ನೀವು ಒಂದು ಸವಾರಿಗೆ ವಿನಂತಿಯನ್ನು ಮಾಡಲು ಸಾಧ್ಯವಾಗದೇ ಇರಲು ಹಲವಾರು ಕಾರಣಗಳಿರಬಹುದು. ಇಲ್ಲಿ ಕೆಳಗೆ ಕೆಲವು ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳನ್ನು ಹೇಗೆ ಪರಿಹರಿಸುವುದು ಎನ್ನುವುದರ ಬಗ್ಗೆ ಮಾಹಿತಿಯಿದೆ.
ಬಾಕಿಯನ್ನು ನೀವು ನಮಗೆ ಪಾವತಿಸಬೇಕಾಗಿರಬಹುದು. ಬಾಕಿ ಪಾವತಿಯನ್ನು ಚುಕ್ತಾ ಮಾಡಲು ಆ್ಯಪ್‌ನಲ್ಲಿನ ಪ್ರಾಂಪ್ಟ್‌ಗಳನ್ನು ಅನುಸರಿಸಿ. ವಿವರವಾದ ಸೂಚನೆಗಳಿಗಾಗಿ ಈಲೇಖನವನ್ನು ವೀಕ್ಷಿಸಿ.
ನಿಮ್ಮ ಪಾವತಿ ವಿಧಾನವನ್ನು ನವೀಕರಿಸಲು ಆ್ಯಪ್‌ನಲ್ಲಿ ಕಾಣಿಸುವ ಪ್ರಾಂಪ್ಟ್‌ಗಳನ್ನು ಅನುಸರಿಸಿ ಅಥವಾ ಈ ಲೇಖನವನ್ನು ವೀಕ್ಷಿಸಿ.
ನಿಮ್ಮ ಪಿಕಪ್ ಮತ್ತು ಡ್ರಾಪ್‌ಆಫ್ ಸ್ಥಳಗಳನ್ನು ನಮೂದಿಸಿದ ನಂತರ, ನಿಮ್ಮ ಪ್ರದೇಶದಲ್ಲಿ Uber ಲಭ್ಯವಿಲ್ಲದಿದ್ದಲ್ಲಿ ಆ್ಯಪ್ ಅದನ್ನು ನಿಮಗೆ ತಿಳಿಸುತ್ತದೆ.
ದಯವಿಟ್ಟು ಕೆಲವು ನಿಮಿಷಗಳ ಕಾಲ ಕಾಯಿರಿ ಮತ್ತು ಇನ್ನೊಮ್ಮೆ ಒಂದು ಸವಾರಿಗೆ ವಿನಂತಿಯನ್ನು ಮಾಡಲು ಪ್ರಯತ್ನಿಸಿ.
Uber ನಿಂದ ದೃಢೀಕರಣ ಸಂದೇಶಗಳು ಬಂದಿವೆಯೇ ಎನ್ನುವುದನ್ನು ಪರಿಶೀಲಿಸಿ. ಒಂದು ವೇಳೆ ನಿಮಗೆ ಯಾವುದೂ ಕಾಣದಿದ್ದಲ್ಲಿ, ನಿಮ್ಮ ಖಾತೆ ಸೆಟ್ಟಿಂಗ್ಸ್ ಅನ್ನು ನೀವು ನವೀಕರಿಸಬೇಕಾಗಬಹುದು.
ನಿಮಗೆ ಈಗಲೂ ಒಂದು ಸವಾರಿಗೆ ವಿನಂತಿಸಲು ಸಾಧ್ಯವಾಗದಿದ್ದಲ್ಲಿ, ಕೆಳಗಿನ ನಮೂನೆಯನ್ನು ಭರ್ತಿ ಮಾಡಿ ಮತ್ತು ಸಹಾಯ ಮಾಡಲು ನಾವು ಸಂಪರ್ಕದಲ್ಲಿರುತ್ತೇವೆ.