ಕಿವುಡು/HOH ಚಾಲಕರ ಬಗ್ಗೆ ಕಾಳಜಿ

ಸವಾರರು ಮತ್ತು ಚಾಲಕರಿಗೆ Uber ಅನುಭವಕ್ಕೆ ಸಾಧ್ಯವಾದಷ್ಟು ಪ್ರವೇಶ ನೀಡಲು ನಾವು ಸದಾಕಾಲ ಕೆಲಸ ಮಾಡುತ್ತಿದ್ದೇವೆ.

ಚಾಲಕರನ್ನು ಸಂಪರ್ಕಿಸಲಾಗುತ್ತಿದೆ

ಕಿವುಡು ಅಥವಾ ಶ್ರವಣ ದೋಷವನ್ನು ಹೊಂದಿರುವ ಚಾಲಕರಿಗೆ ಕರೆ ಮಾಡುವ ಸಾಮರ್ಥ್ಯವನ್ನು ಸವಾರರಿಗೆ ಒದಗಿಸಲಾಗಿಲ್ಲ. ಬದಲಾಗಿ, ಚಾಲಕರು ನಿಮ್ಮೊಂದಿಗೆ ಸಂವಹನ ನಡೆಸಬೇಕಾದಲ್ಲಿ ಅವರಿಗೆ ಪಠ್ಯ ಸಂದೇಶ ಕಳುಹಿಸಲು ನಿಮ್ಮನ್ನು ನಿರ್ದೇಶಿಸಲಾಗುತ್ತದೆ. ನೀವು ಎಲ್ಲಿ ನಿಂತಿದ್ದೀರಿ ಎನ್ನುವುದನ್ನು ನಿಖರವಾಗಿ ತಿಳಿಸಲು ನಿಮ್ಮ ಚಾಲಕರಿಗೆ ಆಗಮನದ ಮುಂಚೆಯೇ ನೀವು ಸಂದೇಶವನ್ನು ಕಳುಹಿಸಬಹುದು.

ಟ್ರಿಪ್‌ನಲ್ಲಿರುವಾಗ ಚಾಲಕರೊಂದಿಗೆ ಸಂವಹನ ನಡೆಸುವುದು

ಕಿವುಡು ಅಥವಾ ಶ್ರಾವಣ ದೋಷವನ್ನು ಹೊಂದಿರುವಸಿ ಚಾಲಕರೊಂದಿಗೆ ಉತ್ತಮವಾಗಿ ಸಂವಹನ ನಡೆಸಲು ನಿಮಗೆ ಸಹಾಯ ಮಾದುವ ಸಲುವಾಗಿ, ನೀವು ಈಗ Uber ಫೀಡ್‌ನಲ್ಲಿ ವಿಶೇಷ ಕಾರ್ಡ್ ಅನ್ನು ನೋಡುತ್ತೀರಿ, ಅಲ್ಲಿ ನೀವು ಅಮೇರಿಕನ್ ಸೈನ್ ಲ್ಯಾಂಗ್ವೇಜ್ (ASL) ನಲ್ಲಿ ಮೂಲಭೂತ ಪದಗುಚ್ಛಗಳನ್ನು ಸಹಿ ಮಾಡಲು ಕಲಿಯಬಹುದು. ಒಮ್ಮೆ ನೀವು ಅದನ್ನು ಟ್ಯಾಪ್ ಮಾಡಿದರೆ, ನೀವು "ಹಲೋ", "ಧನ್ಯವಾದಗಳು" ಅಥವಾ ಚಾಲಕರ ಹೆಸರನ್ನು ಹೇಗೆ ಉಚ್ಚರಿಸಬೇಕು ಎನ್ನುವಂತಹ ಮೂಲಭೂತ ಅಂಶಗಳನ್ನು ಆಯ್ಕೆ ಮಾಡಬಹುದು.

ಅರ್ಹತೆಯ ಅವಶ್ಯಕತೆಗಳು

Uber ನೊಂದಿಗೆ ಚಾಲನೆ ಮಾಡಲು ಇರುವ ಅಗತ್ಯತೆಗಳು:

  • ಹಿನ್ನೆಲೆ ಪರಿಶೀಲನೆ
  • ಮಾನ್ಯವಾದ ಚಾಲಕರ ಪರವಾನಗಿ
  • ಸ್ಪಷ್ಟ ಚಾಲನೆಯ ದಾಖಲೆ

ಸವಾರರುಗಳು ಮತ್ತು ಚಾಲಕರುಗಳಿಗೆ Uber ಆ್ಯಪ್‌ ಅನ್ನು ಪ್ರವೇಶವನ್ನು ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ.

ನ್ಯಾವಿಗೇಷನ್

ಚಾಲಕರು ಸವಾರಿಯನ್ನು ಸ್ವೀಕರಿಸಿದ ನಂತರ, ಸವಾರರು ತಮ್ಮ ಗಮ್ಯಸ್ಥಾನವನ್ನು ಮುಂಚಿತವಾಗಿ ನಮೂದಿಸಲು ಪ್ರೇರೇಪಿಸಲಾಗುತ್ತದೆ. ಆ್ಯಪ್ ಚಾಲಕರಿಗೆ ಟರ್ನ್-ಬೈ-ಟರ್ನ್ ನಿರ್ದೇಶನಗಳನ್ನು ಒದಗಿಸುತ್ತದೆ.

ನಿಮ್ಮ ಗಮ್ಯಸ್ಥಾನವನ್ನು ನೀವು ನವೀಕರಿಸಬೇಕಾದಲ್ಲಿ ಅಥವಾ ನಿಲುಗಡೆಯನ್ನು ಸೇರಿಸಬೇಕಾದಲ್ಲಿ, ದಯವಿಟ್ಟು ನಿಮ್ಮ ಆ್ಯಪ್‌ನಲ್ಲಿ ನಿಮ್ಮ ಟ್ರಿಪ್ ಅನ್ನು ನವೀಕರಿಸಿ.