ನಿಮ್ಮ ಗುರುತಿನ ಬಗ್ಗೆ ಆಗಾಗ ಕೇಳಲ್ಪಡುವ ಪ್ರಶ್ನೆಗಳನ್ನು ಪರಿಶೀಲಿಸಿ

ನನ್ನ ಖಾತೆ ಮತ್ತು/ಅಥವಾ ಗುರುತನ್ನು ನಾನು ಪರಿಶೀಲಿಸಬೇಕೆಂದು Uber ಏಕೆ ಬಯಸುತ್ತದೆ? Uber ನಲ್ಲಿ, ಸುರಕ್ಷತೆಗೆ ಪ್ರಮುಖ ಆದ್ಯತೆ. ಕೆಲವು ಉತ್ಪನ್ನಗಳ ಬಳಕೆದಾರರು ತಮ್ಮ ಖಾತೆಗಳನ್ನು ಅಥವಾ ಅವರು ನಮಗೆ ವರದಿ ಮಾಡುವ ಗುರುತುಗಳನ್ನು ಪರಿಶೀಲಿಸುವುದು ನಮಗೆ ಅಗತ್ಯವಿದೆ. ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿಡಲು ಮತ್ತು ನಿಮ್ಮ ಖಾತೆಯನ್ನು ಇತರರು ಬಳಸದಂತೆ ತಡೆಯಲು ಸಹಾಯ ಮಾಡುವ ಸಲುವಾಗಿ ನಾವು ಇದನ್ನು ಮಾಡುತ್ತೇವೆ.

Uber ನನ್ನ ಖಾತೆ ಮತ್ತು/ಅಥವಾ ಗುರುತನ್ನು ಯಾವ ರೀತಿಯಲ್ಲಿ ಪರಿಶೀಲಿಸುತ್ತದೆ? ನಾವು ನಿಮ್ಮ ಖಾತೆ ಮತ್ತು/ಅಥವಾ ಗುರುತನ್ನು ವಿವಿಧ ರೀತಿಯಲ್ಲಿ ಪರಿಶೀಲಿಸಬಹುದು. ಕೆಲವು ದೇಶಗಳಲ್ಲಿ, ಸವಾರರು ತಮ್ಮ ID ಸಂಖ್ಯೆಯನ್ನು ಒದಗಿಸಲು ಮತ್ತು/ಅಥವಾ ಅವರ ಗುರುತಿನ ಚೀಟಿಯ ಫೋಟೋ ತೆಗೆದುಕೊಳ್ಳಲು Uber ಅನುಮತಿಸುತ್ತದೆ. ID ಯ ಪರಿಶೀಲನೆಯನ್ನು Uber ಪೂರ್ಣಗೊಳಿಸುತ್ತದೆ ಮತ್ತು ಆ ದಾಖಲೆಯೊಂದಿಗೆ ಬೇರೆ ಯಾವುದೇ ಖಾತೆಯು ಸಂಯೋಜಿತವಾಗಿಲ್ಲ ಎನ್ನುವುದನ್ನು ಸಹ ಪರಿಶೀಲಿಸುತ್ತದೆ.

ಸವಾರರು ತಮ್ಮ ಖಾತೆಯನ್ನು ಪರಿಶೀಲಿಸಲು ಸಹಾಯ ಮಾಡುವ ಸಲುವಾಗಿ ತಮ್ಮ ಫೋಟೋವನ್ನು ತೆಗೆದುಕೊಳ್ಳಲು ಸಹ Uber ಅನುಮತಿಸಬಹುದು. ಈ ಫೋಟೋಗಳನ್ನು ಸುರಕ್ಷಿತವಾಗಿರಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು Uber ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಅವುಗಳನ್ನು ನಿಮ್ಮ ಚಾಲಕರೊಂದಿಗೆ ಎಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ನಿಗದಿತ ಸಮಯದ ನಂತರ ನಾವು ಈ ಫೋಟೋಗಳನ್ನು ಸಹ ಅಳಿಸುತ್ತೇವೆ.

ನಿಮ್ಮ ಖಾತೆ ಮತ್ತು/ಅಥವಾ ಗುರುತನ್ನು ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದಲ್ಲಿ (ಅಗತ್ಯವಾದ ಮಾಹಿತಿಯನ್ನು ಸಲ್ಲಿಸಲು ನೀವು ವಿಫಲವಾದ ಕಾರಣವೂ ಸೇರಿದಂತೆ), ನೀವು ನಗದು ರೂಪದಲ್ಲಿ ಪಾವತಿಸುವ ಕೆಲವು Uber ಉತ್ಪನ್ನಗಳನ್ನು ಬಳಸಲು ಸಾಧ್ಯವಾಗದಿರಬಹುದು ಅಥವಾ ನಿಮ್ಮ Uber ಖಾತೆಯಲ್ಲಿ ನೀವು ಪಾವತಿ ವಿಧಾನವಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡಬೇಕಾಗಬಹುದು .

ನನ್ನ ಖಾತೆ ಮತ್ತು/ಅಥವಾ ಗುರುತನ್ನು ಪರಿಶೀಲಿಸಲು Uber ಮೂರನೇ ವ್ಯಕ್ತಿಗಳನ್ನು ಬಳಸುತ್ತದೆಯೇ? ಕೆಲವು ಸಂದರ್ಭಗಳಲ್ಲಿ, ನಿಮ್ಮ ಖಾತೆ ಅಥವಾ ಗುರುತನ್ನು Uber ಪರವಾಗಿ ಮೂರನೇ ವ್ಯಕ್ತಿಗಳು ಪರಿಶೀಲಿಸಬಹುದು. ನಿಮ್ಮ ಗುರುತು ಮತ್ತು ದಾಖಲೆಗಳನ್ನು ಪರಿಶೀಲಿಸುವುದು ಅಥವಾ ವಾಡಿಕೆಯ ಲೆಕ್ಕಪರಿಶೋಧನೆ, ನಿಮ್ಮ ದಾಖಲೆಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವುದು ಅಥವಾ ಬಹಿರಂಗಪಡಿಸುವುದು ಅಥವಾ ಅವುಗಳನ್ನು ಉಳಿಸಿಕೊಳ್ಳುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ನಿಮ್ಮ ಮಾಹಿತಿಯನ್ನು ಆ ಮೂರನೇ ವ್ಯಕ್ತಿಗಳು ಬಳಸುವುದನ್ನು ಒಪ್ಪಂದದ ಪ್ರಕಾರ ನಿಷೇಧಿಸಲಾಗಿದೆ ಹಾಗೂ Uber ಪರವಾಗಿ ತಮ್ಮ ಸೇವೆಗಳನ್ನು ನಿರ್ವಹಿಸಲು ನಿಮ್ಮ ದಾಖಲೆಗಳು ಅಥವಾ ಮಾಹಿತಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಅವರಿಗೆ ಅನುಮತಿ ನೀಡಲಾಗುವುದಿಲ್ಲ.

Uber ನನ್ನ ವೈಯಕ್ತಿಕ ಮಾಹಿತಿಯನ್ನು ಚಾಲಕರುಗಳು, ಡೆಲಿವರಿ ವ್ಯಕ್ತಿಗಳು ಅಥವಾ ಇತರ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತದೆಯೇ? Uber ನ ಕೆಲವು ಸೇವೆಗಳು ಮತ್ತು ವೈಶಿಷ್ಟ್ಯಗಳಿಗೆ ನಾವು ಇತರ ಬಳಕೆದಾರರೊಂದಿಗೆ ಅಥವಾ ಬಳಕೆದಾರರ ಕೋರಿಕೆಯ ಮೇರೆಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಅಗತ್ಯವಿರುತ್ತದೆ. ಉದಾಹರಣೆಗೆ, ನೀವು ವಿನಂತಿಸುವ ಸವಾರಿಗಳು ಅಥವಾ ಡೆಲಿವರಿಗಳನ್ನು ಸಕ್ರಿಯಗೊಳಿಸಲು, ನಾವು ನಿಮ್ಮ ಮೊದಲ ಹೆಸರನ್ನು ಹಂಚಿಕೊಳ್ಳುತ್ತೇವೆ ಮತ್ತು ಚಾಲಕರು ಅಥವಾ ಡೆಲಿವರಿ ವ್ಯಕ್ತಿಯೊಂದಿಗೆ ಪಿಕ್-ಅಪ್, ಡ್ರಾಪ್-ಆಫ್ ಅಥವಾ ಡೆಲಿವರಿ ಸ್ಥಳವನ್ನು ವಿನಂತಿಸುತ್ತೇವೆ. ನೀವು ಖಾತೆ ಅಥವಾ ಗುರುತಿನ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೀರಿ ಎಂಬ ಅಂಶವನ್ನು ನಿಮ್ಮ ಚಾಲಕರು ಅಥವಾ ಡೆಲಿವರಿ ವ್ಯಕ್ತಿಯೊಂದಿಗೆ ನಾವು ದೃಢೀಕರಿಸಬಹುದು. ಇದನ್ನು ಬಿಟ್ಟು ಚಾಲಕರುಗಳು ಅಥವಾ ಡೆಲಿವರಿ ವ್ಯಕ್ತಿಗಳೊಂದಿಗೆ ನಿಮ್ಮ ಬೇರಾವುದೇ ಮಾಹಿತಿಯನ್ನು Uber ಹಂಚಿಕೊಳ್ಳುವುದಿಲ್ಲ.

ಕಾನೂನು ಕಾರಣಗಳಿಗಾಗಿ ಅಥವಾ ಹಕ್ಕುಗಳು ಅಥವಾ ವಿವಾದಗಳಿಗೆ ಸಂಬಂಧಿಸಿದಂತೆ ನಾವು ಅಂತಹ ಮಾಹಿತಿಯನ್ನು ನಮ್ಮ ಆಫೀಲಿಯೇಟ್ ಗಳು, ಅಂಗಸಂಸ್ಥೆಗಳು ಮತ್ತು ಪಾಲುದಾರರೊಂದಿಗೆ ಹಂಚಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Uber ನ ಗೌಪ್ಯತೆ ಸೂಚನೆಯನ್ನು ವೀಕ್ಷಿಸಿ.

ಚಾಲಕರು ಮತ್ತು ಡೆಲಿವರಿ ವ್ಯಕ್ತಿಗಳು ತಮ್ಮ ಗುರುತನ್ನು ಪರಿಶೀಲಿಸಿಕೊಳ್ಳಬೇಕು ಎಂದು Uber ಬಯಸುತ್ತದೆಯೇ? ಹೌದು, Uber ಪ್ಲಾಟ್‌ಫಾರ್ಮ್ ಅನ್ನು ಬಳಸಲು ಖಾತೆಯನ್ನು ರಚಿಸುವಾಗ ಎಲ್ಲಾ ಚಾಲಕರುಗಳು ಮತ್ತು ಡೆಲಿವರಿ ವ್ಯಕ್ತಿಗಳು ಗುರುತಿನ ಪರಿಶೀಲನೆ ದಾಖಲೆಗಳನ್ನು ಮತ್ತು ಇತರ ಮಾಹಿತಿಯನ್ನು ಸಲ್ಲಿಸುತ್ತಾರೆ. ಸೆಲ್ಫಿಯು ಸಲ್ಲಿಸಿದ ಫೋಟೋಗಳಿಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಚಾಲಕರು ಮತ್ತು ಡೆಲಿವರಿ ವ್ಯಕ್ತಿಗಳು ಕಾಲಕಾಲಕ್ಕೆ ಸೆಲ್ಫಿ ತೆಗೆದುಕೊಳ್ಳಬೇಕಾಗುತ್ತದೆ. ಅವರ ಪರಿಶೀಲನಾ ದಾಖಲೆಗಳ ಅವಧಿ ಮುಗಿದಿದ್ದಲ್ಲಿ ಅವರು ಹೊಸ ದಾಖಲೆಗಳನ್ನು ಸಹ ಸಲ್ಲಿಸಬೇಕು.

ನನ್ನ ಗುರುತನ್ನು ಪರಿಶೀಲಿಸಲು ನಾನು ಸಲ್ಲಿಸಿರುವ ಮಾಹಿತಿಯನ್ನು Uber ಹೇಗೆ ರಕ್ಷಿಸುತ್ತದೆ? ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿಡಲು Uber ಬದ್ಧವಾಗಿದೆ. ಅನ್ವಯವಾಗುವ ಕಾನೂನು ಮತ್ತು ನಮ್ಮ ಗೌಪ್ಯತೆ ಸೂಚನೆಗೆಅನುಗುಣವಾಗಿರುವ ರೀತಿಯಲ್ಲಿ, ನಿಮ್ಮ ಗುರುತು ಮತ್ತು/ಅಥವಾ ನಿಮ್ಮ ಖಾತೆಯನ್ನು ಪರಿಶೀಲಿಸಲು ನೀವು ಸಲ್ಲಿಸುವ ದಾಖಲೆಗಳು ಮತ್ತು ಇತರ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡುವುದು, ಸಂಬಂಧವಿಲ್ಲದ ಉದ್ದೇಶಗಳಿಗಾಗಿ ಅವುಗಳನ್ನು ಬಳಸುವುದನ್ನು ತಡೆ ಹಿಡಿಯುವುದು ಮತ್ತು ನಾವು ಅವುಗಳನ್ನು ಸಂಗ್ರಹಿಸಿದ ಉದ್ದೇಶಗಳಿಗಾಗಿ ಅಗತ್ಯವಿರುವವರೆಗೆ ಮಾತ್ರವೇ ಉಳಿಸಿಕೊಳ್ಳುವುದನ್ನು ಇದು ಒಳಗೊಂಡಿರುತ್ತದೆ.

ನಿಮ್ಮ ಗುರುತನ್ನು ಪರಿಶೀಲಿಸುವಲ್ಲಿ ಸಮಸ್ಯೆ ಇದ್ದಲ್ಲಿ ನೀವು ಏನು ಮಾಡಬೇಕಾಗುತ್ತದೆ? ನಿಮ್ಮ ಗುರುತನ್ನು ಪರಿಶೀಲಿಸುವಲ್ಲಿ ನಿಮಗೆ ಸಮಸ್ಯೆ ಇದ್ದಲ್ಲಿ ಅಥವಾ ನಮ್ಮ ವ್ಯವಸ್ಥೆಗಳು ತಪ್ಪು ಮಾಡಿವೆ ಎಂದು ನೀವು ಭಾವಿಸಿದಲ್ಲಿ, ದಯವಿಟ್ಟು ಮುಕ್ತವಾಗಿ Uber ಸಹಾಯವನ್ನು ಸಂಪರ್ಕಿಸಿ.