ನಾನು ತಲುಪಬೇಕಾದ ಸ್ಥಳವನ್ನು ಬದಲಾಯಿಸಿದ್ದೇನೆ

ನೀವು ಸವಾರಿಗಾಗಿ ವಿನಂತಿಸಿದಾಗ, ನಿಮಗೆ ಮುಂಗಡ ದರವನ್ನು ತೋರಿಸಲಾಗುತ್ತದೆ, ಇದು ಅಂದಾಜು ದೂರ, ಸಮಯ ಮತ್ತು ಟೋಲ್‌ಗಳ ಆಧಾರದ ಮೇಲೆ ಟ್ರಿಪ್‌ಗೆ ಎಷ್ಟು ವೆಚ್ಚವಾಗಬಹುದು ಎಂಬುದಕ್ಕೆ ನಮ್ಮ ಅಂದಾಜು ಆಗಿರುತ್ತದೆ ಮತ್ತು ತಲುಪುವ ಸ್ಥಳ ಬದಲಾಗದೆ ಇರುವವರೆಗೆ ಮತ್ತು ಜಿಪಿಎಸ್ ಸೂಚಿಸಿದ ಮಾರ್ಗ ಅನುಸರಿಸುವ ವರೆಗೆ ಮಾನ್ಯವಾಗಿರುತ್ತದೆ.

ನೀವು ವಿನಂತಿಸಿದ್ದನ್ನು ಹೊರತುಪಡಿಸಿ ಬೇರೆ ತಲುಪುವ ಸ್ಥಳದಲ್ಲಿ ಇಳಿದರೆ ಅಥವಾ ನಕ್ಷೆಯಲ್ಲಿ ಸರಿಯಾಗಿ ಗುರುತಿಸದ ತಲುಪುವ ಸ್ಥಾನವನ್ನು ನೀವು ನಮೂದಿಸಿದರೆ, ನಿಮ್ಮ ದರವು ನಿಜವಾದ ಟ್ರಿಪ್ ದೂರ, ಸಮಯ ಮತ್ತು ಟೋಲ್ ಗಳ ಆಧಾರದ ಮೇಲೆ ಬದಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ನೀವು ಪಾವತಿಸಬೇಕಾದ ಮೊತ್ತದ ಗೊಂದಲವನ್ನು ನಿಲ್ಲಿಸಲು ಅಪ್ಲಿಕೇಶನ್‌ನಲ್ಲಿ ನಿಖರವಾದ ತಲುಪುವ ಸ್ಥಳವನ್ನು ನಮೂದಿಸಲು ನಾವು ಶಿಫಾರಸು ಮಾಡುತ್ತೇವೆ.