ನಾನು ಇಮೇಲ್, SMS ಅಥವಾ ಪುಶ್ ನೋಟಿಫಿಕೇಷನ್‌ಗಳನ್ನು ಸ್ವೀಕರಿಸುತ್ತಿಲ್ಲ

ಕೋಡ್ ಪರಿಶೀಲನೆ ಅಥವಾ ಪುಶ್ ನೋಟಿಫಿಕೇಶನ್‌ಗಳನ್ನು ನೀವು ಸ್ವೀಕರಿಸದ ಕಾರಣ ನೀವು ಆ್ಯಪ್‌ನಲ್ಲಿ ಲಾಗಿನ್ ಆಗಲು ಅಥವಾ ನಿರ್ದಿಷ್ಟ ಕ್ರಿಯೆಯನ್ನು ಮಾಡಲು ಸಾಧ್ಯವಾಗದಿದ್ದಾಗ ಅದು ಎಷ್ಟು ನಿರಾಶಾದಾಯಕವಾಗಿರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನೀವು ಎರಡು ಅಂಶಗಳ ದೃಢೀಕರಣವನ್ನು ಕಾನ್ಫಿಗರ್ ಮಾಡಿದಾಗ ಅಥವಾ ನಿಮ್ಮ ಸಂವಹನ ಆದ್ಯತೆಗಳನ್ನು ಬದಲಾಯಿಸಿದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.

ಇದಕ್ಕೆ ಸಹಾಯ ಮಾಡುವ ಹಂತಗಳನ್ನು ನೀವು ಮುಂದಿನ ಲೇಖನಗಳಲ್ಲಿ ಕಾಣಬಹುದು:

SMS ಮೆಸೇಜ್‌ಗಳನ್ನು ಸ್ವೀಕರಿಸುವಲ್ಲಿ ಸಮಸ್ಯೆಗಳು

SMS ಮೆಸೇಜ್‌ಗಳನ್ನು ಸ್ವೀಕರಿಸುವಲ್ಲಿ ನಿಮಗೆ ಸಮಸ್ಯೆಗಳಿದ್ದಲ್ಲಿ, ಖಚಿತಪಡಿಸಿಕೊಳ್ಳಿ:

  • ನೀವು ಉತ್ತಮ ಸೆಲ್ ರಿಸೆಪ್ಶನ್ ಹೊಂದಿರುವ ಪ್ರದೇಶದಲ್ಲಿದ್ದೀರಿ;
  • Uber ಆ್ಯಪ್‌ನಲ್ಲಿ ಸ್ಟೋರ್ ಆಗಿರುವ ನಿಮ್ಮ ಫೋನ್ ಸಂಖ್ಯೆಯು ನಿಮ್ಮ ಪ್ರಸ್ತುತ ಫೋನ್ ಸಂಖ್ಯೆಗೆ ಮ್ಯಾಚ್ ಆಗುತ್ತದೆ.

ಇಮೇಲ್ ಮೆಸೇಜ್‌ಗಳು ಅಥವಾ ಪುಶ್ ನೋಟಿಫಿಕೇಷನ್‌ಗಳನ್ನು ಸ್ವೀಕರಿಸುವಲ್ಲಿ ಸಮಸ್ಯೆಗಳು

  • ಕೆಲವೊಮ್ಮೆ Uber ಇಮೇಲ್‌ಗಳು ಆಕಸ್ಮಿಕವಾಗಿ ಅಲ್ಲಿ ಸ್ಟೋರ್ ಆಗಿರಬಹುದಾದ್ದರಿಂದ ನಿಮ್ಮ ಸ್ಪ್ಯಾಮ್ ಇನ್‌ಬಾಕ್ಸ್ ಅನ್ನು ಪರಿಶೀಲಿಸಿ;
  • ನಿಮ್ಮ Uber ಇಮೇಲ್ ನಿಮ್ಮ ಡೀಫಾಲ್ಟ್ ಇಮೇಲ್‌ಗೆ ಮ್ಯಾಚ್ ಆಗುತ್ತದೆಯೇ ಎಂದು ಪರಿಶೀಲಿಸಿ;
  • ಆಪರೇಟಿಂಗ್ ಸಿಸ್ಟಂನಲ್ಲಿ (iOS ಅಥವಾ Android ಸೆಟ್ಟಿಂಗ್‌ಗಳು) ನೋಟಿಫಿಕೇಷನ್‌ಗಳನ್ನು ಕಳುಹಿಸಲು Uber ಗೆ ಅನುಮತಿ ಇದೆಯೇ ಎಂದು ಪರಿಶೀಲಿಸಿ;
  • ಸಂವಹನ ಹಬ್‌ನಲ್ಲಿ ಇಮೇಲ್ ಚಂದಾದಾರಿಕೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.

ನಿಮ್ಮ ಖಾತೆಯ ಮಾಹಿತಿಯನ್ನು Uber ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಅಪ್‌ಡೇಟ್ ಮಾಡಬಹುದು. ಸೂಚನೆಗಳು ಇಲ್ಲಿ ಲಭ್ಯವಿದೆ, ನಿಮ್ಮ ವೈಯಕ್ತಿಕ ಡೇಟಾಗೆ ಸಂಬಂಧಿಸಿದಂತೆ ಹೆಚ್ಚಿನ ಸಹಾಯ ಬೇಕಾದರೆ ಮತ್ತು ‌Uber ಡೇಟಾ ಪ್ರೊಟೆಕ್ಷನ್ ಆಫೀಸರ್ (DPO) ಅವರನ್ನು ಸಂಪರ್ಕಿಸಲು, ಇಲ್ಲಿ$ ಕ್ಲಿಕ್ ಮಾಡಿ.

ನೀವು ಈಗಲೂ ಮೆಸೇಜ್‌ಗಳನ್ನು ಅಥವಾ Uber ನೋಟಿಫಿಕೇಷನ್‌ಗಳನ್ನು ಸ್ವೀಕರಿಸುವಲ್ಲಿ ಸಮಸ್ಯೆಗಳನ್ನು ಹೊಂದಿದ್ದರೆ, ಕೆಳಗಿನ ಫಾರಂ ಅನ್ನು ಭರ್ತಿ ಮಾಡಿ, ನಾವು ಸಹಾಯ ಮಾಡಲು ನಿಮ್ಮನ್ನು ಸಂಪರ್ಕಿಸುತ್ತೇವೆ. ನಿಮ್ಮ ಗುರುತನ್ನು ದೃಢೀಕರಿಸಲು ನಮಗೆ ಕೆಲವು ಹೆಚ್ಚುವರಿ ಮಾಹಿತಿಯನ್ನು ನೀಡಬೇಕೆಂದು ನಾವು ಕೇಳುತ್ತೇವೆ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಇದು ನಮಗೆ ಸಹಾಯ ಮಾಡುತ್ತದೆ.

ನಮ್ಮ ಗೌಪ್ಯತೆ ಸೂಚನೆ ಮತ್ತು ಬಳಕೆಯ ನಿಯಮಗಳಿಗೆ ಅನುಸಾರವಾಗಿ, ಈ ಮಾಹಿತಿಯನ್ನು ಮತ್ತು ಈ ಸಂವಹನದ ಇತರ ಅಂಶಗಳನ್ನು Uber ಉಳಿಸಿಕೊಳ್ಳಬಹುದು. Uber ‌ನಲ್ಲಿ ಗೌಪ್ಯತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ಬಯಸಿದರೆ, ದಯವಿಟ್ಟು ನಮ್ಮ ಗೌಪ್ಯತಾ ಕೇಂದ್ರಕ್ಕೆ ಭೇಟಿ ನೀಡಿ.

  • 🇺🇸
    open
    +1
    ನಿಜವಾಗಿಯೂ ನೀವೇ ಹೌದು ಎಂದು ಖಚಿತಪಡಿಸಿಕೊಳ್ಳಲು ಸ್ವಯಂಚಾಲಿತ ಸಂದೇಶವನ್ನು ಇಲ್ಲಿ ಕಳುಹಿಸಲಾಗುತ್ತದೆ. ದಯವಿಟ್ಟು ಅದನ್ನು ತೆರೆಯಿರಿ ಮತ್ತು ನಮ್ಮ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು “ಇಮೇಲ್ ವಿಳಾಸವನ್ನು ದೃಡೀಕರಿಸಿ” ಆಯ್ಕೆಮಾಡಿ. Writing in from