಗ್ಯ ಇಲಾಖೆಗೆ ವರದಿ ಮಾಡಿ ಹಾಗೂ ಅವರ ಪ್ರಸ್ತುತ ಮಾರ್ಗದರ್ಶನವನ್ನು ಅನುಸರಿಸಿ. ನಾವು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ವರದಿಗಳ ಮೇಲೆ ಅವಲಂಬಿತರಾಗಿದ್ದೇವೆ ಹಾಗೂ ಸಂಪರ್ಕ ಪತ್ತೆಹಚ್ಚುವಿಕೆಯೊಂದಿಗೆ ಅವರಿಗೆ ಸಹಾಯ ಮಾಡುವ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಇತ್ತೀಚಿನ ಟ್ರಿಪ್‌ನಲ್ಲಿ ನಾನು COVID-19 ಸಂಪರ್ಕಕ್ಕೆ ಬಂದಿರುತ್ತೇನೆ

ಸಂಪರ್ಕಕ್ಕೆ ಬಂದಿದ್ದೀರಿ ಎಂದು ನೀವು ಭಾವಿಸಿದಲ್ಲಿ, ದಯವಿಟ್ಟು ನಿಮ್ಮ ಸ್ಥಳೀಯ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ಹಾಗೂ ಅವರ ಇತ್ತೀಚಿನ ನವೀಕೃತ ಮಾರ್ಗದರ್ಶನವನ್ನು ಅನುಸರಿಸಿ.

ಹರಡುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುವ ಸಲುವಾಗಿ ಚಾಲಕರು ಮತ್ತು ಡೆಲಿವರಿ ವ್ಯಕ್ತಿಗಳನ್ನು ಬೆಂಬಲಿಸಲು ಆರೋಗ್ಯ ಮತ್ತು ಸುರಕ್ಷತಾ ಸರಬರಾಜುಗಳನ್ನು Uber ಒದಗಿಸುತ್ತಿದೆ. ನೀವು COVID-19 ಪಾಸಿಟಿವ್ ಆಥವಾ ಅದರ ರೋಗಲಕ್ಷಣಗಳನ್ನು ಹೊಂದಿದ್ದೇನೆ ಎಂದು ತಿಳಿದಿದ್ದಲ್ಲಿ ನಮ್ಮ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಅನುಮತಿಸಲಾಗುವುದಿಲ್ಲ. ಮಾಸ್ಕ್ ಧರಿಸುವುದು, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದು ಮತ್ತು ಸಾಧ್ಯವಾದಾಗ ಕಾರಿನ ಒಳಗಡೆ ಗಾಳಿ ಆಡುವಂತೆ ಮಾಡಬೇಕಾದುದರ ಮಹತ್ವವನ್ನು ನಾವು ಒತ್ತಿ ಹೇಳುತ್ತಲೇ ಇರುತ್ತೇವೆ.

ಪ್ರಪಂಚದಾದ್ಯಂತದ ಸಮುದಾಯಗಳನ್ನು ಬೆಂಬಲಿಸುವ Uber ನ ಬದ್ಧತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕೊರೊನಾ ವೈರಸ್ ಸಂಪನ್ಮೂಲಗಳು ಮತ್ತು ನವೀಕರಣಗಳು ಪುಟವನ್ನು ನೀವು ವೀಕ್ಷಣೆ ಮಾಡಬಹುದು.