ವಾಹನವು ನಾನು ಕೇಳಿದ್ದಕ್ಕಿಂತ ಕಡಿಮೆ ಆಸನಗಳನ್ನು ಹೊಂದಿತ್ತು

ಸವಾರಿಯನ್ನು ವಿನಂತಿಸುವಾಗ, ಲಭ್ಯವಿರುವ ವಾಹನ ಆಯ್ಕೆಗಳ ಮೂಲಕ ನೀವು ಸ್ವೈಪ್ ಮಾಡಬಹುದು ಹಾಗೂ ಅದು ಎಷ್ಟು ಸವಾರರನ್ನು ಹೊತ್ತೊಯ್ಯಬಹುದು ಎನ್ನುವುದನ್ನು ವೀಕ್ಷಿಸಲು ಅದರ ಮೇಲೆ ಟ್ಯಾಪ್ ಮಾಡಿ. ನಿಮ್ಮ ವಿನಂತಿಯನ್ನು ದೃಢೀಕರಿಸುವ ಮೊದಲು ಇದನ್ನು ನೋಡುವಂತೆ ಶಿಫಾರಸು ಮಾಡಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ , ನೀವು ನಿರೀಕ್ಷಿಸಿದ್ದಕ್ಕಿಂತ ಚಿಕ್ಕದಾದ ಅಥವಾ ಕಡಿಮೆ ಸುಸಜ್ಜಿತವಾದ ವಾಹನದಲ್ಲಿ ಚಾಲಕ-ಪಾರ್ಟ್‌ನರ್‌ ಆಗಮಿಸಬಹುದು. ಉದಾಹರಣೆಗೆ, ನೀವು UberXL ಅನ್ನು ವಿನಂತಿಸಿದಲ್ಲಿ ಮತ್ತು ನಾಲ್ಕು ಸವಾರರಿಗೆ ಮಾತ್ರ ಆಸನ ಹೊಂದಿರುವ ವಾಹನವು ಬಂದಲ್ಲಿ, ಅದು UberXL ಸವಾರಿಗೆ ಅರ್ಹತೆ ಪಡೆಯುವುದಿಲ್ಲ.

ಇದು ವಾಹನ ವರ್ಗೀಕರಣ ದೋಷದ ಪರಿಣಾಮವಾಗಿರಬಹುದು. ನಿಮ್ಮ ಚಾಲಕ-ಪಾರ್ಟ್‌ನರ್‌ ವಾಹನವು ನೀವು ನಿರೀಕ್ಷಿಸುತ್ತಿರುವ ರೀತಿಗೆ ಮ್ಯಾಚ್ ಆಗುವುದಿಲ್ಲ ಎಂದು ನೀವು ಭಾವಿಸಿದಲ್ಲಿ, ಕೆಳಗಿನ ನಮೂನೆಯಲ್ಲಿ ನಮಗೆ ತಿಳಿಸಿ. ನಿಮಗೆ ರದ್ದತಿ ಶುಲ್ಕವನ್ನು ಪರಿಶೀಲಿಸಬೇಕೆಂದಾದಲ್ಲಿ, ಈ ಲೇಖನವನ್ನು ವೀಕ್ಷಿಸಿ.