ನನ್ನ ಖಾತೆಯನ್ನು ರಕ್ಷಿಸಲು ನಾನು ಏನು ಮಾಡಬಹುದು?

2-ಹಂತದ ಪರಿಶೀಲನೆಯನ್ನು ಆನ್ ಮಾಡಿ

2-ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿದಾಗ, ನೀವು ಪ್ರತಿ ಬಾರಿ ನಿಮ್ಮ Uber ಖಾತೆಗೆ ಸೈನ್ ಇನ್ ಮಾಡಿದಾಗ ನಿಮಗೆ ಎರಡು ಭದ್ರತಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಪರಿಶೀಲನೆ ಕೋಡ್‌ಗಳನ್ನು ಪಡೆಯಲು 2 ಮಾರ್ಗಗಳಿವೆ:

  1. Uber ನಿಂದ ಪಠ್ಯ ಸಂದೇಶಗಳ ಮೂಲಕ.
  2. ಕೋಡ್‌ಗಳನ್ನು ರಚಿಸಲು Duo, Authy ಅಥವಾ Google Authenticator ನಂತಹ ಭದ್ರತಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ನೀವು 2-ಹಂತದ ಪರಿಶೀಲನೆಯನ್ನು ಆನ್ ಮಾಡದಿದ್ದರೂ ಸಹ, ನಿಮ್ಮ ಖಾತೆಯನ್ನು ಉತ್ತಮ ರೀತಿಯಲ್ಲಿ ರಕ್ಷಿಸಲು Uber ಗೆ ಕೆಲವೊಮ್ಮೆ ಇದು ಅಗತ್ಯವಾಗಬಹುದು. ಉದಾಹರಣೆಗೆ, ನಿಮ್ಮ ಖಾತೆಯಲ್ಲಿನ ಕೆಲವು ವಿವರಗಳನ್ನು ನೀವು ಬದಲಾಯಿಸಿದಲ್ಲಿ, ಬದಲಾವಣೆ ಮಾಡುತ್ತಿರುವವರು ನೀವೇ ಎನ್ನುವುದನ್ನು ಪರಿಶೀಲಿಸಲು Uber ಹೆಚ್ಚುವರಿ ಮಾಹಿತಿಯನ್ನು ಕೇಳುತ್ತದೆ.

ಫಿಶಿಂಗ್ ಸ್ಕ್ಯಾಮ್‌ಗಳ ಬಗ್ಗೆ ಗಮನವನ್ನು ಹರಿಸಿ

ಫಿಶಿಂಗ್ ಎನ್ನುವುದು ನಿಮ್ಮ Uber ಖಾತೆಯ ಮಾಹಿತಿಯನ್ನು (ಇಮೇಲ್, ಫೋನ್ ಸಂಖ್ಯೆ ಅಥವಾ ಪಾಸ್‌ವರ್ಡ್) ಬಿಟ್ಟುಕೊಡುವಂತೆ ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವಾಗಿರುತ್ತದೆ. ಫಿಶಿಂಗ್ ಸ್ಕ್ಯಾಮ್‌ಗಳು ಸಾಮಾನ್ಯವಾಗಿ ಅಪೇಕ್ಷಿಸದ ಇಮೇಲ್‌ಗಳು ಅಥವಾ ಸಂದೇಶಗಳನ್ನು ಬಳಸುತ್ತವೆ, ಅದು ನಿಮ್ಮನ್ನು ನಕಲಿ ಲಾಗಿನ್ ಪುಟಕ್ಕೆ ಕರೆದೊಯ್ಯುವ ಲಿಂಕ್ ಅಥವಾ ಲಗತ್ತನ್ನು ಒಳಗೊಂಡಿರುತ್ತದೆ. ನಿಮ್ಮ ಪಾಸ್‌ವರ್ಡ್ ಅಥವಾ ಹಣಕಾಸಿನ ಮಾಹಿತಿ ಸೇರಿದಂತೆ ನಿಮ್ಮ ಖಾತೆಯ ಬಗ್ಗೆ ಮಾಹಿತಿಯನ್ನು ವಿನಂತಿಸುವ ಇಮೇಲ್ ಅಥವಾ ಫೋನ್ ಮೂಲಕ Uber ಉದ್ಯೋಗಿಗಳು ನಿಮ್ಮನ್ನು ಎಂದಿಗೂ ಸಂಪರ್ಕಿಸುವುದಿಲ್ಲ. Uber ನಿಂದ ಬಂದಿರುವುದಾಗಿ ಕ್ಲೈಮ್ ಮಾಡುವ ಸಂದೇಶವನ್ನು ನೀವು ಸ್ವೀಕರಿಸಿದಲ್ಲಿ ಹಾಗೂ ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ಕೇಳಿದಲ್ಲಿ ಅಥವಾ https://www.uber,com ರಿಂದ ಇರದ ವೆಬ್‌ಸೈಟ್‌ಗೆ ಹೋದಲ್ಲಿ, ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಮತ್ತು ಯಾವುದೇ ಮಾಹಿತಿಯೊಂದಿಗೆ ಅದಕ್ಕೆ ಪ್ರತಿಕ್ರಿಯಿಸಬೇಡಿ. ದಯವಿಟ್ಟು ತಕ್ಷಣ Uber ಗೆ ಸಂದೇಶವನ್ನು ವರದಿ ಮಾಡಿ ಇದರಿಂದ ನಮ್ಮ ತಜ್ಞರು ತನಿಖೆಯನ್ನು ನಡೆಸಬಹುದು.

ದೃಢವಾದ ಮತ್ತು ವಿಶಿಷ್ಟವಾದ ಪಾಸ್‌ವರ್ಡ್‌ಗಳನ್ನು ಬಳಸಿ

ನಿಮ್ಮ Uber ಖಾತೆಯನ್ನು ರಕ್ಷಿಸಲು ನೀವು ಮಾಡಬಹುದಾದ ಪ್ರಮುಖ ವಿಷಯವೆಂದರೆ ನೀವು ಯಾವುದೇ ಇತರ ಸೇವೆಗಳಿಗೆ ಬಳಸದ ಅನನ್ಯ ಪಾಸ್‌ವರ್ಡ್ ಅನ್ನು ಬಳಸುವುದಾಗಿದೆ. ನಿಮ್ಮ ಪಾಸ್‌ವರ್ಡ್ ಸಣ್ಣ ಮತ್ತು ದೊಡ್ಡ ಅಕ್ಷರಗಳು, ಸಂಖ್ಯೆಗಳು ಮತ್ತು ಕನಿಷ್ಠ ಒಂದು ಚಿಹ್ನೆಯನ್ನು ಒಳಗೊಂಡಂತೆ ಕನಿಷ್ಠ 10 ಅಕ್ಷರಗಳನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಪ್ರತಿಯೊಂದು ಆನ್‌ಲೈನ್ ಖಾತೆಗಳಿಗೆ ಬಲವಾದ ಮತ್ತು ಅನನ್ಯವಾದ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ರಚಿಸುವ, ಸಂಗ್ರಹಿಸುವ ಮತ್ತು ನವೀಕರಿಸಬಹುದಾದ ಪಾಸ್‌ವರ್ಡ್ ನಿರ್ವಾಹಕವನ್ನು ಬಳಸುವುದನ್ನು ಸಹ ನೀವು ಪರಿಗಣಿಸಬಹುದು.