ಸಾಕುಪ್ರಾಣಿಗಳೊಂದಿಗೆ ಸವಾರಿ

ರಾಜ್ಯ ಮತ್ತು ಫೆಡರಲ್ ಕಾನೂನುಗಳಿಗೆ ಅನುಸಾರವಾಗಿ, Uber ನ ನೀತಿಗಳಿಗೆ ಅನುಗುಣವಾಗಿ, ಸೇವಾ ಪ್ರಾಣಿಗಳಿಗೆ ಎಲ್ಲಾ ಸಮಯದಲ್ಲೂ ಸವಾರರೊಂದಿಗೆ ಹೋಗಲು ಅನುಮತಿಸಲಾಗಿದೆ. ನೀವು ಸೇವಾ ಪ್ರಾಣಿಯಲ್ಲದ ಸಾಕುಪ್ರಾಣಿಯೊಂದಿಗೆ ಪ್ರಯಾಣಿಸುತ್ತಿದ್ದರೆ, ತಮ್ಮ ವಾಹನದಲ್ಲಿ ಸಾಕುಪ್ರಾಣಿಗಳನ್ನು ಅನುಮತಿಸಬೇಕೇ ಅಥವಾ ಬೇಡವೇ ಎಂಬುದನ್ನು ಚಾಲಕರು ಆಯ್ಕೆ ಮಾಡಬಹುದು.

ನೀವು ಸೇವಾ ಪ್ರಾಣಿಯಲ್ಲದ ಸಾಕುಪ್ರಾಣಿಗಳೊಂದಿಗೆ ಸವಾರಿ ಮಾಡಲು ಯೋಜಿಸುತ್ತಿದ್ದರೆ, ನಿಮ್ಮ ಸವಾರಿ ವಿನಂತಿಯನ್ನು ಒಪ್ಪಿಕೊಂಡ ಚಾಲಕರನ್ನು ಸಂಪರ್ಕಿಸಿ ಅವರಿಗೆ ತಿಳಿಸುವುದು ಒಳ್ಳೆಯ ಪದ್ಧತಿಯಾಗಿದೆ. ಪಠ್ಯ ಸಂದೇಶವನ್ನು ಕಳುಹಿಸಲು ಅಥವಾ ನಿಮ್ಮ ಚಾಲಕರಿಗೆ ಕರೆ ಮಾಡಲು ನೀವು Uber ಆ್ಯಪ್ ಬಳಸಬಹುದು.

ಹಾನಿ ಅಥವಾ ಅವ್ಯವಸ್ಥೆಯ ಅಪಾಯವನ್ನು ಕಡಿಮೆ ಮಾಡಲು ಕ್ಯಾರಿಯರ್ ಅಥವಾ ಬ್ಲ್ಯಾಂಕೆಟ್‌ ತರುವ ಮೂಲಕ ಎಲ್ಲಾ ಸವಾರರಿಗಾಗಿ ವಾಹನಗಳನ್ನು ಸ್ವಚ್ಛವಾಗಿಡಲು ಚಾಲಕರಿಗೆ ಸಹಾಯ ಮಾಡಿ. ಕೆಲವು ಚಾಲಕರು ತಮ್ಮ ವಾಹನದ ಟ್ರಂಕ್‌ನಲ್ಲಿ ಬ್ಲ್ಯಾಂಕೆಟ್ ಅಥವಾ ಇತರ ಹೊದಿಕೆಯನ್ನು ಇಟ್ಟುಕೊಂಡಿರಬಹುದು.

ನೀವು ಸೇವಾ ಪ್ರಾಣಿಯನ್ನು ಹೊಂದಿರದ ಹೊರತು, uberPOOL ಟ್ರಿಪ್‌ಗಳಲ್ಲಿ ಸಾಕುಪ್ರಾಣಿಗಳನ್ನು ಇತರ ಸವಾರರ ಹಿತದೃಷ್ಟಿಯಿಂದ ಅನುಮತಿಸಲಾಗುವುದಿಲ್ಲ.