ತಾರತಮ್ಯರಹಿತ ನೀತಿ

ನಮ್ಮ ಸಮುದಾಯ ಮಾರ್ಗಸೂಚಿಗಳಿಗೆ ಅನುಸಾರವಾಗಿ, Uber ಕೆಳಗಿನವುಗಳ ಆಧಾರದ ಮೇಲೆ ಸವಾರರು ಅಥವಾ ಚಾಲಕರ ವಿರುದ್ಧ ತಾರತಮ್ಯತೆ ಮಾಡುವುದನ್ನು ಸಹಿಸುವುದಿಲ್ಲ:

  • ಜನಾಂಗ
  • ಧರ್ಮ
  • ರಾಷ್ಟ್ರೀಯ ಮೂಲ
  • ಅಂಗವೈಕಲ್ಯ
  • ಲೈಂಗಿಕ ದೃಷ್ಟಿಕೋನ
  • ಲೈಂಗಿಕತೆ
  • ವೈವಾಹಿಕ ಸ್ಟೇಟಸ್
  • ಲಿಂಗ ಗುರುತಿಸುವಿಕೆ
  • ವಯಸ್ಸು
  • ಅನ್ವಯವಾಗುವ ಫೆಡರಲ್ ಅಥವಾ ರಾಜ್ಯ ಕಾನೂನಿನ ಅಡಿಯಲ್ಲಿ ರಕ್ಷಣೆಗೆ ಒಳಪಟ್ಟ ಯಾವುದೇ ಇತರ ಗುಣಲಕ್ಷಣಗಳು

ಅಂತಹ ತಾರತಮ್ಯವು ಈ ಯಾವುದೇ ಗುಣಲಕ್ಷಣಗಳ ಆಧಾರದ ಮೇಲೆ ಸೇವೆಗಳನ್ನು ಒದಗಿಸಲು ಅಥವಾ ಸ್ವೀಕರಿಸಲು ನಿರಾಕರಿಸುವುದನ್ನು ಒಳಗೊಂಡಿರುತ್ತದೆ ಆದರೆ ಅವುಗಳಿಗೆ ಮಾತ್ರವೇ ಸೀಮಿತವಾಗಿರುವುದಿಲ್ಲ.

ಈ ಮಾನದಂಡವನ್ನು ಉಲ್ಲಂಘಿಸಿರುವ ಯಾವುದೇ ಸವಾರ ಅಥವಾ ಚಾಲಕರು Uber ಆ್ಯಪ್‌ಗೆ ಪ್ರವೇಶವನ್ನು / ಆಕ್ಸೆಸ್ ಅನ್ನು ಕಳೆದುಕೊಳ್ಳುತ್ತಾರೆ.